ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 04-03-2021ರಂದು ನನ್ನ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ‘ಫಾದರ್ ಚಸರಾ ಕನ್ನಡ ಸಂಸ್ಕತಿ ದತ್ತಿ ಪ್ರಶಸ್ತಿ’ಗೆ ಎ. ಆರೋಗ್ಯಪ್ಪ ಮತ್ತು ಜಾಣಗೆರೆ ವೆಂಕಟರಾಮಯ್ಯ ಅವರುಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಮೊತ್ತ ತಲಾ ರೂ. 10,000- ನಗದು, ಸ್ಮರಣಿಕೆÉ ಹಾಗೂ ಫಲತಾಂಬೂಲಗಳನ್ನು ಒಳಗೊಂಡಿರುತ್ತದೆ.
![]() |
| JANAGERE VENKATARAMAIAH & AROGYAPPA |
ನಾಡಿನ ಹಿರಿಯ ಲೇಖಕರೂ, ಪತ್ರಕರ್ತರೂ ಆದ ಜಾಣಕೆರೆ ವೆಂಕಟರಾಮಯ್ಯನವರು ಕನ್ನಡಪರ ಹೋರಾಟವೂ ಸೇರಿದಂತೆ, ಎಲ್ಲ ಜನಪರ ಚಳುವಳಿಗಳ ಮುಂಚೂಣಿಯಲ್ಲಿರುವವರು. ಕನ್ನಡ ಕಟ್ಟುವ ಕಾಯಕವನ್ನು ಅತ್ಯಂತ ಶ್ರದ್ಧೆ ಮತ್ತು ಬದ್ಧತೆಯಿಂದ ನಡೆಸುತ್ತಿರುವ ಜಾಣಗೆರೆಯವರು ಅಸ್ಖಲಿತ ವಾಗ್ಮಿಯೂ ಹೌದು.
ಎ ಆರೋಗ್ಯಪ್ಪ ಅವರು ನಿರಂತರ 55 ವರ್ಷಗಳಿಂದ ಚರ್ಚುಗಳಲ್ಲಿ ಕನ್ನಡ ಪೂಜೆ ನಡೆಸಬೇಕೆಂಬ ಹೋರಾಟದಲ್ಲಿ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತರ ಕನ್ನಡ ಸಂಘದೊಂದಿಗೆ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. 95 ವರ್ಷ ವಯಸ್ಸಿನ ಅವರು ಈಗಲೂ ಸಂತ ಜೋಸೆಫರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಕ್ರಿಯಾಶೀಲರಾಗಿದ್ದಾರೆ.
ಆಯ್ಕೆ ಸಮಿತಿ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಪದ್ಮರಾಜ ದಂಡಾವತಿ, ಕೆ. ರಾಜಕುಮಾರ್, ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಅವರುಗಳು ಉಪಸ್ಥಿತರಿದ್ದರು.
ADVERTISEMENT


0 Comments