Ticker

6/recent/ticker-posts

Ad Code

Responsive Advertisement

1 ವರ್ಷದ ಸಂಬಳ ಕೋವಿಡ್ ನಿಯಂತ್ರಣ ನಿಧಿಗೆ ನೀಡಲು ಮಂತ್ರಿಗಳ ನಿರ್ಧಾರ

"ಎಲ್ಲಾ ಮಂತ್ರಿಗಳು ನಮ್ಮ ಒಂದು ವರ್ಷದ ಸಂಬಳವನ್ನ ಕೋವಿಡ್ ನಿಯಂತ್ರಣಕ್ಕಾಗಿ ನೀಡಲಿದ್ದೇವೆ", ಎಂದು ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ನಡೆಸಿದ ವೀಡಿಯೋ ಸಂವಾದದ ನಂತರ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.


ನಗರದಿಂದ ಲಕ್ಷಾಂತರ ಜನ ತಮ್ಮ ಹಳ್ಳಿಗಳಿಗೆ ವಾಪಸ್ಸಾದ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಸೋಂಕು ಉಲ್ಬಣಗೊಳ್ಳುತ್ತಿರುವ ಕಾರಣ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದರು. ಈ ವೇಳೆ ಕೋವಿಡ್ ನಿಯಂತ್ರಿಸಲು ಸರ್ಕಾರ ಸೂಚಿಸಿರುವ ಎಲ್ಲಾ ಕ್ರಮಗಳನ್ನ ಕಡ್ಡಾಯವಾಗಿ ಜಾರಿಗೊಳಿಸಲು ನಿರ್ದೇಶನ ನೀಡಿದರು. ಹಾಗೆಯೇ ಲಸಿಕೆ ಮತ್ತು ಆಕ್ಸಿಜೆನ್ ವ್ಯವಸ್ಥೆಯು ಸಮರ್ಪಕವಾಗಿರುವಂತೆ ನೋಡಿಕೊಳ್ಳಲು ಸೂಚಿಸಿದರು," ಎಂದು ಸಚಿವ ಅಶೋಕ್ ತಿಳಿಸಿದರು.

ನಗರದಲ್ಲಿ ಮೂರು ಚಿತಾಗಾರಗಳು ಕೆಟ್ಟು ಹೋದ ಕಾರಣಕ್ಕೆ ಒಂದಿಷ್ಟು ಸಮಸ್ಯೆಗಳು ಸೃಷ್ಟಿಯಾಗಿದ್ದವು. ಈಗ ಎರಡು ಕಡೆಗಳಲ್ಲಿ ಬಯಲಲ್ಲಿ ಸುಡುವದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನ ಮಾಡಲಾಗಿದೆ. ಒಟ್ಟಿಗೆ 70 ಕ್ಕಿಂತಲೂ ಹೆಚ್ಚಿನ ಶವ ಸಂಸ್ಕಾರಕ್ಕೆ ಇಲ್ಲಿ ವ್ಯವಸ್ಥೆಯಿದೆ. ನಗರದ ಹೊರಭಾಗದಲ್ಲಿ ನೂರು ಶವಗಳನ್ನ ಸುಡುವುದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಚಿತಾಗಾರಗಳ ಮುಂದೆ ಸಾಲುಗಟ್ಟಿ ನಿಲ್ಲುವ ಸಂದರ್ಭ ಬರಲಾರದು. ಹಾಗೆಯೇ 230 ಎಕರೆಯನ್ನ ಸ್ಮಶಾನಕ್ಕಾಗಿಯೇ ಬಳಸಲು ಸೂಕ್ತ ನಿರ್ದೇಶನ ನೀಡಲಾಗಿದೆ. ಅದು ಕೂಡಲೇ ಉಪಯೋಗಕ್ಕೆ ಲಭ್ಯವಾಗಲಿದೆ. ಒಟ್ಟಿನಲ್ಲಿ ಶವಸಂಸ್ಕಾರಕ್ಕೆ ಇದ್ದ ಎಲ್ಲ ಅಡತಡೆಗಳನ್ನ ಕಂದಾಯ ಇಲಾಖೆ ಪರಿಹರಿಸಿದೆ", ಎಂದು ತಿಳಿಸಿದರು.


"ಖಾಸಗಿ ಆಸ್ಪತ್ರೆಗಳು ಮನಸೋ ಇಚ್ಛೆ ರೆಮಿಡಿಸಿವರ್ ಔಷಧಿಯನ್ನ ಬಳಸುತ್ತಿವೆ. ಯಾರಿಗೆ ಅಗತ್ಯವಿದೆಯೋ ಅಂಥವರಿಗೆ ಮಾತ್ರ ನೀಡಬೇಕು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಸೂಚನೆಯಂತೆ ಬಳಸಬೇಕು. ಇದನ್ನ ದುರುಪಯೋಗ ಮಾಡಿಕೊಳ್ಳುವ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳ ಮೇಲೆ ಕಾನೂನು ಕ್ರಮ ಜರುಗಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ", ಎಂದು ಅಶೋಕ್ ಹೇಳಿದರು.





Post a Comment

0 Comments

Ad Code

Responsive Advertisement