ರಾತ್ರಿ ಸಮಯದಲ್ಲಿ ಆರೋಪಿಗಳು ಗಾಂಧಿನಗರದ ಎಸ್.ಎನ್. ಬಜಾರ್‍ನ ಶಾಫ್‍ಗಳ ಕೀ ತೆರೆದು ಶಾಫ್‍ಗಳಲ್ಲಿ 9 ಐಪೋನ್ ಮೊಬೈಲ್ ಪೋನ್‍ಗಳು ಮತ್ತು ನಗದು ಹಣ, 5,66,000/-ರೂಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಉಪ್ಪಾರಪೇಟೆ ಪೊಲೀಸ್ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಪೊಲೀಸ್ ಇನ್ಸ್‍ಪೆಕ್ಟರ್ ಸಿ.ಬಿ. ಶಿವಸ್ವಾಮಿ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ಆರೋಪಿ ಶಬ್ಬೀರ್ ನನ್ನು ದಸ್ತಗಿರಿ ಮಾಡಿ ವಿಚಾರಣೆಗೊಳಪಡಿಸಲಾಗಿ ಗಾಂಧಿನಗರ, ಎಸ್.ಎನ್. ಬಜಾರ್ ಶಾಫ್‍ಗಳಲ್ಲಿ ನಕಲೀ ಕೀಗಳಿಂದ ಡೋರ್ ಲಾಕ್‍ಗಳನ್ನು ತೆರೆದು ಮೊಬೈಲ್ ಪೋನ್‍ಗಳು ಮತ್ತು ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾಗಿ ಒಪ್ಪಿಕೊಂಡಿರುತ್ತಾನೆ.
ಆರೋಪಿ ತನ್ನ ಸಹಚರರಾದ ಜಯ ಮತ್ತು ಮೋರಿಕಾಂತ ಜೊತೆ ಸೇರಿಕೊಂಡು ಉಪ್ಪಾರಪೇಟೆ, ಕಲಾಸಿಪಾಳ್ಯ ಮತ್ತು
ಚಾಮರಾಜಪೇಟೆ ಪೊಲೀಸ್ ಠಾಣಾ ಸರಹದ್ದಿನ ಬಸ್ ನಿಲ್ದಾಣ ಮತ್ತು ಜನ ಸಂದಣಿ ಪ್ರದೇಶಗಳಲ್ಲಿ ಕಳವು ಮಾಡಿರುವುದಾಗಿ
ಮಾಹಿತಿ ನೀಡಿದ್ದಾನೆ. ಒಟ್ಟು 05 ಪ್ರಕರಣಗಳಿಗೆ ಸೇರಿದಂತೆ 18,49,500/-ರೂ ಬೆಲೆ ಬಾಳುವ 201 ಗ್ರಾಂ ತೂಕದ ವಿವಿಧ ರೀತಿಯ ಚಿನ್ನದ ಆಭರಣಗಳು, 8 ಕೆ.ಜಿ. ಬೆಳ್ಳಿಯ ಸಾಮಾನುಗಳು ಮತ್ತು ನಗದು ಹಣ 3,85,000/-ರೂಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ.


0 Comments