Ticker

6/recent/ticker-posts

Ad Code

Responsive Advertisement

ಕರಸಮಾಧಾನ ಯೊಜನೆ - 2021

 ಸರಕು ಮತ್ತು ಸೇವಾ ತೆರಿಗೆಯ ಅನುಷ್ಠಾನಕ್ಕೂ ಮೊದಲು ವಾಣಿಜ್ಯ ತೆರಿಗೆಗಳ ಇಲಾಖೆಯು ನಿರ್ವಹಿಸುತ್ತಿದ್ದ ಎಲ್ಲಾ ಕಾಯ್ದೆಗಳ ಅಡಿಯಲ್ಲಿ ಇರುವ ಬಾಕಿ ತೆರಿಗೆಗೆ ಕರಸಮಾಧಾನ ಯೋಜನೆಯನ್ನು ವಿಸ್ತಿರಿಸುವಂತೆ ವಾಣಿಜ್ಯೋದ್ಯಮಗಳು ಮಾಡಿದ ಮನವಿಯನ್ನು ಪರಿಗಣಿಸಿ ಮುಖ್ಯಮಂತ್ರಿಯವರು ತೆರಿಗೆ ಬಾಕಿಯನ್ನು ಕಡಿಮೆ ಮಾಡುವ ಉದ್ದೇಶದಿಂದ “ಕರಸಮಾಧಾನ ಯೋಜನೆ - 2021”ನ್ನು ಆಯವ್ಯಯ ಭಾಷಣದಲ್ಲಿ ಘೋಷಿಸಿದ್ದು , ಈ ಯೋಜನೆಯನ್ನು 29-03-2021ರಿಂದ ಜಾರಿಗೊಳಿಸಲಾಗಿರುತ್ತದೆ. ಇದು ಅತ್ಯಂತ ಸಮಗ್ರತೆಯಿಂದ ಕೂಡಿದ್ದು, ವಾಣಿಜ್ಯ ತೆರಿಗೆಯ ಸರಕು ಮತ್ತು ಸೇವಾ ತೆರಿಗೆಯ ಅನುಷ್ಠಾನದ ಪೂರ್ವದಲ್ಲಿ ನಿರ್ವಹಿಸುತ್ತಿದ್ದ 1. ಕರ್ನಾಟಕ ಮಾರಾಟ ತೆರಿಗೆ ಕಾಯ್ದೆ 1957, 2. ಕರ್ನಾಟಕ ಮೌಲ್ಯವರ್ಧಿಕ ತೆರಿಗೆ ಕಾಯ್ದೆ 2003, 3. ಕೇಂದ್ರ ಮಾರಾಟ ತೆರಿಗೆ ಕಾಯ್ದೆ 1956, 4. ಕರ್ನಾಟಕ ವೃತ್ತಿಗಳ, ವ್ಯವಹಾರಗಳು, ಅಜೀವಿಕೆಗಳು ಮತ್ತು ಉದ್ಯೋಗಗಳ ಮೇಲಣ ತೆರಿಗೆ ಕಾಯ್ದೆ 1976, 5. ಕರ್ನಾಟಕ ವಿಲಾಸಿ ತೆರಿಗೆ ಕಾಯ್ದೆ 1979, 6. ಕರ್ನಾಟಕ ಕೃಷಿ ವರಮಾನ ತೆರಿಗೆ ಕಾಯ್ದೆ 1957, 7. ಕರ್ನಾಟಕ ಮನರಂಜನಾ ತೆರಿಗೆ ಕಾಯ್ದೆ 1958,  8. ಕರ್ನಾಟಕ ಸರಕು ಪ್ರವೇಶ ತೆರಿಗೆ ಕಾಯ್ದೆ 1979 ಎಲ್ಲಾ ಕಾಯ್ದೆಗಳು ತೆರಿಗೆ ಬಾಕಿಗಳಿಗೆ ಸಂಬಂಧಿಸಿದ ಪರಿಹಾರವನ್ನು ಒದಗಿಸುತ್ತವೆ.



ಈ ಯೋಜನೆಯ ಪರಧಿಯೊಳಗೆ ಕರ್ನಾಟಕ ಮೌಲ್ಯವರ್ಧಿತ ತೆರಿಗೆ ಕಾಯ್ದೆ 2003ರ ಅಡಿಯಲ್ಲಿ ಮಾಸಿಕ ವರದಿಗಳನ್ನು ಸಲ್ಲಿಸದೇ ಇರುವ ಕಾರಣಕ್ಕಾಗಿ ಹಾಗೂ ನಮೂನೆ ವ್ಯಾಟ್-240ನಲ್ಲಿ ಲೆಕ್ಕಪರಿಶೋಧನೆಯ ವರದಿ ಸಲ್ಲಿಸದೇ ಇರುವ ಕಾರಣಕ್ಕಾಗಿ ಕ್ರಮವಾಗಿ ಕಲಂ 72(1)(ಎ) ಅಥವಾ 72(1)(ಬಿ) ಅಥವಾ 74(4)ರ ಅಡಿಯಲ್ಲಿ ವಿಧಿಸಲಾಗಿರುವ ದಂಡಗಳನ್ನು ಒಳಗೊಂಡಿರುತ್ತದೆ. ಈ ಮೇಲೆ ನಮೂದಿಸಿರುವ ಎಲ್ಲಾ ಕಾಯ್ದೆಗಳಡಿಯಲ್ಲಿನ ಸಂಬಂಧಿಸಿದ ತೆರಿಗೆಯ ಪೂರ್ಣ ಪಾವತಿಸುವ ಷರತತಿಗೆ ಒಳಪಟ್ಟು ಎಲ್ಲಾ ಬಾಕಿ ತೆರಿಗೆಯ ಮೇಲೆ ವಿಧಿಸಲಾದ ದಂಡ ಮತ್ತು ಬಡ್ಡಿಯನ್ನು ಶೇಕಡ 100ರಷ್ಟು ಮನ್ನಾ ಮಾಡುವುದನ್ನು ಈ ಯೋಜನೆಯು ಒಳಗೊಂಡಿರುತ್ತದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಂಡ ವರ್ತಕರು ಒಂದು ವೇಳೆ ಹೆಚ್ಚುವರಿಯಾಗಿ ಪಾವತಿಸಿದ್ದಲ್ಲಿ ಮರುಪಾವತಿಗೆ ಅರ್ಹರಲ್ಲ ಎಂಬ ಷರತ್ತಿಗೆ ಒಳಪಟ್ಟು, ಮನವಿಯನ್ನು ಸಲ್ಲಿಸುವ  ಸಮಯದಲ್ಲಿ ಈಗಾಗಲೇ ಪಾವತಿಸಲಾಗಿರುವ ಬಡ್ಡಿ ಅಥವಾ ದಂಡವನ್ನು ಬಾಕಿ ತೆರಿಗೆಗೆ ಸರಿದೂಗಿಸುವ ಸೌಲಭ್ಯವನ್ನು ಸಹ ಇದು ಒಳಗೊಂಡಿರುತ್ತದೆ. ಅನೊಂದಾಯಿತ ವರ್ತಕರ ಪ್ರಕರಣಗಳಲ್ಲಿಯೂ ಸಹ ಕರನಿಧಾರಣೆ / ಮರು-ಕರನಿಧಾರಣೆ/ ತಿದ್ದುಪಡಿ ಆದೇಶಗಳಿಂದ ಉದ್ಭವಿಸಿದ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲಾಗುವುದು.
ಸಾಕಷ್ಟು ಸಮಯಾವಕಾಶ ನೀಡುವುದು ಈ ಯೋಜನೆಯ ಒಂದು ಪ್ರಮುಖ ಅಂಶವಾಗಿದ್ದು 31-07-2021ರ ವರೆಗೆ ಈಗಾಗಲೇ ವಿಲೆವಾರಿ ಮಾಡಲಾದ / ವಿಲೆವಾರಿ ಮಾಡಬೇಕಾದ ಕರನಿಧಾರಣೆ / ಮರು-ಕರನಿಧಾರಣೆ/ ತಿದ್ದುಪಡಿ ಆದೇಶಗಳಲ್ಲಿನ ತೆರಿಗೆ ಬಾಕಿಯು ಸಹ ಈ ಯೋಜನೆಗೆ ಅರ್ಹರಿರುತ್ತವೆ ಮತ್ತು ಬಾಕಿ ತೆರಿಗೆ ಮೊತ್ತವನ್ನು ಪಾವತಿಸಲು 31-10-2021ರ ವರೆಗೆ ಕಾಲಾವಕಾಶವನ್ನು ನೀಡಲಾಗಿದೆ.
ಪಾರದರ್ಶಕ, ಸುಲಲಿತವಾದ ಕಾರ್ಯ ವಿಧಾನವನ್ನು ಸಹ ಜಾರಿಗೊಳಿಸಲಾಗಿದ್ದು, ಅದರಂತೆ ವರ್ತಕರು ಜಾಲತಾಣ  http://ctax.kar.nic.in     ಅಥವಾ http://gst.kar.nic.in    ಲಾಗಿನ್ ಆಗಿ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಅನ್‍ಲೈನ್‍ನಲ್ಲಿಯೇ ಪಾವತಿಯನ್ನು ಮಾಡಬಹುದಾಗಿರುತ್ತದೆ. ಯೋಜನೆಯನ್ವಯ ಸಂಬಂಧಿದಿದ ಅಧಿಕಾರಿಗಳು ಅರ್ಜಿಗಳಲ್ಲಿರಬಹುದಾದ ನ್ಯೂನ್ಯತೆಗಳನ್ನು 15 ದಿನಗಳ ಒಳಗಾಗಿ ಅರ್ಜಿದಾರರಿಗೆ ತಿಲಿಸಬೇಕಾಗಿದ್ದು, ಇದು ಯೋಜನೆಯ ಉಪಯುಕ್ತತೆಯನ್ನು ಖಾತ್ರಿಪಡಿಸಿಕೊಳ್ಳಳು ಅಧಿಕಾರಿಗಳ ಬದ್ದತೆಯನ್ನು ಖಾತ್ರಿಪಡಿಸುತ್ತದೆ.
  ಮನವಿ ಅಥವಾ ಪರಿಷ್ಕರಣೆ ಕೋರಿ ವಿವಿಧ ಮೇಲ್ಮನವಿ ಪ್ರಾಧಿಕಾರಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ರಾಜ್ಯವು ಮನವಿ ಸಲ್ಲಿಸಿರುವ ಪ್ರಕರಣಗಳಿಗೆ ಹಾಗೂ ಯಾವುದಾದರೂ ಪ್ರಾಧಿಕಾರವು 29-03-2021 ರಲ್ಲಿದ್ದಂತೆ ಸ್ವಯಂ ಪರಿಷ್ಕರಣೆಯನ್ನು ಪ್ರಾರಂಭಿಸಿದ್ದರೆ ಹಾಗೂ 31-07-2021ರ ನಂತರ ಆದೇಶಗಳನ್ನು ತಿದ್ದುಪಡಿ ಮಾಡಿದ್ದರೆ ಅಂತಹ ಪ್ರಕರಣಗಳಿಗೆ ಈ ಯೋಜನೆಯ ಅನ್ವಯಿಸುವುದಿಲ್ಲ. ಮುಂದುವರೆದು, ಕೇಂದ್ರ ಮಾರಾಟತೆರಿಗೆಕಾಯ್ದೆ, 1956ರ ಕಲಂ 10-ಎ ರಿಂದ ಉದ್ಭವಿಸುವ ದಂಡಗಳಿಗೆ ಈ ಯೋಜನೆಯು ಅನ್ವಯಿಸುವುದಿಲ್ಲ.
ರಾಜ್ಯದಎಲ್ಲಾ ವರ್ತಕರೂ, ಬಾಕಿ ತೆರಿಗೆ ಮೊತ್ತಗಳನ್ನು ಪಾವತಿಸಿ, ಬಡ್ಡಿ ಹಾಗೂ ದಂಡದ ಮನ್ನಾಕೋರಿ“ಕರಸಮಾಧಾನಯೋಜನೆ– 2021” ನ್ನುಆಯ್ಕೆ ಮಾಡಿಕೊಳ್ಳಬಹುದು ಹಾಗೂ ಆನ್‍ಲೈನ್ ಮುಲಕ ಅರ್ಜಿ ಸಲ್ಲಿಸಲು ಜಾಲತಾಣ  http://ctax.kar.nic.in     ಅಥವಾ http://gst.kar.nic.in     ರಲ್ಲಿ ಲಭ್ಯವಾಗಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement