Ticker

6/recent/ticker-posts

Ad Code

Responsive Advertisement

ಸಿಡಿ ಪ್ರಕರಣ ತನಿಖೆಗೆ ಎಸ್​ಐಟಿ ತಂಡ ರಚನೆ

 ಬೆಂಗಳೂರು (ಮಾ. 12): ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್​ಐಟಿ ತನಿಖೆಗೆ ವಹಿಸಿ ಕಳೆದ ಎರಡು ದಿನಗಳ ಹಿಂದೆ ಆದೇಶ ಹೊರಡಿಸಿತ್ತು. ಹೆಚ್ಚುವರಿ ಪೊಲೀಸ್​ ಆಯುಕ್ತ ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಎಸ್​ಐಟಿ ತನಿಖೆ ರಚಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್​ ಬೊಮ್ಮಯಿ ತಿಳಿಸಿದ್ದರು. ಈ ಎಸ್​ಐಟಿ ತಂಡದಲ್ಲಿ ಯಾವೆಲ್ಲ ಅಧಿಕಾರಿಗಳು ಇರಲಿದ್ದಾರೆ. ಈ ಸಿಡಿ ತನಿಖೆ ಯಾವ ರೀತಿ ನಡೆಸಬೇಕು ಎಂಬ ಕುರಿತು ಇಂದು ನಗರದ ಹಿರಿಯ ಪೊಲೀಸ್​ ಅಧಿಕಾರಿಗಳು ಇಂದು ಚರ್ಚೆ ನಡೆಸಿದರು. ನಗರ ಪೊಲೀಸ್​ ಆಯುಕ್ತ ಕಮಲ್ ಪಂತ್​ ,ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದು, ಏಳು ಜನರ ತಂಡವನ್ನು ಒಳಗೊಂಡ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದಾರೆ.


ಅಧಿಕಾರಿ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ಸಂದೀಪ್ ಪಾಟೀಲ್ (ಜಂಟಿ ಪೊಲೀಸ್ ಆಯುಕ್ತ), ರವಿಕುಮಾರ್(ಡಿಸಿಪಿ), ಅನುಚೇತ್ ( ಡಿಸಿಪಿ), ಎಸಿಪಿ ಧರ್ಮೇದ್ರ ಕುಮಾರ್, ಕಬ್ಬನ್​ ಪಾರ್ಕ್​ ಠಾಣೆ ಇನ್ಸ್​​​​ಪೆಕ್ಟರ್ ಮಾರುತಿ, ಸೈಬರ್​ ಕ್ರೈಂ ಇನ್ಸ್​​​​ಪೆಕ್ಟರ್ ಪ್ರಶಾಂತ್ ಬಾಬು ಒಳಗೊಂಡ ತಂಡ ರಚನೆ ಮಾಡಲಾಗಿದೆ. ತನಿಖೆಗೆ ಹೆಚ್ಚಿನ ಸಿಬ್ಬಂದಿ ಬೇಕಾದ್ರೆ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿದೆ.ಪ್ರಕರಣದ ಕುರಿತು ಕಾನೂನಿನ ಚೌಕಟ್ಟಿನಲ್ಲಿ ಎಸ್​ಐಟಿ ಪ್ರಾಥಮಿಕವಾಗಿ ತನಿಖೆ ನಡೆಸಿದ ಬಳಿಕ ಕಮಿಷನರ್​ಗೆ ವರದಿ ಸಲ್ಲಿಸಲಿದೆ. ಈ ತಂಡ ಯಾವ ರೀತಿಯ ತನಿಖೆ ಎಂದು ಸದ್ಯಕ್ಕೆ ಚರ್ಚೆ ನಡೆಸಲ್ಲ. ಆದರೆ ತಂಡದಲ್ಲಿರುವ ಅಧಿಕಾರಿಗಳು ತನಿಖೆಗೆ ಸೂಕ್ತರಾಗಿದ್ದು, ಈ ಹಿಂದೆ ಒಳ್ಳೆಯ ಕೇಸ್​ಗಳ ತನಿಖೆ ನಡೆಸಿದ್ದಾರೆ ಎಂದು ಆಯುಕ್ತ​ ಕಮಲ್​ ಪಂತ್​ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿಗೆ ಎಸ್​ಐಟಿ ನೊಟೀಸ್​ ನೀಡುವ ಸಾಧ್ಯತೆ ಇದ್ದು ಈ ವೇಳೆ ದಿನೇಶ್ ಕಲ್ಲಹಳ್ಳಿ ಬಳಿ ಇರುವ ಅಸಲಿ ವಿಡಿಯೋದ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ದೂರಿನ ವೇಳೆ ದಿನೇಶ್​ ಕಲ್ಲಹಳ್ಳಿ ಎಡಿಟೆಡ್​ ವಿಡಿಯೋವನ್ನು ನೀಡಿದ್ದರು. ಅಲ್ಲದೇ, ಸಂತ್ರಸ್ತೆ ಯುವತಿ ಬಗ್ಗೆ ಕೂಡ ಇದುವರೆಗೂ ಅವರು ತಿಳಿಸಿಲ್ಲ. ಈ ಹಿನ್ನಲೆ ದಿನೇಶ್​ ಕಲ್ಲಹಳ್ಳಿ ವಿಚಾರಣೆ ನಡೆಸಲಿದ್ದಾರೆ.
ದಿನೇಶ್​ ಕಲ್ಲಹಳ್ಳಿ ಆರೋಪಕ್ಕೆ ಪ್ರತಿಯಾಗಿ ರಮೇಶ್​ ಜಾರಕಿಹೊಳಿ ಇದುವರೆಗೂ ಯಾವುದೇ ದೂರು ದಾಖಲಿಸಿಲ್ಲ. ಅಲ್ಲದೇ ಪ್ರಕರಣದ ಕುರಿತು ಸದ್ಯ ಯಾವುದೇ ಎಫ್​ಐಆರ್​ ದಾಖಲಾಗದ ಹಿನ್ನಲೆ ರಮೇಶ್​ ಜಾರಕಿಹೊಳಿ ಅವರಿಂದ ಕೂಡ ದೂರು ದಾಖಲಿಸುವಂತೆ ಸೂಚನೆ ನೀಡುವ ಸಾಧ್ಯತೆ ಇದೆ.

Post a Comment

0 Comments

Ad Code

Responsive Advertisement