ನಾವೀನ್ಯತೆ, ಅತ್ಯುತ್ತಮದರ್ಜೆಯ ಸೇವೆಯ ಮೇಲೆ ಗಮನ ಕೇಂದ್ರೀಕರಿಸಿದ ಉದ್ಯಮದ ಪ್ರವರ್ತಕ; ಭಾರತದಲ್ಲಿಅತ್ಯಾಧುನಿಕ 60,000 ಯಂತ್ರಗಳ ಸರಬರಾಜಿನ ದಾಖಲೆ
ಮುಂಬೈ, ಏಪ್ರಿಲ್ 19, 2021: ಎಂಜಿನಿಯರಿಂಗ್, ಗುತ್ತಿಗೆ ಪಡೆಯುವ, ನಿರ್ಮಾಣ (ಇಪಿಸಿ) ಯೋಜನೆಗಳು ಮತ್ತುಅತ್ಯಾಧುನಿಕ ಯಂತ್ರೋಪಕರಣಗಳ ತಯಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಭಾರತದ ಬಹುರಾಷ್ಟ್ರೀಯ ಕಂಪನಿ ಲಾರ್ಸೆನ್‍ಆ್ಯಂಡ್‍ಟುಬ್ರೊ (ಎಲ್‍ಆ್ಯಂಡ್‍ಟಿ) ತನ್ನ ಹಳೆಯ ವ್ಯವಹಾರಗಳಲ್ಲಿ ಒಂದಾದ ನಿರ್ಮಾಣ ಮತ್ತುಗಣಿಗಾರಿಕೆಯ ಯಂತ್ರೋಪಕರಣಗಳ 75 ವರ್ಷಗಳನ್ನು ಪೂರ್ಣಗೊಳಿಸಿದೆ.
ಕಳೆದ 75 ವರ್ಷಗಳಲ್ಲಿ ನಿರ್ಮಾಣ ಮತ್ತುಗಣಿಗಾರಿಕೆಉದ್ಯಮದ ಸಹಯೋಗದಲ್ಲಿ ವಿವಿಧ ಬಗೆಯ 60,000 ಯಂತ್ರೋಪಕರಣಗಳನ್ನು ಪೂರೈಸಿದೆ.ಅಸಾಧಾರಣ ವಿನ್ಯಾಸದಅಭಿವೃದ್ಧಿಯ ಹೆಗ್ಗುರುತುಗಳಾಗಿರುವ ಬೃಹತ್ ಯೋಜನೆಗಳಲ್ಲಿ ಈ ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ.ರಾಷ್ಟ್ರದ ಹೆಚ್ಚುತ್ತಿರುವ ಮೂಲಸೌಕರ್ಯಗಳಿಗೆ ಗಮನಾರ್ಹವಾಗಿ ಕೊಡುಗೆಗಳನ್ನೂ ನೀಡುತ್ತಿವೆÉ.
ಈ ಸಂದರ್ಭದಲ್ಲಿ ಮಾತನಾಡಿರುವಲಾರ್ಸೆನ್‍ಆ್ಯಂಡ್‍ಟುಬ್ರೊದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವಎಸ್.ಎನ್. ಸುಬ್ರಮಣಿಯನ್‍ಅವರು, ‘ರಾಷ್ಟ್ರ ನಿರ್ಮಾಣದಲ್ಲಿಅತ್ಯಂತ ಮಹತ್ವದ ಪಾತ್ರ ನಿರ್ವಹಿಸುವ ಪ್ರಮುಖ ಯಂತ್ರೋಪಕರಣಗಳ ಅಗತ್ಯ ಪೂರೈಸುವಲ್ಲಿಎಲ್‍ಆ್ಯಂಡ್‍ಟಿ ಬಹುದೊಡ್ಡ ಪರಂಪರೆಯನ್ನು ಹೊಂದಿದೆ. ಎಂಜಿನಿಯರಿಂಗ್ ವಿನ್ಯಾಸ ಮತ್ತುತಯಾರಿಕೆ ಸಾಮಥ್ರ್ಯವನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿಇದೆ. ನಮ್ಮ ನಿರ್ಮಾಣ ಮತ್ತುಗಣಿಗಾರಿಕೆ ಯಂತ್ರೋಪಕರಣಗಳ ವ್ಯವಹಾರವುಗಣಿಗಾರಿಕೆ ಮತ್ತು ನಿರ್ಮಾಣ ವಲಯದ ಅಗತ್ಯಗಳನ್ನು ಕಳೆದ 75 ವರ್ಷಗಳಿಂದ ನವೀನ ಉಪಕರಣಗಳು ಮತ್ತು ಶ್ಲಾಘನೀಯ ಸೇವಾ ದಾಖಲೆಗಳೊಂದಿಗೆ ಪೂರೈಸುತ್ತಿರುವುದಕ್ಕೆ ನಾವು ಸಂತಸಪಡುತ್ತೇವೆ’ ಎಂದು ಹೇಳಿದ್ದಾರೆ.
‘ಸಿಎಂಬಿ’ಯ ಅದ್ಭುತ ಪ್ರಯಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದ ಎಲ್‍ಆ್ಯಂಡ್‍ಟಿ ನಿರ್ಮಾಣ ಮತ್ತುಗಣಿಗಾರಿಕೆ ಯಂತ್ರೋಪಕರಣಗಳ ಕಾರ್ಯನಿರ್ವಾಹಕಉಪಾಧ್ಯಕ್ಷಅರವಿಂದ್ ಕೆ ಗರ್ಗ್‍ಅವರು ಮಾತನಾಡಿ, ‘ಕಳೆದ ಏಳು ದಶಕಗಳಲ್ಲಿ ನಮ್ಮ ಮೌಲ್ಯಯುತಗ್ರಾಹಕರಿಗೆ ಬದ್ಧತೆಯಿಂದ ಸೇವೆ ಸಲ್ಲಿಸಲಾಗಿದೆ. ದೇಶದಅಭಿವೃದ್ಧಿಗೆಜಾಗತಿಕ ತಂತ್ರಜ್ಞಾನಗಳು, ಉಪಕರಣಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿಇರುವಕಂಪನಿಯುದೇಶದಅಭಿವೃದ್ಧಿಗೆಅಮೂಲ್ಯಕೊಡುಗೆ ನೀಡಿದೆ. ಈ ಮಹತ್ವದಘಟ್ಟದಲ್ಲಿ ನಮ್ಮಗ್ರಾಹಕರ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ನಾವು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ’ ಎಂದು ಹೇಳಿದ್ದಾರೆ.
ಎಲ್‍ಆ್ಯಂಡ್‍ಟಿ, 1945ರಿಂದ ತನ್ನ ಆಳವಾದ ಜ್ಞಾನ ಮತ್ತುಅನುಭವ ಬಳಸಿಕೊಂಡು ತನ್ನದೇಆದ ‘ಭಾರತದಲ್ಲಿಯೇ ತಯಾರಿಸಿ’ ಪರಿಕಲ್ಪನೆ ಜಾರಿಗೊಳಿಸುವ ಮೂಲಕ ವೈಬ್ರೆಟರಿಕಾಂಪ್ಯಾಕ್ಟರ್ಸ್ ಮತ್ತು ವ್ಹೀಲ್ ಲೋಡರ್ಸ್ ಸೇರಿದಂತೆರಸ್ತೆ ನಿರ್ಮಾಣದ ಯಂತ್ರೋಪಕರಣಗಳನ್ನೂ ಅಭಿವೃದ್ಧಿಪಡಿಸಿದೆ.ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ಯಂತ್ರೋಪಕರಣಗಳು ಈಗ ರಸ್ತೆ ನಿರ್ಮಾಣ ಮತ್ತು ಹೆದ್ದಾರಿಅಭಿವೃದ್ಧಿಗೆನೆರವಾಗುತ್ತಿವೆ. ‘ಸ್ವಾವಲಂಬನೆಯ ಭಾರತ್' ನಿರ್ಮಾಣದರಾಷ್ಟ್ರೀಯಉದ್ದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿಎಲ್‍ಆ್ಯಂಡ್‍ಟಿ ಮುನ್ನಡೆಯಲು ನೆರವಾಗುತ್ತಿವೆÉ.
ಕಂಪನಿಯು 1973ರಲ್ಲಿ ಪೊಕ್ಲೇನ್‍ಎಸ್‍ಎ-ಫ್ರಾನ್ಸ್ ಸಹಯೋಗದಲ್ಲಿ ಹೈಡ್ರಾಲಿಕ್‍ಎಕ್ಸ್‍ಕವೇಟರ್ ಯಂತ್ರಗಳನ್ನು ಪರಿಚಯಿಸುವ ಮೂಲಕ ನಿರ್ಮಾಣಕ್ಷೇತ್ರದಲ್ಲಿ ಪ್ರಮುಖ ಹೆಜ್ಜೆಇಟ್ಟಿತು.ದೇಶದಲ್ಲಿ ಮೊದಲ ಬಾರಿಗೆಜಾರಿಗೆತಂದಕ್ರಾಂತಿಕಾರಿಯಾದಉಪಕ್ರಮಇದಾಗಿತ್ತು.ಈ ಮೂಲಕ ಭೂಮಿಅಗೆಯುವಲ್ಲಿ ಸಂಪೂರ್ಣವಾಗಿ ಹೊಸ ಪರಿಕಲ್ಪನೆಯನ್ನುಜಾರಿಗೆತರಲಾಗಿತ್ತು.ಇದು ಮೂಲಸೌಕರ್ಯ ನಿರ್ಮಾಣ ರಂಗದಲ್ಲಿ ಎಲ್‍ಆ್ಯಂಡ್‍ಟಿಅನ್ನು ಅಭಿವೃದ್ಧಿ ಕಾರ್ಯತಂತ್ರದ ಪ್ರಮುಖ ಪಾಲುದಾರನನ್ನಾಗಿ ಮಾಡಿತು.ಇದರಜತೆಗೆಆಲ್ಬಾರೆಟ್-(ಫ್ರಾನ್ಸ್), ಜೆಐಕೇಸ್ (ಅಮೆರಿಕ) , ವೈಬ್ರೊಮ್ಯಾಕ್ಸ್-(ಜರ್ಮನಿ) ಮತ್ತುಅಮೆರಿಕದಡೆಟ್ರಾಯಿಟ್‍ಡೀಸೆಲ್ ಕಂಪನಿ ಜತೆ ಪಾಲುದಾರಿಕೆಯನ್ನೂ ಮಾಡಿಕೊಂಡಿತು.
ನಂತರ 1998ರಲ್ಲಿ, ಎಂಜಿನಿಯರಿಂಗ್ ಕ್ಷೇತ್ರದ ಎರಡುದೈತ್ಯ ಕಂಪನಿಗಳಾದ ಕೊಮಾತ್ಸು ಮತ್ತು ಎಲ್ ಆ್ಯಂಡ್‍ಟಿ ಜತೆಯಾಗಿ ಕೊಮಾತ್ಸುವಿನ ಅತ್ಯಾಧುನಿಕ, ವಿಶ್ವದರ್ಜೆಯ ಭಾರಿ ಯಂತ್ರೋಪಕರಣಗಳನ್ನು ತಯಾರಿಸಲುಜಂಟಿ ಉದ್ಯಮ ಸ್ಥಾಪಿಸಿದವು. ಕೊಮಾತ್ಸ್ಸುವಿನ ಭೂಮಿಅಗೆಯುವ ಪಿಸಿ200-6 ಯಂತ್ರವುಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಬಾಳಿಕೆಯ ಹೊಸ ಮಾನದಂಡವಾಗಿ ಹೊರಹೊಮ್ಮಿತಲ್ಲದೆ ನಿರ್ಮಾಣಕ್ಷೇತ್ರದಲ್ಲಿನ ಅಪ್ರತಿಮ ಮಾದರಿಯಂತ್ರವಾಗಿ ಗಮನ ಸೆಳೆಯಿತು.ನಂತರದ ವರ್ಷಗಳಲ್ಲಿ ಪಿಸಿ71, ಪಿಸಿ130, ಪಿಸಿ300 ಮತ್ತು ಪಿಸಿ450 ನಂತಹ ಹಲವಾರು ಮಾದರಿಗಳ ಅಗೆಯುವ ಯಂತ್ರಗಳನ್ನು ಮಾರುಕಟ್ಟೆಗೆ ಪರಿಚಯಿಸುವದರೊಂದಿಗೆ, ಎಲ್‍ಆ್ಯಂಡ್‍ಟಿಇಂತಹ ಯಂತ್ರೋಪಕರಣಗಳ ತಯಾರಿಕಾಕ್ಷೇತ್ರದಲ್ಲಿ ನಾಯಕತ್ವದ ಸ್ಥಾನಕ್ಕೆ ಏರಿತು.25,000ಕ್ಕೂ ಹೆಚ್ಚು ಮೌಲ್ಯಯುತ ಮತ್ತು ನಿಷ್ಠಾವಂತಗ್ರಾಹಕರದೊಡ್ಡ ನೆಲೆಯನ್ನೂ ನಿರ್ಮಿಸಿತು.
ಹೊಸತನಗಳನ್ನು ಪರಿಚಯಿಸುವ ಉತ್ಸಾಹದಿಂದಲೇ ಮುಂದುವರೆದಿದ್ದಎಲ್‍ಆ್ಯಂಡ್‍ಟಿ ಇತ್ತೀಚೆಗೆ ಕೊಮಾತ್ಸು ಪಿಸಿ210-10ಎಂಒ ಹೈಡ್ರಾಲಿಕ್‍ಅಗೆಯುವಯಂತ್ರವನ್ನು ಪರಿಚಯಿಸಿತು. ಇದುಕೂಡ ಭಾರಿಯಶಸ್ಸನ್ನು ಗಳಿಸಿದೆ.22-ಟನ್ ವಿಭಾಗದಲ್ಲಿಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾದರಿಯಾಗಲುಎಲ್ಲಾ ದಾಖಲೆಗಳನ್ನು ಉಲ್ಲಂಘಿಸಿ, 10 ತಿಂಗಳ ಅವಧಿಯಲ್ಲಿ 1000 ಅಂಕಗಳನ್ನು ಗಳಿಸಿದೆ.ಈಗ ಮಾರುಕಟ್ಟೆ ನಾಯಕನಾಗುವ ಹಾದಿಯಲ್ಲಿ ಯಶಸ್ವಿಯಾಗಿ ಮುನ್ನಡೆದಿದೆ.
ಭಾರತದಲ್ಲಿ ಖನಿಜಗಳ ಗಣಿಗಾರಿಕೆ ಚಟುವಟಿಕೆಗಳು ವಿಸ್ತರಿಸಿದಂತೆ, ಕೊಮಾತ್ಸ್ಸು ಮತ್ತು ಎಲ್ ಆ್ಯಂಡ್ ಟಿ ಜತೆಯಾಗಿ ಗಣಿಗಾರಿಕೆಯ ಹೆಚ್ಚು ಸುರಕ್ಷಿತ, ಪರಿಸರ ಸ್ನೇಹಿ ಮತ್ತು ಸುಸ್ಥಿರ ವಹಿವಾಟಿಗೆ ನೆರವಾಗುತ್ತಿವೆ. ಇದೇಉದ್ದೇಶದಿಂದಗಣಿಗಾರಿಕೆಯಲ್ಲಿ ಬಳಸುವ ಡಂಪ್‍ಟ್ರಕ್ ಎಚ್‍ಡಿ785, ಡೋಜರ್ ಮಾದರಿಗಳು ಡಿ155 ಮತ್ತು ಡಿ 475, ಅಗೆಯುವ ಮಾದರಿಗಳು ಪಿಸಿ1250 ಮತ್ತು ಪಿಸಿ 2000 ಮುಂತಾದ ಭಾರಿ ಯಂತ್ರಗಳನ್ನು ಪರಿಚಯಿಸಿದವು. ಈ ಯಂತ್ರಗಳು ಗ್ರಾಹಕರ ನಿವೇಶನಗಳಲ್ಲಿ ಕಾರ್ಯಕ್ಷಮತೆ, ಉತ್ಪಾದಕತೆ ಮತ್ತು ದೀರ್ಘಾವಧಿಯ ಕಾರ್ಯ ನಿರ್ವಹಣೆಯಲ್ಲಿ ಹೊಸ ಮಾನದಂಡಗಳನ್ನು ರಚಿಸಿವೆ. ಭಾರಿ ಪ್ರಮಾಣದ ಗಣಿಗಾರಿಕೆ ಕಾರ್ಯಾಚರಣೆಗಾಗಿಎಲ್‍ಆ್ಯಂಡ್‍ಟಿ ಕೊಮಾತ್ಸುವಿನ ಬೃಹತ್ 240 ಟನ್‍ದರ್ಜೆಯ 830ಇ ಡಂಪ್‍ಟ್ರಕ್ಸ್ ಮತ್ತು 16 ಕ್ಯುಯುಎಂಕ್ಲಾಸ್ ಪಿಸಿ3000 ಹೈಡ್ರಾಲಿಕ್ ಅಗೆಯುವ ಯಂತ್ರಗಳನ್ನು ವಿತರಿಸಿದೆ.ಎರಡೂ ಕಂಪನಿಗಳು ಜತೆಯಾಗಿ ಅಭಿವೃದ್ಧಿಪಡಿಸಿರುವÀ ಈ ಭಾರಿ ಯಂತ್ರೋಪಕರಣಗಳ ಸಾಮಥ್ರ್ಯವುಕಾಲಾನಂತರದಲ್ಲಿ ಸರಿಸಾಟಿಇಲ್ಲದ ಬಗೆಯಲ್ಲಿ ಸಾಬೀತಾಗಿದೆ.
ಹೆಚ್ಚುತ್ತಿರುವ ಕಲ್ಲಿದ್ದಲು ಉತ್ಪಾದನೆಯಅಗತ್ಯವನ್ನು ಪೂರೈಸಲು, ಕಲ್ಲಿದ್ದಲುಗಣಿಗಾರಿಕೆ ಕಂಪನಿಗಳು ಗುತ್ತಿಗೆದಾರರ ಮೇಲಿನ ಅತಿಯಾದ ಹೊರೆಯನ್ನುಕಡಿಮೆ ಮಾಡಲುಕಾರ್ಯೋನ್ಮುಖವಾದವು. ಇದನ್ನು ಕಾರ್ಯಗತಗೊಳಿಸಲು ಗಣಿಗಾರಿಕೆಉದ್ದೇಶಕ್ಕೆಂದೇ ಬಳಸುವ ಟಿಪ್ಪರ್‍ಗಳ ಹೊಸ ವಿಭಾಗದಅಗತ್ಯವಿತ್ತು.ಇದುಕೊಮಾತ್ಸುವಿನ ಪಿಸಿ450 ಅಗೆಯುವ ಯಂತ್ರದೊಂದಿಗೆ ಚೆನ್ನಾಗಿ ಹೊಂದಿಕೆಯಾಯಿತು.ಎಲ್ ಆ್ಯಂಡ್‍ಟಿ ತನ್ನ ಇತ್ತೀಚಿನ ಪೀಳಿಗೆಯ ಟಿಪ್ಪರ್‍ಟ್ರಕ್‍ಅನ್ನು ನೀಡಲು ಸ್ಕ್ಯಾನಿಯಾಜತೆಗೆ ಮೈತ್ರಿ ಮಾಡಿಕೊಂಡಿದೆ.ಗಣಿಗಾರಿಕೆ ಚಟುವಟಿಕೆಗಳಲ್ಲಿನ ಇದರಅಸಾಧಾರಣಕಾರ್ಯಕ್ಷಮತೆ, ಕಡಿಮೆ ವೆಚ್ಚ, ನಿರ್ವಾಹಕರಆರಾಮ ಮತ್ತು ಸುರಕ್ಷತೆಗಾಗಿ ಹೆಚ್ಚು ಜನಪ್ರಿಯವಾಗಿದೆ.
ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಎಲ್‍ಆ್ಯಂಡ್‍ಟಿ, `ಸೇವೆಯಲ್ಲಿಯೇ, ಯಶಸ್ಸು ಅಡಗಿದೆ’ ಎನ್ನುವುದರಲ್ಲಿ ನಂಬಿಕೆ ಹೊಂದಿರುವ ಸುದೀರ್ಘ ಪರಂಪರೆ ಹೊಂದಿದೆ. ನಿರ್ಮಾಣ ಮತ್ತು ಭಾರಿ ಪ್ರಮಾಣದಲ್ಲಿ ಇರುವಗಣಿಗಾರಿಕೆ ಯಂತ್ರಗÀಳಿಗೆ ಅಗತ್ಯ ಬೆಂಬಲ ನೀಡಲು ಎಲ್‍ಆ್ಯಂಡ್‍ಟಿ ಮಾರಾಟ ನಂತರದ ಮತ್ತು ಸರ್ವಿಸ್ ಬೆಂಬಲಿಸಲು ಸದೃಢ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿತು.ಕಂಪನಿಯು ಈಗ ಆರು ವಿಶ್ವದರ್ಜೆಯ ಸರ್ವಿಸ್ ಕೇಂದ್ರಗಳನ್ನು ಹೊಂದಿದೆ. ಹೆಚ್ಚು ನುರಿತ ಮತ್ತು ಅನುಭವಿ ಸೇವಾ ಎಂಜಿನಿಯರ್ ಗಳ ತಂಡ, ಕೇಂದ್ರೀಯ ತರಬೇತಿ ಕೇಂದ್ರ, ನಿರ್ಮಾಣ ಸಲಕರಣೆಗಳಿಗಾಗಿ 30 ಮಾರಾಟಗಾರರು ಮತ್ತು ಭಾರತದಾದ್ಯಂತ ಬಿಡಿಭಾಗಗಳ ಡಿಪೋಗಳ ಜಾಲವನ್ನು ಹೊಂದಿದೆ. ಯಂತ್ರದ ಸಮಯ ಮತ್ತು ಬಳಕೆಯಲ್ಲಿ ನಿಜವಾದ ವ್ಯತ್ಯಾಸಇರುವುದು ಇದರಿಂದ ಸಾಬೀತಾಗಿದೆ.



0 Comments