Ticker

6/recent/ticker-posts

Ad Code

Responsive Advertisement

ಗುಣಮಟ್ಟ ಜೀವನ: 111 ನಗರಗಳ ಪೈಕಿ ಬೆಂಗಳೂರಿಗೆ ಮೊದಲನೇ ಸ್ಥಾನ

ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ(Ministry of  Housing & Urban Affairs)ವು "ಈಸ್ ಆಫ್ ಲಿವಿಂಗ್ ಮತ್ತು ಮುನ್ಸಿಪಲ್ ಪರ್ಫಾರ್ಮೆನ್ಸ್ ಇಂಡಿಸಿಸ್-2020"(Ease of Living and Municipal Performance Indices-2020)ರ ವರ್ಚ್ಯುಯಲ್ ಮೂಲಕ ಸನ್ಮಾನ್ಯ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ ದೀಪ್ ಸಿಂಗ್ ಪುರಿ ರವರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಯಿತು. ಈ ವೇಳೆ ಮಾನ್ಯ ಸಂಸದ ಪಿ.ಸಿ.ಮೋಹನ್,  ಆಯುಕ್ತ ಎನ್.ಮಂಜುನಾಥ್ ಪ್ರಸಾದ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ರವರು ಪಾಲಿಕೆ ಕೇಂದ್ರ ಕಛೇರಿಯಲ್ಲಿರುವ ವಾರ್ ರೂಂನಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. 

ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರತಿವರ್ಷವೂ ಈಸ್ ಆಫ್ ಲಿವಿಂಗ್ ಮತ್ತು  ಮುನ್ಸಿಪಲ್ ಫಾರ್ಮಾಮೆನ್ಸ್ ಇಂಡಿಸಿಸ್ ನ ಸೂಚ್ಯಂಕ ಬಿಡುಗಡೆ ಮಾಡಲಿದ್ದು, ಗುಣಮಟ್ಟದ ಜೀವನ ನಡೆಸಲು(ಈಸ್ ಆಫ್ ಲಿವಿಂಗ್) 111 ನಗರಗಳ ಪೈಕಿ ಬೆಂಗಳೂರು ಮೊದಲನೇ ಸ್ಥಾನ ಪಡೆದಿದೆ ಎಂದು ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ರವರು ತಿಳಿಸಿದರು. 

ಸಭೆ ಮುಗಿದ ಬಳಿಕ ಆಯುಕ್ತರು ರವರು ಮಾತನಾಡಿ, ಈಸ್ ಆಫ್ ಲಿವಿಂಗ್  ಮೊದಲನೆಯದಾಗಿ ನಗರದಲ್ಲಿ ವಾಸಿಸುತ್ತಿರುವ ಜನರ ಜೀವನಮಟ್ಟ, ಗುಣಮಟ್ಟದಲ್ಲಿ ಜೀವನ ನಡೆಸಲು ಬೇಕಾದ ಸೌಕರ್ಯಗಳು, ಶಿಕ್ಷಣ, ಆರೋಗ್ಯ, ಸುರಕ್ಷತೆ, ಘನತ್ಯಾಜ್ಯ ನಿರ್ವಹಣೆ ಸೌಲಭ್ಯಗಳ ಬಗ್ಗೆ, ಎರಡನೆಯದಾಗಿ ಜನರ ಆರ್ಥಿಕ ಅಭಿವೃದ್ಧಿಗಾಗಿ ನಗರ ಎಷ್ಟು ಸಹಕಾರಿಯಾಗಿದೆ, ಅವಕಾಶಗಳೇನಿವೆ, ಎಂಬುದು ಹಾಗೂ ಮೂರನೆಯದಾಗಿ ನಗರದ ಪರಿಸರ ಯಾವ ಗುಣಮಟ್ಟದಲ್ಲಿದೆ ಎಂಬುದು ಸೇರಿ ಮೂರು ಮಾನದಂಡಗಳ ಮೇಲೆ ಕೇಂದ್ರ ಸರ್ಕಾರವು ನಗರದಾದ್ಯಂತ ಜನರ ಅಭಿಪ್ರಾಯ ಪಡೆದು, ಸಮೀಕ್ಷೆ ನಡೆಸಿ ಅಂಕ ನೀಡಲಿದೆ. 100 ಅಂಕಗಳಲ್ಲಿ, ಶೇ. 30 ಅಂಕಗಳು ಜನ ನಿಡುವ ಅಭಿಪ್ರಾಯದಿಂದ ನೀಡಲಿದ್ದಾರೆ ಎಂದು ತಿಳಿಸಿದರು.

ಇಡೀ ದೇಶದಲ್ಲಿ ನಗರಗಳನ್ನು ಎರಡು ವಿಭಾಗ ಮಾಡಿ, 10 ಲಕ್ಷಕ್ಕಿಂತ ಕಡಿಮೆಯಿರುವ ನಗರಗಳು ಹಾಗೂ 10 ಲಕ್ಷಕ್ಕಿಂತ ಹೆಚ್ಚಿರುವ ಜನಸಂಖ್ಯೆಯ ನಗರಗಳಾಗಿ ವಿಂಗಡಿಸಿದ್ದು, 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ನಗರಗಳನ್ನು ತೆಗೆದುಕೊಂಡಾಗ ಉತ್ತಮ ಜೀವನ ನಡೆಸಲು ಬೆಂಗಳೂರು ಉತ್ತಮ ನಗರ ಎಂದು ಎಂದು ಮೊದಲ ರ‍್ಯಾಂಕ್ ನೀಡಿದೆ. ಮೊದಲ 50 ನಗರಗಳನ್ನು ತೆಗೆದುಕೊಂಡಾಗ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ಇದು ಕೇವಲ ಬಿಬಿಎಂಪಿಗಷ್ಟೇ ಅಲ್ಲ ಜಲಂಮಡಳಿ, ಬಿಡಿಎ, ಬೆಸ್ಕಾಂ, ಮೆಟ್ರೋ, ಬಿಎಂಟಿಸಿಗೂ ಸೇರಿದಂತೆ ಇಲ್ಲಿನ ಸಂಘ-ಸಂಸ್ಥೆಗಳು ಹಾಗೂ ಜನರು ಒಟ್ಟಿಗೆ ಸೇರಿರುವುದರಿಂದ ಈ ಗೌರವ ಸಂದಿದೆ. ಮೊದಲ ಸ್ಥಾನ ಪಡೆಯುವುದು ಮುಖ್ಯವಲ್ಲ ಅದನ್ನು ಮುಂದೆಯೂ ಉಳಿಸಿಕೊಂಡು ಹೋಗುವುದು ಬಹಳ ಮುಖ್ಯ. ಆದ್ದರಿಂದ ಅದೇ ಸ್ಥಾನವನ್ನು ಉಳಿಸಿಕೊಂಡು ಹೋಗಲು ಬೆಂಗಳೂರು ನಗರವನ್ನು ಅತ್ಯಂತ ಸುಂದರ ಮತ್ತು ಒಳ್ಳೆಯ ನಗರವನ್ನಾಗಿಸುವ ನಿಟ್ಟಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ರವರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಾಗುವುದು ಎಂದರು.

ಮುನ್ಸಿಪಲ್ ಪರ್ಫಾಮೆನ್ಸ್ ಇಂಡೆಕ್ಸ್ ಅನ್ನು ಐದು ವಿಭಾಗಗಳಲ್ಲಿ ಗುರುತಿಸಲಿದ್ದು, ಬಿಬಿಎಂಪಿಗೆ ಯಾವುದೇ ಅಂಕ ಬಂದಿಲ್ಲ. ಈ ಪೈಕಿ ಎಲ್ಲೆಲ್ಲಿ ತಪ್ಪಾಗಿದೆ, ಎಲ್ಲೆಲ್ಲಿ ಎಡವಿದ್ದೇವೆ ಎಂಬುದನ್ನು ನೋಡಿಕೊಂಡು ಅದನ್ನು ಸರಿಪಡಿಸಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಅಂಕ ಪಡೆಯಲು ಕೆಲಸ ಮಾಡಲಾಗುವುದು ಎಂದರು. ಹಣಕಾಸು, ತಂತ್ರಜ್ಞಾನ, ಪಾಲಿಸಿ, ಆಡಳಿತ ವಿಭಾಗಗ ಸೇರಿದಂತೆ ಇನ್ನಿತರೆ ಅಂಶಗಳ ಅಡಿಯಲ್ಲಿ ಅಂಕ ನೀಡಲಿದ್ದು, ಕೆಲವೆಡೆ ಕಡಿಮೆ ಅಂಕಗಳು ಬಂದಿವೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಪಡಿಸಿ ಉತ್ತಮ ಅಂಕ ಗಳಿಸಲಾಗುವುದು ಎಂದರು.  

ಸಂಸದ ಪಿ.ಸಿ.ಮೋಹನ್ ರವರು ಮಾತನಾಡಿ, ಈಸ್ ಆಫ್ ಲಿವಿಂಗ್ ಸಮೀಕ್ಷೆಯಲ್ಲಿ ಬೆಂಗಳೂರಿಗೆ ಮೊದಲನೇ ಸ್ಥಾನ ಬಂದಿರುವುದಕ್ಕೆ ಅಭಿನಂದನೆಗಳು. 1.30 ಕೋಟಿ ಜನಸಂಖ್ಯೆಗೆ ಎಲ್ಲಾ ರೀತಿಯ ಸೌಲಭ್ಯ ನೀಡಿ, ಉದ್ಯಾನಗಳು ಹಾಗೂ ಕೆರೆಗಳ ಅಭಿವೃದ್ಧಿಯಿಂದ ಈ ಸಮೀಕ್ಷೆಯಲ್ಲಿ ಮೊದಲ ಸ್ಥಾನ ಬಂದಿದೆ. ಕೇಂದ್ರ ಸರ್ಕಾರದ ಎಲ್ಲಾ ಸಹಕಾರವೂ ಬೆಂಗಳೂರು ನಗರದೊಂದಿಗೆ ಇದೆ ಎಂದು ತಿಳಿಸಿದರು.

ಈಸ್ ಆಫ್ ಲಿವಿಂಗ್(EoL) ಮತ್ತು ಮುನ್ಸಿಪಲ್ ಪರ್ಫಾರ್ಮೆನ್ಸ್ ಇಂಡಿಸಿಸ್(MPI)-2020ರ ಸಭೆ ಮತ್ತು ಫಲಿತಾಂಶ ಘೋಷಣೆಯ ಸಂಪೂರ್ಣ ವೀಡಿಯೋವನ್ನು ಈ ಕೆಳಗಿನ ಪೇಸ್ ಬುಕ್ ಲಿಂಕ್ https://www.facebook.com/smartcitiesmohua/videos/2879514952337226/ ಗೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ.

ನಗರಗಳಿಗೆ ಅಂಕ ಘೋಷಿಸಿರುವ ಲಿಂಕ್ https://eol.smartcities.gov.in/dashboard ಗೆ ಭೇಟಿ ನೀಡಿ ಯಾವ ನಗರಕ್ಕೆ ಯಾವ ಸ್ಥಾನ ಸಿಕ್ಕಿದೆ ಎಂಬುದನ್ನು ನೋಡಬಹುದಾಗಿದೆ.



Post a Comment

0 Comments

Ad Code

Responsive Advertisement