Ticker

6/recent/ticker-posts

Ad Code

Responsive Advertisement

ಬಿಜೆಪಿ ಸರ್ಕಾರದಿಂದ ಜನರ ಜೀವ, ಜೀವನ ರಕ್ಷಣೆ ಸಾಧ್ಯವಿಲ್ಲ: ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು – ಎಂ.ಎಸ್. ರಕ್ಷಾ ರಾಮಯ್ಯ

ಬೆಂಗಳೂರುಏ 19; ರಾಜ್ಯದಲ್ಲಿ ಕೋವಿಡ್ -19 ಸೋಂಕಿನ ಎರಡನೇ ಅಲೆ ವ್ಯಾಪಕವಾಗಿದ್ದು, ಹಿಂದೆಂದೂ ಇಲ್ಲದಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾವು ನೋವು ಸಂಭವಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಕೂಡಲೇ ಜನರ ಜೀವ, ಜೀವನ ರಕ್ಷಣೆಗೆ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸಮರೋಪಾದಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಆಗ್ರಹಿಸಿದ್ದಾರೆ.

ಉಪ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದ ಮುಖ್ಯಮಂತ್ರಿ ಒಳಗೊಂಡಂತೆ ಹಲವರು ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ಉಪಮುಖ್ಯಮಂತ್ರಿ ಸೇರಿ ಹಲವರು ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಆಡಳಿತಾರೂಢ ಬಿಜೆಪಿ ಸರ್ಕಾರವೇ ಕೊರೋನಾ ಪೀಡಿತವಾಗಿದೆ. ಹೀಗಿರುವಾಗ ಜನ ಸಾಮಾನ್ಯರ ರಕ್ಷಣೆ ಹೇಗೆ ಎನ್ನುವ ಆತಂಕ ಪರಿಸ್ಥಿತಿ ಇದೆ.  ಇಂತಹ ಸನ್ನಿವೇಶದಲ್ಲಿ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದಿದ್ದಾರೆ.

ಈಗಿನ ಗಂಭೀರ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಸರ್ಕಾರ ಅಸ್ಥಿತ್ವದಲ್ಲಿರುವ ಬಗ್ಗೆಯೇ ಜನರಿಗೆ ಅನುಮಾನ ಮೂಡುತ್ತಿದೆ. ಜನರ ಜೀವ, ಜೀವನ ರಕ್ಷಣೆ ವಿಚಾರದಲ್ಲಿ ಏನು ಮಾಡಬೇಕು ಎಂದು ತೋಚದೇ ಆಡಳಿತ ನಡೆಸುವವರು ದಿಕ್ಕಾಪಾಲಾಗಿದ್ದಾರೆ. ಮುಖ್ಯಮಂತ್ರಿ ಅವರ ಅನುಪಸ್ಥಿತಿಯಲ್ಲಿ ಆರೋಗ್ಯ, ಇನ್ನಿತರ ಇಲಾಖಾ ಸಚಿವರು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಹೀಗಿರುವಾಗ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಸಮರೋಪಾದಿಯಲ್ಲಿ ಸಭೆಗಳನ್ನು ನಡೆಸಿ ಆಡಳಿತ ಯಂತ್ರಕ್ಕೆ ಸೂಕ್ತ ನಿರ್ದೇಶಗಳನ್ನು ನೀಡಬೇಕು ಎಂದಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನಿಂದ ಮೃತಪಟ್ಟವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನಡೆಸಲು ಸಾಧ್ಯವಾದ ಪರಿಸ್ಥಿತಿ ಇದೆ. ಶವಾಗಾರಗಳಲ್ಲಿ ಸೋಂಕಿನಿಂದ ಮೃತರಾದ ಶವಗಳನ್ನು ಸೂಕ್ತ ರೀತಿಯಲ್ಲಿ ಹಸ್ತಾಂತರ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ವಿದ್ಯುತ್ ಚಿತಾಗಾರಗಳಲ್ಲಿ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಸಾಲುಗಟ್ಟಿ ನಿಂತಿರುವ ದೃಷ್ಯ ಸರ್ವೇ ಸಾಮಾನ್ಯವಾಗಿದೆ. ಮೃತಪಟ್ಟ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ. ಕೊರೋನಾ ಮರಣ ಮೃದಂಗ ಭಾರಿಸುತ್ತಿದೆ. ನೋಂದವರನ್ನು ಸಂತೈಸಲು ಸಾಧ್ಯವಾಗದೇ ಅತ್ಯಂತ ದುಃಖದ ಸ್ಥಿತಿ ಕಂಡು ಬಂದಿದೆ ಎಂದು ಎಂ.ಎಸ್. ರಕ್ಷಾ ರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ನಗರದಾದ್ಯಂತ ಎಲ್ಲಿ ನೋಡಿದರೂ ಆಂಬ್ಯುಲೆನ್ಸ್ ಗಳ ಸೈರನ್ ಸದ್ದು ಮೊಳಗುತ್ತಿದೆ. ಕೊರೋನಾ ಸೋಂಕಿತರನ್ನು ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸುತ್ತಿರುವುದು ಎಲ್ಲೆಡೆ ಕಂಡು ಬರುತ್ತಿದೆ. ಕೊರೋನಾ ಸೋಂಕಿತರು ಹಾಸಿಗೆಗಳಿಗಾಗಿ ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಅಲೆದಾಡುವ ಸನ್ನಿವೇಶ ಇದೆ. ಸೋಂಕಿತರಿಗೆ ಎಲ್ಲಿಯೂ ಬೆಡ್ ಗಳು ದೊರೆಯುತ್ತಿಲ್ಲ. ಬಿಬಿಎಂಪಿ, ಕೊರೋನಾ ಸಹಾವಾಣಿ ಕೇಂದ್ರಗಳು ಸೋಂಕಿಗೆ ಒಳಗಾಗಿರುವ ಸಂಬಂಧಿಕರಿಗೆ ಉತ್ತರ ನೀಡಲು ಸಾಧ್ಯವಾಗದೇ ಕೈ ಚೆಲ್ಲಿ ಕುಳಿತಿವೆ. ವೈದ್ಯಕೀಯ ಆರೈಕೆ ಇಲ್ಲದೇ ಸೋಂಕಿತರು ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸೋಂಕಿತರ ರಕ್ಷಣೆಗೆ ಸರ್ಕಾರ ಕೂಡಲೇ ಆರೈಕೆ ಕೇಂದ್ರಗಳನ್ನು ತೆರೆಯಬೇಕು. ಕಳೆದ ವರ್ಷ ಬೆಂಗಳೂರಿನ ತುಮಕೂರು ರಸ್ತೆಯ ಬಿಐಇಸಿ ಸೆಂಟರ್ ನಲ್ಲಿ ದೇಶದ ಅತೀ ದೊಡ್ಡ ಕೊರೋನಾ ಸೋಂಕಿತರ ಆರೈಕೆ ಕೇಂದ್ರವನ್ನು ಬಿಜೆಪಿ ಸರ್ಕಾರ ಸ್ಥಾಪಿಸಿತ್ತು. ಬಳಿಕ ನೆಪ ಹೇಳಿ ಇದನ್ನು ಮುಚ್ಚಲಾಗಿತ್ತು. ಒಂದೇ ಕಡೆ 10,100 ಹಾಸಿಗೆ ಸಾಮರ್ಥ್ಯ ಸೃಷ್ಟಿಸಲಾಗಿತ್ತು. ಅಲ್ಲಿ ಸಾಕಷ್ಟು ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಈಗಲೂ ಅದು ಸುಸಜ್ಜಿತವಾಗಿದ್ದರೆ ದಯವಿಟ್ಟು ಈ ಕೇಂದ್ರ ತೆರೆದು ಜನರ ಪ್ರಾಣ ಉಳಿಸಿ.   ಆರೈಕೆ ಕೇಂದ್ರದ ಕಾಮಗಾರಿ ಜುಲೈನಲ್ಲಿ ಪೂರ್ಣಗೊಂಡಿತ್ತುಆದರೆ ಸೆಪ್ಟಂಬರ್‌ 15 ನಂತರ ಬಿಐಇಸಿ ಕೋವಿಡ್‌ ಕೇರ್‌ ಸೆಂಟರ್ನ್ನು ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ಪುನಃ ಜೀವ ನೀಡಿ. ಸೋಂಕಿತರ ರಕ್ಷಣೆಗೆ ಇಂತಹ ಹಲವು ವ್ಯವಸ್ಥೆಗಳನ್ನು ಸರ್ಕಾರ ಕೂಡಲೇ ಜಾರಿ ಮಾಡಬೇಕು ಎಂದು ರಕ್ಷಾ ರಾಮಯ್ಯ ಆಗ್ರಹಿಸಿದ್ದಾರೆ. 


x

Post a Comment

0 Comments

Ad Code

Responsive Advertisement