Ticker

6/recent/ticker-posts

Ad Code

Responsive Advertisement

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ: ನನಗೆ ವಿಶ್ವಾಸ ಇದೆ-ನನ್ನ ಗೆಲುವು ಖಚಿತ: ಮುಲ್ಲಂಗಿ ನಂದೀಶ್

ಬಳ್ಳಾರಿ ಏ 25:ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆ  18 ನೇ ವಾರ್ಡ್ ಕಾಂಗ್ರೆಸ್  ಅಭ್ಯರ್ಥಿ ಮುಲ್ಲಂಗಿ ನಂದೀಶ  ಅವರ ಪರ ಗ್ರಾಮೀಣ ಶಾಸಕಬಿ.ನಾಗೇಂದ್ರ ,ಆಂಜನೇಯುಲು ಅವರು ಶನಿವಾರ ವಾರ್ಡ್‍ನ ಬಿಸಿಲಳ್ಳಿ ಮತ್ತು ಇನ್ನಿತರ ಕಡೆ ಮನೆ ಮನೆಗೆ ತೆರಳಿ ಮತಯಾಚಿಸಿದರು. ವಾರ್ಡ್ ವ್ಯಾಪ್ತಿಯ  ಬಿಸಲಹಳ್ಳಿ, ಜನತಾ ನಗರದಲ್ಲಿ  ಮತಯಾಚಿಸಿ ಶಾಸಕ ನಾಗೇಂದ್ರನವರು ಮಾತನಾಡುತ್ತಾ ಮುಲ್ಲಂಗಿ ನಂದೀಶ್ ಅವರನ್ನು ಹೆಚ್ಚಿನ ಬಹುಮತದಿಂದ ಆರಿಸಿ ತರಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.  ಅಭ್ಯರ್ಥಿ ನಂದೀಶ್ ಮುಲ್ಲಂಗಿ ಅವರು ಭರ್ಜರಿಯಾಗಿ ಜನರ ಅಭಿಮಾನಗಳನ್ನು, ಸ್ನೇಹವನ್ನು, ಸೌಹಾರ್ದವನ್ನು ಮನೆಮನೆಗೆ ತೆರಳಿ ತಮ್ಮ ಕಷ್ಟಸುಖಗಳನ್ನು ಆಲಿಸಿದರು.ವಾರ್ಡಿನ ಮೂಲಭೂತ ಸೌಕರ್ಯಗಳು ಸಮಸ್ಯೆಗಳು ಕಾಡದಂತೆ ನೋಡಿಕೊಳ್ಳುವ ಜವಾಬ್ಧಾರಿ ನನ್ನದು ಎಂದು ಭರವಸೆ ನೀಡಿದರು.


ನಾನು ನನ್ನ ವಾರ್ಡನ್ನು ಮಾದರಿ ವಾರ್ಡ್ ಆಗಿ ಮಾಡುತ್ತೇನೆ ಎಂದು, ನಾನು ನಿರ್ಮಾಣ ಮಾಡಿದನಂತರ ಉಳಿದ 38 ವಾರ್ಡಿನ ಸದಸ್ಯರು ಬಂದು ನನ್ನ ವಾರ್ಡನ್ನು ನಿಂತು ನೋಡಬೇಕಾಗುತ್ತದೆ ಎಂದರು. ಅದೇ ರೀತಿ ಬಿಜೆಪಿ ಸರ್ಕಾರ ವಿರುದ್ಧ ಹಾಗೂ ಸೋಮಶೇಖರ್ ರೆಡ್ಡಿ ,ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಅತೀ ಸೂಕ್ಷ್ಮ ವಾಗಿರಬೇಕೆಂದು, ನಿಮ್ಮ ವಾರ್ಡ್‍ನ ಅಭಿವೃಧ್ದಿ ಯಾರು ಮಾಡಬಹುದೆಂದು ಕುಟುಂಬದವರೆಲ್ಲಾ ಕೂತು ಚರ್ಚೆ ಮಾಡಿ ಮತ ಹಾಕಬೇಕೆಂದರು. ಕರೋನಾ ವಾರಿಯರ್ಸಗೆ, ಸಮಾಜಮುಖಿ ಯಾಗಿರುವವರಿಗೆ ಬಿ.ಜೆ.ಪಿ,ಕಾಂಗ್ರೆಸ್,ಜೆ.ಡಿ.ಎಸ್,ಸ್ವತಂತ್ರ ಅಭ್ಯರ್ಥಿ ಯಾರೇ ಆಗಿರಲಿ ನಿಮ್ಮ ಅಮೂಲ್ಯವಾದ ಮತವನ್ನು   ಕೊವಿಡ್ ನಂತಹ ಪ್ರಕೃತಿ ವಿಕೋಪಗಳ ಸಂಧರ್ಭದಲ್ಲಿ ನಿಮ್ಮ ದನಿಯಾಗುವವರಿಗೆ ನಿಮ್ಮಮತ ನೀಡಬೇಕೆಂದು,500-1000,ಸೀರೆ, ಕುಬ್ಬಸ, ಅಕ್ಕಿ ಪ್ಯಾಕೆಟ್ ಗಳಿಗೆ, ಮೂಗುತಿಗಳಿಗೆ, ಕ್ಯಾನವಾಸಿಂಗ್ ಕೂಲಿಗೆ, ಬೆದರಿಕೆಗಳಿಗೆ ಸೋಲದಿರಿ ಎಂದರು. ನಿಮ್ಮ ಬದುಕು ನಿಮ್ಮಕೈಯಲ್ಲಿ ಎಂದು ಮಹಾನಗರ ಪಾಲಿಕೆಯ ಮಹಾಜನತೆಗೆ ಒಂದು ಕಿವಿಮಾತನ್ನು ಹೇಳಿದರು. ನನ್ನ ಈ ಪ್ರಚಾರದ ಸಮಯದಲ್ಲಿ ನನ್ನ ಶ್ರೀಮತಿ ಸುಧಾರಾಣಿ ಅವರ ಸಹಕಾರ ನನ್ನಗಿಂತಲು ಹೆಚ್ಚಿಗೆ ಇದೆ, ನಮ್ಮ ವಾರ್ಡಿನ ಪ್ರತಿ ಮನೆ ಮನೆಗೆ ಹೋಗಿ ಮಾತಯಾಚನೆ ಮಾಡಿದ್ದಾರೆ,ಮತದಾರರ ಕಷ್ಟ ಸುಖಗಳನ್ನು ಆಲಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬುಡಾ ಮಾಜಿ ಅಧ್ಯಕ್ಷ ಜೆ.ಎಸ್ ಆಂಜನೇಯಲು,ಆನಂದ್ ಚೌದರಿ ಸೇರಿದಂತೆ    ಮುಖಂಡರಾದ ಟಿ.ಸುರೇಶ್, ಕೆ.ನಾಗೇಂದ್ರಪ್ಪ, ಜೆ. ಎರ್ರಿಸ್ವಾಮಿ, ದೇವಣ್ಣ, ಕೆ.ನರೇಶ, ಹಾಗೂ ವಾರ್ಡ್ ಕಾಂಗ್ರೆಸ್  ಮುಖಂಡರು ಇತರರು ಉಪಸ್ಥಿತರಿದ್ದರು.

 ವರದಿ.ಪಂಪನಗೌಡ.ಬಿ.ಬಳ್ಳಾರಿ.9886633682. 


 


Post a Comment

0 Comments

Ad Code

Responsive Advertisement