Ticker

6/recent/ticker-posts

Ad Code

Responsive Advertisement

"ರಾಯರ ಸನ್ನಿಧಿಯಲ್ಲಿ ಶ್ರೀ ಗುರು-ವೈಭವೋತ್ಸವ"

 "ರಾಯರ ಸನ್ನಿಧಿಯಲ್ಲಿ ಶ್ರೀ ಗುರು-ವೈಭವೋತ್ಸವ" 

15-3-21 ರಿಂದ 20-3-2021


ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ  ಶ್ರೀ ರಾಘವೇಂದ್ರಸ್ವಾಮಿಗಳ400ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ 426 ನೇ ಜನ್ಮದಿನೋತ್ಸವದ ಅಂಗವಾಗಿ ಪರಮಪೂಜ್ಯ ಶ್ರೀ108ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ 15 ನೇ ತಾರೀಕು ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಬೆಳಗ್ಗೆ 7-30 ಕ್ಕೆ ಶ್ರೀ ರಾಘವೇಂದ್ರಸ್ವಾಮಿಗಳವರ ಬೃಂದಾವನಕ್ಕೆ ವಿಶೇಷ "ಸಹಸ್ರ ಕಳಶ ಕ್ಷೀರಾಭಿಷೇಕ" ನೆರವೇರಲಿದ್ದು ಬೆಳಗ್ಗೆ11ಕ್ಕೆ "ಸ್ವರ್ಣಸಿಂಹಾಸನ"ದಲ್ಲಿ ಶ್ರೀ ಗುರುರಾಯರ ಪಾದುಕೆಗಳನ್ನು ಇರಿಸಿ ಪುಷ್ಪ ವೃಷ್ಟಿಯಿಂದ "ಪಟ್ಟಾಭಿಷೇಕ"ಮಹೋತ್ಸವವು ಭಕ್ತಾದಿಗಳ ಸಹಕಾರದೊಂದಿಗೆ ಶ್ರೀ ವಾದೀಂದ್ರಆಚಾರ್ಯರ, ಹಾಗೂ ಜಿ.ಕೆ.ಆಚಾರ್ಯರ ಅಮೃತ ಹಸ್ತದಿಂದ ನೆರವೇರಲಿದೆ, ಸಂಜೆ 7 ಕ್ಕೆ ಕುಮಾರಿ-ದಿವ್ಯಶ್ರೀರಂಗನಾಥ್ ವೃಂದದಿಂದ "ಸ್ಯಾಕ್ಸೋಫೋನ್" ವಾದನ, ಹಾಗೂ 20 ನೇ ತಾರೀಕು ಶ್ರೀಗುರುರಾಯರ ಜನ್ಮದಿನೋತ್ಸವದ ಅಂಗವಾಗಿ ಉಡುಪಿಯ ಪೇಜಾವರ ಮಠದ ಪರಮಪೂಜ್ಯ ಶ್ರೀ108 ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಅಮೃತಹಸ್ತದಿಂದ ಶ್ರೀ ರಾಘವೇಂದ್ರ ಸ್ವಾಮಿಗಳವರ ಬೃಂದಾವನಕ್ಕೆ ಪುಷ್ಪಗಳಿಂದ  "ಲಕ್ಷಪುಷ್ಪಾರ್ಚನೆ" ಬೆಳಗ್ಗೆ ಹತ್ತು ಮೂವತ್ತಕ್ಕೆ ನೆರವೇರಲಿದೆ ಈ ಒಂದು ವಾರಗಳ ಕಾಲ ರಾಯರ ಸನ್ನಿಧಿಯಲ್ಲಿ ಪ್ರತಿನಿತ್ಯ ಬೆಳಗ್ಗೆ 8 ಕ್ಕೆ ಹೋಮಗಳು ೧೦-೩೦ ಉತ್ಸವಗಳು ಕನಕಾಭಿಷೇಕ ಮಹಾಮಂಗಳಾರತಿ  ಸಂಜೆ- ದೀಪೋತ್ಸವ ಪ್ರವಚನ ಶ್ರೀಹರಿಭಜನೆ 20-3-21ಸಂಜೆ 7 ಕ್ಕೆ ವಿದ್ವಾನ್ ವಿವೇಕ್ ವಿ,ಕೃಷ್ಣ ವೃಂದದಿಂದ "ಕೊಳಲು ವಾದನ"  ಹಾಗೂ ಅನ್ನಸಂತರ್ಪಣೆ ಮೊದಲಾದ ವಿಶೇಷ ಸೇವಾ ಕಾರ್ಯಕ್ರಮಗಳು ನೆರವೇರಲಿದೆ ಶ್ರೀ ಗುರು ರಾಯರ ಸೇವೆಯಲ್ಲಿ ಭಾಗವಹಿಸುವ ಭಕ್ತಾದಿಗಳು ಹೆಚ್ಚಿನ ಮಾಹಿತಿಗಾಗಿ- 080-22443962-9945429129, 9449133929- 8660349906  ಸಂಪರ್ಕಿಸಬಹುದು ಎಂದು ಕಿಶೋರ್ ಆಚಾರ್ಯ ತಿಳಿಸಿದರು.





Post a Comment

0 Comments

Ad Code

Responsive Advertisement