ಬೆಂಗಳೂರು, ಮಾರ್ಚ್ 12- ರಂಗಸಮುದ್ರ, ಜನಸಂಸ್ಕøತಿ ಹಾಗೂ ಕಾವ್ಯಮಂಡಲದ ವತಿಯಿಂದ ಖ್ಯಾತ ವಿಮರ್ಶಕ ಪ್ರೊ. ಕಿ.ರಂ.ನಾಗರಾಜ ನೆನಪಿನ ಕಾವ್ಯ ಶಿವರಾತ್ರಿ ಹಾಗೂ ಅಹೋ ರಾತ್ರಿ ಕಾವ್ಯಗಾಯನ ಕಾರ್ಯಕ್ರಮ ರಾಜರಾಜೇಶ್ವರಿ ನಗರದ ಟಿ.ಎನ್.ಬಾಲಕೃಷ್ಣ ಬಯಲು ರಂಗಮಂದಿರದಲ್ಲಿ ಗುರುವಾರ ನಡೆಯಿತು.
ದೊಡ್ಡಗವಿ ಬಸಪ್ಪ ಮತ್ತು ತಂಡದವರು ಮಂಟೇಸ್ವಾಮಿ ಮತ್ತು ಮಲೆ ಮಾದೇಶ್ವರ ಮಹಾಕಾವ್ಯವನ್ನು ಗಾಯನದ ಮೂಲಕ ಜನರನ್ನು ಮುದಗೊಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಕøತಿ ಚಿಂತಕರಾದ ಶೂದ್ರ ಶ್ರೀನಿವಾಸ್ ನೆರವೇರಿಸಿದರು. ಪ್ರಾಸ್ತಾವಿಕ ನುಡಿಯನ್ನು ಡಾ.ರಾಜಕುಮಾರ್ ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ.ಕೆ.ಸಿ ಶಿವಾರೆಡ್ಡಿ ನುಡಿದರು.
ಕಾರ್ಯಕ್ರಮದಲ್ಲಿ ಕವಿಗಳಾದ ಮೂಡ್ನಾಕೂಡು ಚಿನ್ನಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಕೆ.ಎನ್.ಕವನ, ಕಲಾವಿಮರ್ಶಕರಾದ ಸಿ.ಎಸ್. ಕೃಷ್ಣಶೆಟ್ಟಿ , ರಂಗಸಮುದ್ರ ಸಂಸ್ಥೆ ಅಧ್ಯಕ್ಷರಾದ ಹೊ.ಬೊ ಪುಟ್ಟೇಗೌಡ , ಡಿ.ಸಿ.ಗ್ರೂಪ್‍ನ ನವೀನ್ ಬಿಡದಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಕವಿಗೋಷ್ಠಿಯನ್ನು ಸಹ ಹಮ್ಮಿಕೊಳ್ಳಲಾಗಿತ್ತು.



0 Comments