Ticker

6/recent/ticker-posts

Ad Code

Responsive Advertisement

ದ್ವಿಚಕ್ರವಾಹನ ಬಳಸಿ ಸರಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ, 154 ಗ್ರಾಂ ಚಿನ್ನಾಭರಣ ವಶ.

ಅಪರಾಧ ವಿಭಾಗದ ಸಿಬ್ಬಂದಿ 28-02-2021 ರ ಸಂಜೆ ಗಸ್ತಿನಲ್ಲಿದ್ದಾಗ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂಪಸಂದ್ರ ಬಸ್ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಯಮಹಾ ಆರ್‍ಎಕ್ಸ್ ಬಂದಾಗ ತಡೆದು ದಾಖಲಾತಿ ಪರಿಶೀಲಿಸಿದಾಗ ಯಾವುದೇ ದಾಖಲಾತಿ ಇರುವುದಿಲ್ಲ. ಈತನನ್ನು ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ತಂದು ವಿಚಾರಣೆ ಮಾಡಲಾಗಿ ಕಳವು ಮಾಡಿರುವ ದ್ವಿಚಕ್ರವಾಹನವಾಗಿರುತ್ತದೆ. ಪ್ರಕರಣದ ಆರೋಪಿಗಳಾದ ಆಸೀಫ್ ಪಾಷ, ಅರ್ಷದ್‍ಖಾನ್ ಎಂಬುವರನ್ನು ದಸ್ತಗಿರಿ ಮಾಡಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 6.9 ಲಕ್ಷ ರೂ. ಬೆಲೆ ಬಾಳುವ 154 ಗ್ರಾಂ ಚಿನ್ನಾಭರಣ ಮತ್ತು 1-ಯಮಹಾ ಆರ್‍ಎಕ್ಸ್ ದ್ವಿಚಕವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಸಂಜಯನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

 ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಆರೋಪಿ ಆಸೀಪ್ ಪಾಷ ಈತನು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಹಳೆಯ ಎಂ ಓ ಆಸಾಮಿಯಾಗಿದ್ದು, 2012 ನೇ ಸಾಲಿನಲ್ಲಿ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದರೋಡೆ ಸಂಚು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುತ್ತಾನೆ. ಈತನು ಮತ್ತೊಬ್ಬ ಆರೋಪಿ ಅರ್ಷದ್‍ಖಾನ್ ಜೊತೆಯಲ್ಲಿ ಸೇರಿಕೊಂಡು ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾಗಿ ತಿಳಿದು ಬಂದಿರುತ್ತದೆ. ಆರೋಪಿ ಅರ್ಷದ್ ಖಾನ್ ಈತನು ಆರ್.ಟಿ.ನಗರ ಪೊಲೀಸ್ ಠಾಣೆಯ ಹಳೆಯ ಎಂ.ಓ. ಆಸಾಮಿಯಾಗಿದ್ದು, 2020 ನೇ ಸಾಲಿನಲ್ಲಿ ಆರ್.ಟಿ.ನಗರ ಪೊಲೀಸ್ ಠಾಣೆಯ ದರೋಡೆ ಸಂಚು ಪ್ರಕರಣದಲ್ಲಿ ಜೈಲಿಗೆ ಹೋಗಿ ನವೆಂಬರ್ 2020 ರಲ್ಲಿ ಬಿಡುಗಡೆಯಾಗಿರುತ್ತಾನೆ. ಇಬ್ಬರು ಆರೋಪಿ ಜೊತೆಗೂಡಿ ಬೆಳಿಗ್ಗೆ ಮತ್ತು ರಾತ್ರಿ ವೇಳೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗಮನಿಸಿಕೊಂಡು ಅವರುಗಳ ಸರಗಳ್ಳತನ ಮಾಡುತ್ತಿದ್ದಾಗಿ ತನಿಖೆಯಿಂದ ಬಂದಿರುತ್ತದೆ. ಆರೋಪಿಗಳ ಬಂಧನದಿಂದ ಸಂಜಯನಗರ ಪೊಲೀಸ್ ಠಾಣೆ-1 ದ್ವಿಚಕ್ರವಾಹನ ಕಳವು ಪ್ರಕರಣ, ಹೆಬ್ಬಾಳ -1, ಬೈಯಪ್ಪನಹಳ್ಳಿ -2, ವಿವೇಕ್ ನಗರ ಪೊಲೀಸ್ ಠಾಣೆಯ -1 ಸರಗಳ್ಳತನ ಒಟ್ಟು 4 ಸರಗಳ್ಳತನ ಮತ್ತು 1-ದ್ವಿಚಕ್ರವಾಹನ ಕಳವು ಪ್ರಕರಣ ಪತ್ತೆಯಾಗಿರುತ್ತವೆ. ಪ್ರಕರಣದಲ್ಲಿ ಶ್ರೀಮತಿ ರೀನಾ ಎನ್ ಸುವರ್ಣ, ಎಸಿಪಿ, ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಕಾತ್ಯಾಯಿನಿ ಆಳ್ವ ಎಸ್., ಪೊಲೀಸ್ ಇನ್ಸ್‍ಪೆಕ್ಟರ್, ಸಂಜಯನಗರ. ರಘುಪತಿ ಹೆಚ್.ಎಸ್., ಶಿವಮೂರ್ತಿ, ಪ್ರದೀಪ್ ಕುಮಾರ್, ಪಾಂಡುರಂಗ, ಅರುಣ್ ಕುಮಾರ್.ವಿ.ಬಿ, , ಪ್ರದೀಪ.ಎಂ ಇವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Post a Comment

0 Comments

Ad Code

Responsive Advertisement