ಮಲ್ಲೇಶ್ವರದ ಐತಿಹಾಸಿಕ ಕಾಡು ಮಲ್ಲೇಶ್ವರ ಜಾತ್ರೆಯು ವಿಜೃಂಭಣೆಯಿಂದ ಸಾಗಿತು. ಪ್ರತೀ ಬಾರಿಯಂತೆ ಮಾರುದ್ದಕ್ಕೂ ತೀರ್ಥ ಪ್ರಸಾದ ವಿತರಣಾ ವ್ಯವಸ್ಥೆ ಆvತ್ತು. ಲಕ್ಷಾಂತರ ಜನರು ತೀರ್ಥ ಪ್ರಸಾದ ಸೇವಿಸಿ ದರ್ಶನ ಪಡೆದು ಪಾವನರಾದರು.
ದಿನಂಪ್ರತಿ ಲಕ್ಷ ಲಕ್ಷ ಮಂದಿ ಸಾಗುವ ಸಂಪಿಗೆ ರಸ್ತೆಯ ಸಂಚಾರ ಇ0ದು ಕೆಲ ಗಂಟೆಗಳ ಕಾಲ ಸ್ತಬ್ದಗೊಂಡಿತ್ತು.
ಪ್ರತಿವರ್ಷ ಶಿವರಾತ್ರಿಯ ಮಾರನೇ ದಿನ ಮಲ್ಲೇಶ್ವರದ ಪ್ರಮುಖ ಬೀದಿಗಳಲ್ಲಿ ಕಾಡು ಮಲ್ಲೇಶ್ವರನ ತೇರನ್ನೆಳೆಯುವುದು ನಿಜಕ್ಕೂ ಸಂಭ್ರಮ ತರುವ ಕೆಲಸ. ಇಡೀ ಸಂಪಿಗೆ ರಸ್ತೆಯಲ್ಲಿ ವಾಹನ ಸಂಚಾರವಿರುವುದಿಲ್ಲ.ರಸ್ತೆ ತುಂಬಾ ಅಲ್ಲಲ್ಲಿ ರಂಗೋಲಿ, ದೇವರು ಬರುತ್ತಿದ್ದಂತೆಯೇ ವಿತರಣೆಯಾಗುವ ಪಾನಕ ಕೋಸಂಬರಿ ಮಜ್ಜಿಗೆ.ಜೊತೆಗೆ ಪ್ರಸಾದ ಮೊಸರನ್ನ.ತೇರಿನ ಮೇಲಕ್ಕೆ ಎಸೆಯಲು ಬಾಳೆಹಣ್ಣು ಮತ್ತು ದವನ.
ಮೊದಲಿಗೆ ಶಿವಸ್ತುತಿ ಮತ್ತು ಪ್ರಕಟಣೆಯ ವಾಹನ ಅದರ ಹಿಂದೆ ಡೋಳು ಡಕ್ಕೆ. ಜೊತೆ ಜೊತೆಗೆ ಚಾಮರ ಹೊತ್ತ ಸ್ವಯಂ ಸೇವಕರು ಬೃಹತ್ ತಾಂಡವ ನಾಟ್ಯ ಭಂಗಿಯ ನಟರಾಜನ ಪ್ರತಿಮೆ.ನಡುವೆ ಕೀಲು ಕುದುರೆ ಗಾರುಡಿ ಬೊಂಬೆಗಳು ಅವುಗಳ ನಡುವೆ ಪುಟ್ಟ ತೇರು.ಅದಾದ ನಂತರ ಮಧ್ಯಮ ಗಾತ್ರದ ತೇರು ಅದಾದ ನಂತರ ಬೃಹತ್ ಬಸವಣ್ಣನ ಪ್ರತಿಮೆ ಅದಾದ ನಂತರ ಬೃಹತ್ ಶಿವಲಿಂಗ ಕೊನೆಗೆ ಆಕರ್ಷಕ ನಯನ ಮನೋಹರ ಮುಖ್ಯ ತೇರು.ಈ ಸಲ ಬಸವಣ್ಣ ಮೊದಲು ಲಿಂಗ ಎರಡನೆಯದಾಗಿತ್ತು.
ಮಲ್ಲೇಶ್ವರ ನಮ್ದು ಅಂತ ಸ್ಥಳೀಯರ ಸಂಭ್ರಮ.ಪಾದರಕ್ಷೆ ಧರಿಸದೆ ತೇರನೆಳೆಯುವ ಹಗ್ಗವನ್ನು ಎಲ್ಲರೂ ಹಿಡಿದು ಎಳೆಯುತ್ತಿದ್ದರೆ ಆ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಬೇರೆ ಬೇರೆ ಊರುಗಳಲ್ಲೂ ನೋಡಿದ್ದೇನೆ.
ಆದರೆ ಮಲ್ಲೇಶ್ವರದ ಬಡಾವಣೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ ನಡೆಯುವ ಈ ತೇರು ನೆರೆದವರೆಲ್ಲರ ಮನಸ್ಸನ್ನು ಪ್ರಶಾಂತಗೊಳಿಸುತ್ತದೆ.





0 Comments