ಸರ್ಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ಸಾಗುವಳಿಯನ್ನು ಸಕ್ರಮಗೊಳಿಸಲು ನಿಟ್ಟಿನಲ್ಲಿ ನಮೂನೆ-57ರಲ್ಲಿ ಸ್ವೀಕರಿಸಿದ ಅರ್ಜಿಗಳನ್ನ ತಂತ್ರಾಂಶದಲ್ಲಿ ಅಪಲೋಡ್ ಮಾಡಲು ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ಇಲಾಖೆಯು ಈ ಹಿಂದೆ ಮಾರ್ಚ್ 17, 2018ರಿಂದ ಮಾರ್ಚ್ 16, 2019ರ ವರೆಗೆ ಅರ್ಜಿಗಳನ್ನ ಸ್ವೀಕರಿಸಲು ಕಾಲಾವಕಾಶ ನೀಡಿತ್ತು. ಆ ಅವಧಿಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನ ಅಂದು ಸಾರ್ವತ್ರಿಕ ಲೋಕಸಭಾ ಚುನಾವಣೆ ಘೋಷಣೆಯಾದ ಪ್ರಯುಕ್ತ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.
ಈ ಕಾರಣಕ್ಕೆ ಸಧ್ಯ ಬಾಕಿ ಇರುವ ನಮೂನೆ 57ರ ಅರ್ಜಿಗಳ ಜಿಲ್ಲಾವಾರು ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದು, ಸದರಿ ಅರ್ಜಿಗಳನ್ನ ಮಾತ್ರ ಅಪ್ ಲೋಡ್ ಮಾಡಲು ಮೇ01, 2021ರಿಂದ ಜುಲೈ31, 2021ರ ವರೆಗೆ ಕಾಲಾವಕಾಶವನ್ನ ನೀಡಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.



0 Comments