ಬೆಂಗಳೂರು ನಗರ ಜಿಲ್ಲೆ ಫೆ.25, (ಕರ್ನಾಟಕ ವಾರ್ತೆ) :ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಮಾರ್ಚ್ ನಿಂದ ಜುಲೈ ಮಾಹೆಯ ವರಗೆ ನೆರೆವೇರಿಸಲು ಅರ್ಹ ವಧು- ವರರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬನಶಂಕರಿಯಲ್ಲಿರುವ ಬನಶಂಕರಿ ದೇವಾಲಯ, ಹನುಮಂತನಗರದಲ್ಲಿರುವ ಕುಮಾರಸ್ವಾಮಿ ಮತ್ತು ಸಮೂಹ ದೇವಾಲಯಗಳು, ಗವೀಪುರಂ ಗುಟ್ಟಳ್ಳಿಯಲ್ಲಿರುವ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಬಸವನಗುಡಿಯಲ್ಲಿರುವ ದೊಡ್ಡಗಣಪತಿ ದೇವಾಸ್ಥಾನ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವಾಲಯ, ಮಲ್ಲೇಶ್ವರಂನಲ್ಲಿರುವ ಕಾಡುಮಲ್ಲೇಶ್ವರ ದೇವಾಲಯ ಮತ್ತು ವೇಣುಗೋಪಾಲಕೃಷ್ಣಸ್ವಾಮಿ ದೇವಾಲಯ, ಚಾಮರಾಜಪೇಟೆಯಲ್ಲಿರುವ ಮಿಂಟೋ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳು ನೆರವೇರಲಿವೆ.
ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವರನಿಗೆ ವಿವಾಹ ಸಾಮಾಗ್ರಿಗಳನ್ನು ಖರೀದಿಸಲು 5 ಸಾವಿರ ರೂ.ನಗದು ಹಾಗೂ ವಧುವಿಗೆ ಒಡವೆ ಮತ್ತು ವಿವಾಹ ಸಾಮಾಗ್ರಿಗಳನ್ನು ಖರೀದಿಸಲು 50 ಸಾವಿರ ರೂ. ಹಣವನ್ನು ದೇವಾಲಯದಿಂದಲೇ ನೀಡಲಾಗುವುದು. ಈ ಅವಕಾಶವನ್ನು ಸದುಪಯೋಗಪಡಿದುಕೊಳ್ಳಲು ಬಯಸುವವರು ದೇವಾಲಯಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ವಿವಾಹದ ಲಗ್ನ, ಸಮಯ ಹಾಗೂ ಇತರೆ ಮಾಹಿತಿಗಾಗಿ ನೋಡಲ್ ಅಧಿಕಾರಿಯಾದ ಪದ್ಮ 9845716687, ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಕುಮಾರಯ್ಯ(9449224465), ಸಿ. ಕೃಷ್ಣ 9980951333, ಮೋಹನ್ 9880055733 ಹಾಗೂ ಡಿ. ನಾಗರಾಜು ಅವರನ್ನು 9980151936 ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

0 Comments