Ticker

6/recent/ticker-posts

Ad Code

Responsive Advertisement

ಸಚಿವಾಲಯ ಕ್ಲಬ್ ಕಾರ್ಯಕಾರಿ ಮಂಡಲಿಗೆ ನೂತನ ಸದಸ್ಯರು ಆಯ್ಕೆ

ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಕಾರ್ಯಕಾರಿ ಮಂಡಲಿಗೆ ಭಾನುವಾರ ಚುನಾವಣೆ ನಡೆಯಿತು. ಕೆ.ಜಿ.ಎಸ್. ಕ್ಲಬ್ ನ ಗೌ. ಕಾರ್ಯದರ್ಶಿ ಯು.ಡಿ. ನರಸಿಂಹಯ್ಯ, ಸಚಿವಾಲಯ ಸಹಕಾರ ಸಂಘದ ಅಧ್ಯಕ್ಷ ಹೆಚ್. ಹನುಮೇಗೌಡ, ಕ.ರಾ.ಸ. ಎನ್.ಪಿ.ಎಸ್.ನೌಕರರ ಸಂಘದ ಅಧ್ಯಕ್ಷ ಶಾಂತರಾಮ ತೇಜ ಇವರುಗಳ ನೇತೃತ್ವದಲ್ಲಿ  ಅಭ್ಯರ್ಥಿಗಳಾಗಿ ಸ್ಪರ್ಧಿಸಿದ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಪಿ. ನಾಯಕತ್ವದ ತಂಡದ ಸಹ ಅಭ್ಯರ್ಥಿಗಳಾದ ಕೆ.ಜಿ.ಎಸ್. ಕ್ಲಬ್ ನ ನಿರ್ದೇಶಕ ನಾಗಭೂಷಣ ಎಲ್.ಎನ್‌., ಬಿ. ಎಲ್. ಕಾಂತರಾಜು, ಮಹೇಂದ್ರ ಎಂ. ವಿ. ಹಾಗೂ ಹೇಮಂತ್ ನಾಯಕ ರವರೊಂದಿಗೆ  ಎಸ್.ಎನ್. ಕೃಷ್ಣಕುಮಾರ್ ರವರು ಸೇರಿದಂತೆ ಆರು ಜನ ಸದಸ್ಯರು ಆಯ್ಕೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ತಮ್ಮ ಹಾಗೂ ತಮ್ಮ ತಂಡದ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿ ಅವಕಾಶ ನೀಡಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಸಚಿವಾಲಯ ಕ್ಲಬ್ ನ ಸದಸ್ಯರೆಲ್ಲರ ಆಶೋತ್ತರಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಸದಸ್ಯರೆಲ್ಲರಿಗೂ ಅನುಕೂಲಕರವಾಗುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬದ್ಧರಾಗಿ, ಪ್ರಗತಿ ಸಾಧಿಸುವ ಗುರಿ ತಂಡದ ಮುಂದೆ ಇರುವುದಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ  ಬೆಂಬಲಿಗರ ಹರ್ಷೋದ್ಗಾರ  ಮುಗಿಲು ಮುಟ್ಟಿತ್ತು.

Post a Comment

0 Comments

Ad Code

Responsive Advertisement