ಕರ್ನಾಟಕ ಲಲಿತಕಲಾ ಅಕಾಡೆಮಿಯು 2020ನೇ ಸಾಲಿನ ಗೌರವ ಪ್ರಶಸ್ತಿಗಾಗಿ 3 ಜನ ಶ್ರೇಷ್ಠಕಲಾವಿದರನ್ನು ಆಯ್ಕೆಮಾಡಲಾಗಿದೆ. ಪ್ರತಿಯೊಬ್ಬರೂ ತಮ್ಮ ಕಲಾಸಾಧನೆಯಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಲಾಪ್ರದರ್ಶನಗಳಲ್ಲಿ ಸಾಧನೆಗೈದು ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ. ಹಾಗೂ ಈ ಭಾರಿ ಸಾಂಪ್ರದಾಯಿಕ ಶೈಲಿಯಲ್ಲಿ ಸಾಧನೆ ಮಾಡಿರುವ ಒಬ್ಬ ಮಹಿಳಾ ಕಲಾವಿದರನ್ನು ಆಯ್ಕೆ ಮಾಡಿರುವುದು ವಿಶೇಷವಾಗಿದೆ. ಪ್ರಶಸ್ತಿ ಮೊತ್ತವು ತಲಾ ರೂ.50,000/-ಗಳ ನಗದು ನೀಡಿ ಗೌರವಿಸಲಾಗುತ್ತಿದೆ.
49ನೇ ವಾರ್ಷಿಕ ಕಲಾಬಹುಮಾನಕ್ಕೆ 89 ಕಲಾಕೃತಿಗಳನ್ನು ಆಯ್ಕೆಮಾಡಿ ಅದರಲ್ಲಿ ಉತ್ತುಮ 10 ಕಲಾಕೃತಿಗಳಿಗೆ ತಲಾ ರೂ.25,000/-(ರೂಪಾಯಿ ಇಪ್ಪತ್ತೈದು ಸಾವಿರ)ದಂತೆ 10 ಜನ ಕಲಾವಿದರನ್ನು ಆಯ್ಕೆಮಾಡಲಾಗಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
0 Comments