Ticker

6/recent/ticker-posts

Ad Code

Responsive Advertisement

ಹಜ್ ಭವನದ ಆರೈಕೆ ಕೇಂದ್ರಕ್ಕೆ ಆರ್ ಅಶೋಕ್ ಭೇಟಿ



ನಗರದಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕನ್ನು ನಿಯಂತ್ರಿಸುವುದರ ಜೊತೆಗೆ ಸೋಂಕಿತರ ಸೂಕ್ತ ಆರೈಕೆಗೆ ಶ್ರಮಿಸುತ್ತಿರುವ ರಾಜ್ಯ ಸರ್ಕಾರ ಆ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನ ಅನುಸರಿಸುತ್ತಿದೆ. ಸೋಂಕಿತರಿಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲಾ ಕ್ರಮಗಳನ್ನ ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.


ಅವರು ನಗರದ ಹಜ್ ಭವನಕ್ಕೆ ಭೇಟಿ ನೀಡಿ ಅಲ್ಲಿ ಸಿದ್ಧಪಡಿಸಲಾಗುತ್ತಿರುವ ಕೋವಿಡ್ ಆರೈಕೆ ಕೇಂದ್ರದ ವ್ಯವಸ್ಥೆಗಳನ್ನ ಪರಿಶೀಲಿಸದರು. ಈ ವೇಳೆ ಮಾಹಿತಿ ನೀಡಿದ ಸಚಿವರು, "ಸುಮಾರು 1 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಲಾಗುತ್ತಿರುವ ಈ ಆರೈಕೆ ಕೇಂದ್ರವು, 147 ಹೈ ಫ್ಲೋ ಆಕ್ಸಿಜೆನ್ ಬೆಡ್ ಗಳ ವ್ಯವಸ್ಥೆಯನ್ನು ಹೊಂದಿರುತ್ತದೆ. ಇದರಲ್ಲಿ 10 ಐಸಿಯು ಬೆಡ್ ಗಳನ್ನ ತಕ್ಷಣ ಸಿದ್ಧಪಡಿಸಲಾಗುತ್ತದೆ," ಎಂದು ತಿಳಿಸಿದರು.

ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಈ ಆರೈಕೆ ಕೇಂದ್ರವನ್ನ ಸಿದ್ಧಪಡಿಸಿ ಸಕಲ ವ್ಯವಸ್ಥೆಗಳು ಅಚ್ಚುಕಟ್ಟಾಗಿರುವಂತೆ ನೋಡಿಕೊಳ್ಳಬೇಕೆಂದು ಕಂದಾಯ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ನಂತರದಲ್ಲಿ ಮಾವಳ್ಳಿಪುರಕ್ಕೆ ಭೇಟಿಕೊಟ್ಟು ಅಲ್ಲಿ ಸ್ಮಶಾನ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳದ ಪರಿಶೀಲನೆ ನಡೆಸಿದರು.


Post a Comment

0 Comments

Ad Code

Responsive Advertisement