ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ರುಡ್‌ಸೆಟ್ ಮತ್ತು ಆರ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ
ಧರ್ಮಸ್ಥಳ : ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ರುಡ್‌ಸೆಟ್ ಮತ್ತು ಆರ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಪೂಜ್ಯ ಡಾ. ಡಿ. ವಿರೇಂದ್ರ ಹೆಗ್ಗಡೆಯವರಿಂದ ಮಹಿಳಾ ಉದ್ದಿಮೆದಾರರೊಂದಿಗೆ ವೆಬಿನಾರ್ ಮೂಲಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಹಿಳೆಯರು ಗಮನಿಸಬೇಕಾದ ೩ ಅಂಶಗಳನ್ನು ತಿಳಿಸುತ್ತಾ ಮೊದಲನೆಯದಾಗಿ ಸ್ವ ಉದೋಗ ನಂತರ ಸಂಪಾದನೆ ಜೊತೆಗೆ ಉಳಿತಾಯಗಳ ಬಗ್ಗೆ ತಿಳಿಸಿದರು. ಹೆಣ್ಣು ಹಿಂದೆ ಉಳಿಯುವಂತವಳಲ್ಲ ಅಲ್ಲ, ಗಂಡಿನ ಜೊತೆಗೂಡಿ ನಡೆಯಬೇಕಾದವಳು ಎಂದು ತಿಳಿಸಿದರು. ದೇಶದಾದ್ಯಂತ ಇರುವ ೫೮೫ ಆರ್‌ಸೆಟ್ ಸಂಸ್ಥೆಗಳ ಆಯ್ದ ಮಹಿಳಾ ಉದ್ದಿಮೆದಾರರನ್ನು ಕುರಿತು ಮಾತನಾಡಿದರು. ಧರ್ಮಸ್ಥಳದಲ್ಲಿ ನಡೆದ ಈ ವೆಬಿನಾರಿನಲ್ಲಿ ನೇಸರ್, ಬೆಂಗಳೂರು ಇದರ ರಾಷ್ಟ್ರೀಯ ನಿರ್ದೇಶಕರಾದ ಶ್ರೀ ಬಿಪುಲ್ ಚಂದ್ರ ಸಾಹ, ನಿಯಂತ್ರಕ ಮೌಲ್ಯಮಾಪನ ಅಧಿಕಾರಿ ಶ್ರೀ ಆರ್ ಆರ್ ಸಿಂಗ್, ವೆಬಿನಾರ್ ಮೂಲಕ ಬೆಂಗಳೂರಿನಲ್ಲಿರುವ ರುಡ್‌ಸೆಟ್ ನ್ಯಾಷನಲ್ ಎಕಾಡಮಿಯ ಡೈರೆಕ್ಟರ್ ಜನರಲ್ ಶ್ರೀ ಸತಿಯ ಮೂರ್ತಿ, ರುಡ್‌ಸೆಟ್ ಸಂಸ್ಥೆ, ಉಜಿರೆಯ ನಿದೇಶಕರಾದ ಶ್ರೀ ಪಿ.ಸಿ ಹಿರೇಮಠ್‌ರವರು ಮತ್ತು ಆರ್‌ಸೆಟ್ ಸಂಸ್ಥೆಗಳ ನಿರ್ದೇಶಕರುಗಳು, ಸಿಬ್ಬಂದಿ ವರ್ಗದವರು ಈ ವೆಬಿನಾರ್ ನಲ್ಲಿ ಭಾಗವಹಿಸಿದ್ದರು.
0 Comments