ವಿಶ್ವರಂಗ ಭೂಮಿ ದಿನಕ್ಕೆ ವಿಶೇಷ ಲೇಖನ
ಪ್ರಾಚೀನ ಭಾರತೀಯರಂಗಭೂಮಿ
ವಿಶ್ವರಂಗಭೂಮಿ ದಿನದಕಲ್ಪನೆ ನಮಗೆ ಧಿಕೃತವಾಗಿ ಮೊದಲಿಗೆ ಬಂದದ್ದು ಹೆಲ್ಸಿಂಕಿಯಲ್ಲಿ ನಂತರ ವಿಯೆನ್ನಾದಲ್ಲಿಜೂನ್ 1961 ರಲ್ಲಿ ನಡೆದಇಂಟರ್ ನ್ಯಾಷನಲ್‍ಥಿಯೇಟರ್‍ಇನ್ಸ್‍ಟ್ಯೂಟ್‍ನ9ನೇ ವಿಶ್ವಕಾಂಗ್ರೆಸ್‍ನಅಧ್ಯಕ್ಷರಾದಆರ್ವಿ ಕಿವಿಮಾಅವರುಅಂತರರಾಷ್ಟ್ರೀಯರಂಗಭೂಮಿ ಸಂಸ್ಥೆಯಾದ ಪಿನ್ನಿಷ್‍ಕೇಂದ್ರದ ಪರವಾಗಿ 1962 ರಿಂದ ವಿಶ್ವರಂಗಭೂಮಿ ದಿನವನ್ನು ಪ್ರಸ್ಥಾಪಿಸಿದರು. (ಥಿಯೇಟರ್‍ಆಫ್‍ನೇಷನ್ಸ್ ಮಾರ್ಚ್27 ನ ಪ್ರಾರಂಭದ ದಿನ) ಇಲ್ಲಿಂದ ವಿಶ್ವರಂಗಭೂಮಿ ದಿನವನ್ನು ವಿಶ್ವದಾದ್ಯಂತ 100ಕ್ಕೂ ಹೆಚ್ಚಿನಇಂಟರ್ ನ್ಯಾಷನಲ್‍ಥಿಯೇಟರ್‍ಇನ್ಸ್‍ಟ್ಯುಟ್(ಐ.ಟಿ.ಐ)ಗಳು, ವಿಶ್ವನಾಟಕ ಸಮುದಾಯಗಳು ವಿಶ್ವ ವಿದ್ಯಾಲಯಗಳು, ರಂಗಸಂಸ್ಥೆಗಳು ಹಾಗೂ ಇತರರು ವಿಭಿನ್ನರೀತಿಯಲ್ಲಿ ವಿಶ್ವರಂಗಭೂಮಿ ದಿನವನ್ನುಆಚರಿಸುತ್ತಾ ಬರುತ್ತಿದ್ದಾರೆ.
ಕ್ರಿ.ಶ.4,5,6ನೇ ಶತಮಾನದ ಗುಪ್ತ ಸಾಮ್ರಾಜ್ಯದ ಕಾಲಕ್ಕೆ ಶಾಸ್ತ್ರಿಯ ಸಂಸ್ಕøತರಂಗಭೂಮಿಉತ್ತುಂಗದಲ್ಲಿತ್ತು. ಇದನ್ನು ನಾಟ್ಯ ಶಾಸ್ತ್ರ ದಾಖಲಿಸಿದೆ ಹಾಗೆಯೇ ಕ್ರಿ.ಪೂ.2500 ರಿಂದಆರಂಭವಾಗುವ ಭಾರತದಇತಿಹಾಸದಲ್ಲಿ ಸಿಂದೂ ಕಣಿವೆಯ ಅವಶೇಷಗಳಲ್ಲಿ ಸಿಕ್ಕ ನರ್ತಕಿಯ ವಿಗ್ರಹವನ್ನು ಗ್ರಹಿಸಿ, ಆ ಕಾಲದಲ್ಲಿಯೇ ನೃತ್ಯ, ಅಭಿನಯ ಅಸ್ತಿತ್ವದಲ್ಲಿದುದ್ದನ್ನು ಊಹಿಸಲಾಗಿದೆ. ಒಟ್ಟಾರೆ ಮನುಷ್ಯನ ಹುಟ್ಟಿನೊಂದಿಗೆರಂಗಭೂಮಿಯ ಹುಟ್ಟನ್ನುಗ್ರಹಿಸುತ್ತೇವೆ. ಮುಖ್ಯವಾಗಿಗ್ರೀಕ್ ನಾಗರೀಕತೆಕಾಲದಲ್ಲಿ ಬೃಹತ್ ಪ್ರೇಕ್ಷಕರನ್ನುರಂಗಭೂಮಿ ಹೊಂದಿತ್ತು.ಮಾನವ ವಿಕಾಸ ಶಾಸ್ತ್ರಾಜ್ಞಾರುಗುರುತಿಸುವಂತೆ, ಸಾಂಸ್ಕøತಿಕ ಗುಹಾ ಚಿತ್ರಗಳ ಆಧಾರದ ಮೇಲೆ 30,000 ವರ್ಷಗಳ ಈಚೆಗೆ ಮಾನವನರಂಗ ಕ್ರಿಯೆಗಳನ್ನು ಗುರುತಿಸಲಾಗಿದೆ.ಮೊದಲ “ರಾಷ್ಟ್ರೀಯರಂಗಭೂಮಿಕಲ್ಪನೆ’’ ಬಂದಿದೆಗ್ರೀಕ್‍ನ ನಿಂದ ಡಯೋನಿಸಿಸ್ ಫಲ ಕೊಡುವದೇವರಧಾರ್ಮಿಕಆಚರಣೆಯ ಮೂಲಕ.
ವಿಶ್ವರಂಗಭೂಮಿ ದಿನ
ದ ಸಂದೇಶವು ಸುಮಾರು 50ಕ್ಕೂ ಹೆಚ್ಚಿನ ಭಾಷೆಗಳಿಗೆ ಪ್ರತಿ ವರ್ಷ ಅನುವಾದಗೊಳ್ಳಲಿದೆ. ವಿಶ್ವದ ಬಹುತೇಕದೇಶದಅಧ್ಯಕ್ಷರು, ಪ್ರಧಾನಿಗಳು ಇದರ ಸದಸ್ಯರಾಗಿರುತ್ತಾರೆ.ಪ್ರತಿ ವರ್ಷ ಏಕೆ ಈ ಸಂದೇಶಎಂದರೆ, ಅಂತರರಾಷ್ಟ್ರೀಯ ಸಂದೇಶವನ್ನು ಪ್ರಸರಿಸಲುಗಮನಾರ್ಹ ವ್ಯಕ್ತಿಗಳನ್ನು ವಿಶೇಷವಾಗಿ ಪ್ರದರ್ಶನ ಕಲೆಗಳ ಕ್ಷೇತ್ರರಿಂದಲೇಆಯ್ಕೆ ಮಾಡಲಾಗುತ್ತದೆ.ಇದು ಪ್ರದರ್ಶನ ಕಲೆಗಳ ಮೌಲ್ಯ, ಪ್ರಾಮುಖ್ಯತೆ ಒಳಗೊಂಡಿರುತ್ತದೆ.
ಪ್ರತಿವರ್ಷಐಟಿಐಆಹ್ವಾನಿಸುವ ಈ ಸಂದೇಶವು ವಿಶೇಷವಾಗಿ ವಿಶ್ವಮಟ್ಟದಲ್ಲಿ “ರಂಗಭೂಮಿ ಮತ್ತು ಶಾಂತಿಯ ಸಂಸ್ಕøತಿ” ವಿಷಯದ ಬಗ್ಗೆ ಆಯಾರಾಷ್ಟ್ರದಿಂದಆಯ್ಕೆಯಾದ ವ್ಯಕ್ತಿಗಳು ತಮ್ಮಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ.ಮೊದಲ ಬಾರಿಗೆ 1962 ರಲ್ಲಿ ವಿಶ್ವರಂಗಭೂಮಿ ದಿನದ ಸಂದೇಶವನ್ನುಜೀನ್‍ಕಾಕ್ಕೂರವರು ಬರೆದಿದ್ದಾರೆಅಂದಿನಿಂದ ಪ್ರತಿ ವರ್ಷಇದು ಸಾಗುತ್ತಾಬಂದಿದೆ.
“Strong People Stand up
For
themselves but stronger people stand up for others”
ಅಂದರೆ,“ಬಲವಾದಜನರುತಮಗಾಗಿ ನಿಲ್ಲುತ್ತಾರೆ, ಆದರೆಅತ್ಯಂತ ಬಲವಾದಜನರು ಮಾತ್ರಇತರರಿಗಾಗಿ ನಿಲ್ಲತ್ತಾರೆ.” ಎಂಬ ಮಾತುರಂಗಭೂಮಿಜನಕ್ಕೆ ಹೇಳಬಹುದು.
ನಾಟಕದ ಮುಖ್ಯಉದ್ದೇಶ ಮನೋರಂಜನೆಯಾದರೂ, ಈ ಮಾಧ್ಯಮಗಂಭೀರ ವಿಚಾರಗಳತ್ತ ಪ್ರೇಕ್ಷಕರ ಗಮನ ಸೆಳೆದು ಅವರನ್ನು ಚಿಂತನಾಶೀಲರನ್ನಾಗಿ ಮಾಡುವಲ್ಲಿ, ಸಾಮಾಜಿಕಅರಿವು ಮೂಡಿಸುವಲ್ಲಿ, ಭಾಷೆ, ಸಂಸ್ಕøತಿ ಬಿಂಬಿಸುವಲ್ಲಿ, ವ್ಯಕ್ತಿತ್ವವಿಕಾಸನದಲ್ಲಿ,ತರಬೇತಿ ನೀಡುವ ಮಾಧ್ಯಮ, ಇದು ಮಾನವ ಸಂಪನ್ಮೂಲ ಅಭಿವೃದ್ಧಿ, ಮನೋವಿಜ್ಞಾನ, ಆರೋಗ್ಯ, ನೈರ್ಮಲ್ಯ, ಸಹಬಾಳ್ವೆ, ಕೋಮು ಸೌಹಾರ್ಧ, ಸಾಕ್ಷರತೆಜೋತೆಗೆ, ಒಂದು ಸ್ವಸ್ಥ ಪರಿಸರಅಥವಾ ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲೂ ಮಹತ್ವವಾದ ಪಾತ್ರ ನಿರ್ವಹಿಸುತ್ತಿದೆÉ. “ರಂಗಭೂಮಿಯುಎಲ್ಲರನ್ನೂಒಂದುಗೂಡಿಸುವ ವಿಶೇಷವಾದಗುಣ” ಹೊಂದಿರುವ ಮಾಧ್ಯಮವಾಗಿದೆ.ಅಲ್ಲದೆವಿಶ್ವಶಾಂತಿ,ss ಸ್ವಾತಂತ್ರ್ಯ ಹೋರಾಟ, ಕಲೆ, ಸಂಸ್ಕøತಿsss ನವಸಮಾಜ,ಸಮಸಮಾಜ ನಿರ್ಮಾಣದ ಪ್ರಕಾರವಾಗಿರಂಗಭೂಮಿ ಸದಾ ಕೆಲಸ ನಿರ್ವಹಿಸುತ್ತಾ ಬಂದಿದೆಅಲ್ಲದೆಹೊಸದನ್ನುಕಲಿಯಲು ಪ್ರೇರಣೆಒದಗಿಸಲಿದೆ.
ರಂಗಭೂಮಿಇಂದು ವಿಶ್ವ ಸಂಸ್ಕøತಿಯ ಅವಿಭಾಜ್ಯ ಅಂಗ ಎನಿಸಿದೆ.ಆಧುನಿಕಜಗತ್ತು ಎಷ್ಟೇ ರಭಸವಾಗಿ ರೂಪುಗೊಳ್ಳುತ್ತಿದ್ದರೂ, ವಿಜ್ಞಾನ ಮಂಗಳಗ್ರಹದಲ್ಲಿ ವಾಸ ಮಾಡುವ ಆಲೋಚನೆ ಮಾಡುತ್ತಿರುವ ಈ ಸಂದರ್ಭದಲ್ಲೂಜೀವಂತ, ನೈಜವಾದ ಮಾನವನನ್ನು ಮಾನವನಾಗಿಯೇ ಉಳಿಸಿಕೊಂಡಿರುವ ಈ ಪ್ರಕಾರಕ್ಕೆ ಸದಾ ಮನ್ನಣೆಇದ್ದೇಇದೆ.ಆಧುನಿಕಜಗತ್ತುಒಡ್ಡಿರುವಜಾಗತೀಕರಣ, ಕೈಗಾರೀಕರಣ, ಉದಾರೀಕರಣದ ಸವಾಲುಗಳಿಂದ ವಿಭಿನ್ನವಾಗಿ ರೂಪುಗೊಳ್ಳುತ್ತಿರುವ ನವಸಮಾಜದಲ್ಲಿ, ಈ ಹಿಂದೆಂದಿಗೂಕಂಡರಿಯದಂತಹ ಸಂಘರ್ಷದ, ಅನಾರೋಗ್ಯದ ವಾತಾವರಣವಿದೆ.ಇದುಇಡೀಜಗತ್ತನ್ನೇ ವ್ಯಾಪಿಸಿದೆ.ಇಂತಹಜರ್ಝರಿತವಾದ ಮನುಕುಲಕ್ಕೆ ನೆಮ್ಮದಿಯ ವರ್ತಮಾನ ಹಾಗೂ ಸಾಂತ್ವನ ನೀಡುವ ದಿಶೆಯಲ್ಲಿಅರಿವು ವಿಸ್ತರಿಸುವ ವಿಕಾಶದ ಬೃಹತ್ ಶಕ್ತಿಯಾಗಿ ‘ರಂಗಭೂಮಿ’ಯನ್ನೇ ಪದೇಪದೇ ನಾವು ಆಶ್ರಯಿಸಬೇಕಾದ ಅನಿವಾರ್ಯಇದೆ. ಹೀಗಾಗಿ ವಿಶ್ವಮಟ್ಟದರಂಗಚಿಂತಕರು ಈ ದಿನವನ್ನು ಪ್ರಗತಿಯ, ಆಭಿವೃದ್ಧಿಯ ದಿನವಾಗಿ ಸಹ ಆಚರಿಸುತ್ತಾರೆ.ಹೀಗಾಗಿ ಮಹಾತ್ಮಗಾಂಧಿಯವರು‘ನಮಗೆ ಪಾಠಶಾಲೆಜೋತೆಗೆ ನಾಟಕ ಶಾಲೆಯೂಅಗತ್ಯ’ಎಂದಿದ್ದರು.ಪಾಠಶಾಲೆಜ್ಞಾನ ನೀಡಿದರೆ ನಾಟಕ ಶಾಲೆ ಆ ಜ್ಞಾನಕ್ಕೆಚಟುವಟಿಕೆರೂಪಕೊಡಲಿದೆ.
ನಾಟಕ:
ನಾಟಕ ಸದಾ ಚಲನಶೀಲವಾದುದು ನಾಟಕವೇಒಂದುಅನುಭವವಾಗಿದೆ. ಹಾಗಾಗಿಯೇ ಭರತತನ್ನ ನಾಟ್ಯ ಶಾಸ್ತ್ರದಲ್ಲಿ ‘ಜೀವನವೇ ನಾಟಕ’Àಎಂದಿದ್ದಾನೆ. ಒಬ್ಬರನೊಬ್ಬರು ನಟರಾಗಿ, ಪಾತ್ರಗಳಾಗಿ ಅಷ್ಟೇ ಅಲ್ಲದೆ ನಾಟಕದ ಹೊರಗೂ ಸಾಮಾಜಿಕಜೀವನದಲ್ಲೂ ಸ್ನೇಹಿತರಾಗಿ, ಬಂಧುಗಳಾಗಿ ಅರ್ಥಮಾಡಿಕೊಂಡು ಬದುಕುವ ಹೃದಯಶ್ರೀಮಂತಿಕೆ ಅಗತ್ಯ, ಸಹನಟರೊಂದಿಗೂ ಸಂವಹನೆ, ಸ್ಪಂದನೆಅಗತ್ಯ. ಹೀಗಾದಾಗಲೇರಂಗ ಭೂಮಿ ಗಟ್ಟಿಗೊಳ್ಳಲು ಸಾಧ್ಯ.
ಇತ್ತೀಚೆಗೆ ಕರೋನ-19 ನಿಂದಾಗಿರಂಗಭೂಮಿ ಕಳೆಗುಂದಿತು,ಸಾಕಷ್ಟು ಜನ ನಿಧನರಾದರು.ಅನ್ಯ ಮಾರ್ಗವಿಲ್ಲದೆ.ಬೀದಿವ್ಯಾಪಾರಇತರೆ ಹಟ್ಟೆಹೋರೆಯುವ ಕೆಲಸ ನಿವ್ಹಿಸುವಂತಾಯಿತು.ಇದುದುರಂತ.
ಶಿಕ್ಷಣದಲ್ಲಿ ರಂಗಭೂಮಿ
ವಿಶೇಷವಾಗಿ, ಮಕ್ಕಳಿಗೆ ಹಿಂಜರಿಕೆ, ಕೀಳರಿಮೆ, ಸಂಕೋಚ, ಭಯ ಮುಂತಾದ ದೌರ್ಬಲ್ಯಗಳನ್ನು ನಿವಾರಿಸಿಕೊಳ್ಳುತ್ತಾ, ಏಕಾಗ್ರತೆ, ಶಿಸ್ತು, ಕ್ರಿಯಾತ್ಮಕತೆ, ಮೌಲಿಕಗುಣ, ಒಳ್ಳೆಯ ವ್ಯಕ್ತಿತ್ವ, ರಚನಾತ್ಮಕÀತೆ, ಕಲ್ಪನಾಶೀಲತೆ, ಕೌಶಲ್ಯ ವೃದ್ದಿಗೆ, ಉಚ್ಚಾರ ಸ್ವಷ್ಟತೆ, ಆತ್ಮಸ್ಥೈರ್ಯ ಹೆಚ್ಚಿಸುವುದರೊಂದಿಗೆ ಸರ್ವತೋಮುಖ ಬೆಳವಣಿಗೆ ಸಾಧ್ಯಮಾಡಿಕೋಳ್ಳಬೇಕು. ಒಂದು ಮಗು ತನ್ನ ಸೃಜನಶೀಲ ಶಕ್ತಿಯ ಮೂಲಕ ಎಲ್ಲ ಚಟುವಟಿಕೆಗಳಲ್ಲಿ ಪಾಲ್ಗೊಂಡು ಆ ಮೂಲಕ ಮನೋ ಆನಂದವನ್ನು ಪಡೆಯುವಂಥಾಗಬೇಕು, ಸಂಭ್ರಮಿಸುವಂತಾಗಬೇಕು.ಕಲಿಯುವ ಪಠ್ಯ ಸುಲಭವಾಗಿಅರ್ಥವಾಗಬೇಕು.ಸರಿ ತಪ್ಪುಗಳ ನಡುವಿನ ತಾರತಮ್ಯಜ್ಞಾನ ಮಗುವಿಗೆ ಲಭ್ಯವಾಗುವಂತೆಇರಬೇಕು.ಇದನ್ನುರಂಗಭೂಮಿ ಸಾಧಿಸಿದೆ. ತರಗತಿಗಳಲ್ಲಿ ಮಕ್ಕಳು, ಕೈಗಾರಿಕೆಗಳಲ್ಲಿ ಅಥವಾ ಕಚೇರಿಗಳಲ್ಲಿನ ಉದ್ಯೋಗಿಗಳು ತಮ್ಮ ಮಾನವ ಸಂಪನ್ಮೂಲ ಕೇಂದ್ರಗಳಲ್ಲಿ ಶಿಕ್ಷಕನ ಮಾರ್ಗದರ್ಶನದಲ್ಲಿ ಈ ರಂಗಾಟಗಳನ್ನು ಆಡುತ್ತಾತಮ್ಮಲ್ಲಿನ ಹಿಂಜರಿಕೆ, ಸಂಕೋಚ, ಭಯ, ಕೀಳರಿಮೆಗಳನ್ನು ಕಡಿಮೆ ಮಾಡಿಕೊಳ್ಳುತ್ತಾ ಕಲ್ಪನಾಚಾತುರ್ಯ, ಉಚ್ಚಾರ ಸ್ವಷ್ಟತೆ, ಧ್ವನಿ ಏರಿಳಿತ, ಗ್ರಹಣ ಶಕ್ತಿ, ಗಮನಿಸುವಿಕೆ, ಧೈರ್ಯ, ಸಂವಹನ, ಸಾಮರ್ಥವನ್ನು ಹೆಚ್ಚಿಸಿಕೊಳ್ಳುತ್ತಾ ತಮ್ಮ ವ್ಯಕ್ತಿತ್ವವನ್ನು ವಿಕಾಸನಗೊಳಿಸಿಕೊಳ್ಳÀಬಹುದು. ಅಲ್ಲದೆ ವಿಷಯಗಳ ವಿಸ್ತರಣೆಗಳ ಮೂಲಕ ಶಿಕ್ಷಣ ಪಠ್ಯವನ್ನೇಕಲಿಯಲು ಸಾಧ್ಯವಿದೆ. ಹೀಗೆ ಅನೌಪಚಾರಿಕ ವ್ಯವಸ್ಥೆಯ ಮೂಲಕವೇ ಔಪಚಾರಿಕ ಶಿಕ್ಷಣವನ್ನು ಗ್ರಹಿಸಲು ರಂಗಭೂಮಿ ಸಹಕಾರಿ.
“ರಂಗಭೂಮಿಯು ಮಲಗಿದವರನ್ನುಎಚ್ಚರಿಸುತ್ತದೆ”, “ಹೇಡಿಗಳಿಗೆ ಧೈರ್ಯತುಂಬುತ್ತದೆ”, “ಸೋಮಾರಿಗಳಿಗೆ ಛೀಮಾರಿ ಹಾಕುತ್ತದೆ”, “ ದಣಿದವರಿಗೆಚೈತನ್ಯತುಂಬುತ್ತದೆ”, “ಅಸಡ್ಡೆಯವರನ್ನು ಬಡಿದೆಬ್ಬಿಸುತ್ತದೆ”, “ಉದಾಸೀನರಾದವರನ್ನು ಹೊಡೆದೆಬ್ಬಿಸುತ್ತದೆ”, “ಹೆದರಿದವರಿಗೆಧೈರ್ಯತುಂಬುತ್ತದೆ”, “ತಿಳಿಗೇಡಿಗಳಿಗೆ ತಿಳಿಹೇಳುತ್ತದೆ”, “ರಾಕ್ಷಸರನ್ನು ಮನುಷ್ಯರನ್ನಾಗಿಸುತ್ತದೆ”, “ಭ್ರಷ್ಟರನ್ನು ಸಜ್ಜನರನ್ನಾಗಿಸುತ್ತದೆ”, “ಬಡಾಯಿಕೋರರನ್ನು ನಗಿಸುತ್ತದೆ”, “ಮುಂಗೋಪಿಗಳಿಗೆ ಒಂದು ಹಂತ ಕೆಳಗಿಳಿಸುತ್ತದೆ”, “ದಡ್ಡರನ್ನು ಪರಿವರ್ತಿಸುತ್ತದೆ”, “ಕೆಟ್ಟವರನ್ನುದಂಡಿಸುತ್ತದೆ”, “ದುರಾಕ್ರಮಿ ಮತ್ತು ಕ್ರೂರಿಗಳ ವಿರುದ್ಧಕಾದಾಡುತ್ತದೆ”, “ವಿದ್ಯಾಗರ್ವಿಯನ್ನು ಗೇಲಿ ಮಾಡುತ್ತದೆ”, “ಒರಟನನ್ನು ಮೇಲೆತ್ತುತ್ತದೆ”, “ಮೂÀಕನನ್ನು ಮಾತನಾಡಿಸುತ್ತದೆ”, “ಕನಸು ಕಾಣಲಾರದವನನ್ನು ಹೇಡಿಅಥವಾ ಮೂರ್ಖಎನ್ನುತ್ತದೆ”, ಭ್ರಷ್ಠರಾಜಕಾರಣವನ್ನು ಬದಲಾಯಿಸುತ್ತದೆ.
“ರಂಗಭೂಮಿಜನತುಂಬಾಚಿಕ್ಕವರು, ಆದರೆ ಇವರು ಬಹಳ ದೊಡ್ಡ ವಿಷಯಗಳಿಗೆ ಆಳವಾಗಿ ಸಮರ್ಥರಾದಜ್ಞಾನಿಗಳಾಗಿರುತ್ತಾರೆ. ”
ಇವರು ವಿಶ್ವದಾದ್ಯಂತ ನಡೆಯುವ ಚಳವಳಿಗಳಲ್ಲಿ, ಕ್ರಾಂತಿಗಳಲ್ಲಿ ಮೊದಲಿಗರಾಗಿ ಸದಾದಂಗೆ ಏಳುತ್ತಾರೆ. ಈ ಹಿಂದೆ,
ಸಾಮಾಜಿಕ ಹೋರಾಟಗಳು
ವಸಾಹತು ಶಾಹಿಯ ವಿರುದ್ಧರಾಷ್ಟ್ರೀಯ ಚಳವಳಿ
ಮಾತೃಭಾಷೆ (ಕನ್ನಡ) ರಾಷ್ಟ್ರೀಯತೆಯ ಹೋರಾಟ
ಸ್ವ್ವರಾಜ್ಯಕ್ಕಾಗಿ ಹಕ್ಕು ಪ್ರತಿಪಾದನೆಗಾಗಿ
ಹಿಂದೂಳಿದ, ಅಲ್ಪ ಸಂಖ್ಯಾತ,ಅಲೆಮಾರಿ ಹಾಗೂ ದಲಿತ ಮತ್ತು ಮಹಿಳಾ ಚಳವಳಿಯಾಗಿಯೂ ಇಂತಹ ಅನೇಕ ಆಂದೋಲನಗಳನ್ನು ರಂಗಭೂಮಿಕಟ್ಟಿರುವುದನ್ನು ಗಮನಿಸಬಹುದು.
ಬದುಕಿಗಾಗಿ ಕಲೆ:
‘ಕಲೆಗಾಗಿ ಕಲೆ ಅಥವಾ ಬದುಕಿಗಾಗಿ ಕಲೆ’ ಎಂಬ ವಾದ ಸದಾಇದ್ದೇಇದೆ. ಮನುಷ್ಯ ಮನುಷ್ಯರ ನಡುವೆ ಹೆಚ್ಚುತ್ತಿರುವದ್ವೇಷ, ಪರಸ್ಪರ ಅಸಹನೆ ಹಾಗೂ ಮಾನವ ಹಕ್ಕುಗಳ ಮೃಗೀಯ ಅತಿಕ್ರಮಣಗಳ ಜೊತೆಗೆಜನಸಂಖ್ಯೆ ಹೆಚ್ಚಳ, ಬಡತನ, ನಿರುದ್ಯೋಗ, ವೃದ್ದರ ಸಮಸ್ಯೆ, ಜಾತೀಯತೆ (ತುಳಿತಕ್ಕೆ ಒಳಗಾದವರು), ಕಪ್ಪು ಹಣ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಲೈಂಗಿಕ ಶೋಷಣೆ, ಪ್ರಕೃತಿ ವಿಕೋಪ, ಮಕ್ಕಳು-ಹೆಣ್ಣು ಮಕ್ಕಳ ಸಮಸ್ಯೆ, ಕೊಳ್ಳುಬಾಕ ಸಂಸ್ಕøತಿ, ಮಾದಕದ್ರವ್ಯದಚಟ, ಅನಾರೋಗ್ಯ, ಜೈವಿಕ ಸಮಸ್ಯೆ, ಇವುಗಳನ್ನೆಲ್ಲ ಮೀರುವಂತೆರೈತರ ಸಮಸ್ಯೆ, ಬೆಳೆಗಳಿಗೆ ಬೆಲೆ ಇಲ್ಲದ್ದು, ಕೃಷಿ ಚಟುವಟಿಕೆ ನಿಸ್ತೇಜಕವಾಗಿ, ರೈತರಆತ್ಮಹತ್ಯೆಯಂತಹ ಸಾಮಾಜಿಕ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆದು ನಿಂತಿರುವಾಗ ನಾವು ‘ಕಲೆಗಾಗಿ ಕಲೆ’ ಎನ್ನಲು ಹೇಗೆ ಸಾಧ್ಯ? ಇಲ್ಲ. ಹೀಗಾಗಿ ಇಂದುರಂಗಭೂಮಿ ಸ್ವಾತಂತ್ಯ್ರ ಪೂರ್ವದಲ್ಲಿ ನಿರ್ವಹಿಸಿದ ಜವಾಬ್ದಾರಿಯನ್ನುಇನ್ನೂ ಮುಂದೆಯೂಒಂದುಚಟುವಟಿಕೆಯಾಗಿ, ಚಳವಳಿ ರೂಪದಲ್ಲಿ ‘ಸಾಮಾಜಿಕವಾದರಂಗಭೂಮಿ’ಯನ್ನುಕಟ್ಟಿ ಹೆಚ್ಚು ಹೆಚ್ಚು ಶಕ್ತಿಶಾಲಿ ಮಾಡಬೇಕಾದಅಗತ್ಯ ಹಾಗೂ ಅನಿವಾರ್ಯತೆಇದೆ.
ಆದರೆಅಭೌಧ್ಧಿಕ ರಾಜಕಾರಣಿಗಳು ಸದಾ ಸಮಾಜದಲ್ಲಿ ಸ್ವಸ್ಥ ಸಮಾಜ, ಸ್ವಸ್ಥ ಪರಿಸರ ನಿರ್ಮಿಸುವಕಲಾವಿದರು-ಕಲೆ, ಸಾಹಿತ್ಯ-ಸಾಹಿತಿಗಳನ್ನು ಭ್ರಷ್ಠರು,ಕಳ್ಳರು,ದೇಶದ್ರೋಹಿಗಳು ಎನ್ನುವಂತೆ ಬಿಂಬಿಸುತ್ತೀರುವುದುದೋಡ್ಡದುರಂತ.
ಕ್ರಿ.ಶ. 5 ರಿಂದ 6ನೇ ಶತಮಾನದವರೆಗೆ ಪ್ಯೂಡಲ್ ವ್ಯವಸ್ಥೆ (ಘಟಕಕೊಬ್ಬನಒಡೆತನ) ನಾಟಕ ಪ್ರದರ್ಶನಗಳಿಗೆ ಕಡಿವಾಣಇತ್ತು.ಅಂದರೆ ಆ ಕಾಲದಧಾರ್ಮಿಕ ಶುದ್ದವಾದಿಗಳು (Puಡಿiಣಚಿಟಿs) ಲಿಯರ್‍ನ ನಾಟಕಕ್ಕೆ ಸಾವಿರಾರು ಸಂಖ್ಯೆಯಲ್ಲಿಜನ ಬರುವುದನ್ನುತಡೆಯಲು ಈ ಕ್ರಮವಹಿಸಿದ್ದರು.ಆದರೂರಂಗಭೂಮಿ ಪಿನಿಕ್ಸ್‍ನಂತೆಎದ್ದುಬಂದಿದೆ.ರಾಷ್ಟ್ರಮಟ್ಟದಲ್ಲಿರಂಗಭೂಮಿಯಲ್ಲಿಕರ್ನಾಟಕ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿದೆ.ಆದರೆಇತ್ತೀಚೆಗೆ ಕೆಲಮಂತ್ರಿಗಳು (ಎರಡೂ ಪಕ್ಷದವರು ಸೇರಿದಂತೆ) ತಮ್ಮರಾಜಕೀಯ ಲಾಭ ಸಾಧನೆಗಾಗಿ ಪ್ಯೂಡಲ್ ವ್ಯವಸ್ಥೆ ಮತ್ತೆಜಾರಿಗೆತಂದಿದ್ದಾರೆ.ರಂಗಭೂಮಿ, ಸಾಹಿತ್ಯ ಹಾಗೂ ಇತರೆ ಕಲಾ ಅಕಾಡೆಮಿಗಳಿಗೆ, ರಂಗ ಸಂಸ್ಥೆಗಳಿಗೆ, ಕಲೆಯನ್ನೇದೆವರೆಂದುಆರಾಧಿಸುತ್ತಾಕಲಾಕಾಯಕ ಮಾಡುತ್ತಾ ಬರುತ್ತಿರುವ ಬಡ-ನ್ಯೆಜಕಲಾವಿದರಿಗೆವಾರ್ಷಿಕಅನುದಾನವನ್ನು ನೀಡದೆರಾಜ್ಯಾದ ಸಾಂಸ್ಕøತಿಕಕ್ಷೇತ್ರ ವಿಶ್ವಮಟ್ಟದಲ್ಲಿ ಕೆಳಹಂತಕ್ಕೆ ತಲುಪಲುಕಾರಣವಾಗುತ್ತಿರುವುದು ವಿಷಾದ.ಈ ಕ್ಷೇತ್ರಗಳಿಗೆ ಹಿಂದಿನಂತೆ ಅನುದಾನಗಳು ಸಿಗಬೇಕು.ಈ ವಲಯ ಭ್ರಷ್ಠಗೋಳಿಸುವ ಬೆರಳೆಣಿಕೆಯ ಸಾಹಿತಿಕಲಾವಿದರೂ ಸುಧಾರಿಸಬೇಕಾಗಿದೆ.ಕಲಾ ಕ್ಷೇತ್ರ ಬೆಳದಂತೆ, ದೇಶವು ಅಭಿವೃದ್ಧಿಗೊಳ್ಳಲಿದೆ.ಅಭಿವೃದ್ಧಿಗೆ ಮಾನವತೆಗೆ, ಪರಿಸರಕ್ಕೆ, ಜೀವ ಸಂಕುಲಕ್ಕೆ ಈ ಕ್ಷೇತ್ರವು ಸಮೃದ್ದವಾಗಿ ಸದಾ ಕಾಲ ಲವಲವಿಕೆಯಿಂದಕೂಡಿರಬೇಕು ಮತ್ತುಇದುರಾಜಕೀಯವಾಗಿ ಸದಾ ವಿರೋದ ಪಕ್ಷವಾಗಿಯೇ ಕೆಲಸ ಮಾಡಬೇಕು, ಆಗ ನಿಜ ಅರ್ಥದಲ್ಲಿ ವಿಶ್ವರಂಗಭೂಮಿ ದಿವಕ್ಕೆ ಬೆಲೆ ಬರುವುದು.
ಸಹೃದಯತೆ ಕ್ಷೀಣಿಸಿ, ವ್ಯಕ್ತಿಗತ ವಿಜೃಂಭಣೆ ಹೆಚ್ಚಾಗುವ ಲಕ್ಷಣಎಲ್ಲಡೆಕಾಣುತ್ತಿದ್ದೇವೆ. ಗುಂಪನ್ನೇಆಶ್ರಯಿಸುವರಂಗಭೂಮಿಗೆರಂಗ ವಿರೋಧಿಯಾಗಿ ‘’ಏಕ ವ್ಯಕ್ತಿರಂಗ ಪ್ರಯೋಗ’’ಗಳು ಹೆಚ್ಚಾಗುತ್ತಿವೆ. ಟೀಮ್‍ವರ್ಕ್‍ನಲ್ಲೂ ಸಹಕಾರದಕೊರತೆ, ತಾಲೀಮಿಗೆಕಲಾವಿದರು ಶಿಸ್ತಿನಿಂದ ಬರುತ್ತಿಲ್ಲ.
‘ರಂಗವಿಮರ್ಶೆಯ ಸವಾಲು’
‘ರಂಗವಿಮರ್ಶೆ’ ಗಮನಿಸಿದಾಗ, ಸಾಹಿತ್ಯವಲಯದಲ್ಲಿ ಸಾಹಿತಿಗಳು ವಿಮರ್ಶೆಯಿಂದಜನಮಾನಸದಲ್ಲಿ ನಿಲ್ಲುವಂತೆಒಬ್ಬ ಪ್ರಭುದ್ದಕಲಾವಿದ ನಿಲ್ಲಲಾಗುತ್ತಿಲ್ಲ, ಸಾಹಿತ್ಯಕ್ಕೆಅಕ್ಷರರೂಪಕಟ್ಟಿಕೊಡಬಹುದು, ರಂಗ ಭೂಮಿಯಲ್ಲಿಅನುಭವವೇಆಧಾರಒಬ್ಬ ನಟನ ಪ್ರತಿಭೆಯನ್ನು ನೋಡಿಅನುಭವಿಸುವ ತಾಜಾತನ ಬರವಣಿಗೆಯಲ್ಲಿ ಮೂಡಿಸುವುದು ಬಹುತೇಕಕಷ್ಟವಾಗುತ್ತಿದೆ.ಭೌಧ್ಧಿಕಕಲಾವಿದರ ಹಾಗೂ ನಿರ್ದೇಶಕರತಯಾರಿಎಲ್ಲೂಕಾಣುತ್ತಿಲ್ಲ.
ನ್ಯೆತಿಕತೆಕಡಿಮೆಯಾಗುತ್ತಿರುವ ಈ ದಿಗಳಲ್ಲಿ ರಂಗ ಪತ್ರಿಕೆಗಳ ಪಾತ್ರ ಮಹತ್ವದ್ದುಆದರೆರಂಗ ಪತ್ರಿಕೆಗಳ ನಿರ್ವಹಣೆಗೂ ಸರಕಾರದ ಸಹಕಾರಅಗತ್ಯ.
‘ರಂಗ ತಂಡಗಳು’
ಒಂದು ‘ರಂಗತಂಡ’ ತನ್ನ ಚಟುವಟಿಕೆಗಳಿಂದ ಒಂದು ಸ್ಪಸ್ತ ಸಮಾಜ, ಸ್ವಸ್ತ ಮನಸ್ಸು ಹಾಗೂ ಸ್ವಸ್ತ ಪರಿಸರ ಸೃಷ್ಟಿಸಿ ನೂರಾರು ಸಮಾನ ಮನಸ್ಕರನ್ನುರಾಷ್ಟ್ರಮಟ್ಟದಕಲಾವಿದರನ್ನುಕೋಡುಗೆ ನಿಡಿರುವ ಹೆಗ್ಗಳಿಕೆ ನಮ್ಮರಾಜ್ಯದ್ದು.
ರಂಗ ತಂಡಗಳು ಕನ್ನಡರಂಗ ಭೂಮಿಯಲ್ಲಿಜನಪರ ಹಾಗೂ ಸಮಾಜ ಮುಖಿ ನಾಟಕ ಪ್ರಯೋಗಗಳನ್ನು ಕಟ್ಟುವ ಮೂಲಕ ಜನಾನುರಾಗಿಯಾಗಿವೆ.
ಅತ್ಯಾಧುನಿಕತಾಂತ್ರಿಕರಂಗಭೂಮಿ ಬೇಳವಣಿಗೆಗೆ ನಾವು ನಾಂದಿಯಾಗಬೇಕಾಗಿದೆಎಂಬುದು ಈ ಲೇಖನದ ಮುಖ್ಯ ಉದ್ದೇಶವಾಗಿದೆ. ಹೀಗಾದಾಗಲೇ ವಿಶ್ವರಂಗಭೂಮಿ ದಿನಕ್ಕೆ ಮನ್ನಣೆ ಹಾಗೂ ಮಹತ್ವ ಬರುತ್ತದೆ.
ಮಾರ್ಚ್ 27, 2002 ರಲ್ಲಿ ನಮ್ಮ ನಾಡಿನ ನಾಟಕರಾದಗಿರೀಶ್‍ಕಾರ್ನಾಡ್‍ಅವರು ವಿಶ್ವರಂಗ ಭೂಮಿ ದಿನದ ಸಂದೇಶ ನೀಡಿದ ಮೊದಲಿಗರಾಗಿದ್ದಾರೆ.
ಕಳೆದ 2020 ರ ಸಾಲಿನಲ್ಲಿ ಭಾರತ ಮೂಲದ ನಾಟಕಕಾರ, ಅಚೋಕಾ ಥಿಯೇಟರ್ ಮುಖ್ಯಸ್ಥ, ಪಾಕಿಸ್ತಾನ ಟೆಲಿವಿಷನ್ ನಿರ್ಮಾಪಕರಾದ ಶ್ರೀ ಶಾಹೀದ್ ನದೀಮ್ ವಿಶ್ವರಂಗಭೂಮಿ ದಿನದ ಸಂದೇಶ ನೀಡಿದ್ದಾರೆ.
ಲೇಖಕರು:ಡಾ.ಎ.ಆರ್.ಗೋವಿಂದಸ್ವಾಮಿ
ನಟರು,ವಿಮರ್ಶಕರು ಹಾಗೂ ರಂಗತಜ್ಞರು ಬೆಂ.,
ಮೊ: 9113243344
dr.govindaswamy@gmail.com


0 Comments