ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕಾಂಗ್ರೆಸ್ ಸಮಿತಿ ವತಿಯಿಂದ ಶಕ್ತಿಗಣಪತಿನಗರ ಮತ್ತು ಶಂಕರಮಠ ವಾರ್ಡ್ ನಲ್ಲಿ ಪರಿಸರ ಜನಜಾಗೃತಿ ಜಾಥ ಮತ್ತು ಸಸಿ ನೆಡುವ ಕಾರ್ಯಕ್ರಮ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಎಸ್.ಕೇಶವಮೂರ್ತಿರವರು, ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜುರವರು, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥಗೌಡ, ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಸದಾಶಿವಶಣೈರವರು ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿದರು.
ಸುತ್ತಮುತ್ತಲು ಪ್ರದೇಶದಲ್ಲಿ ಪರಿಸರ ಜನಜಾಗೃತಿ ಮೂಡಿಸಲು ಜಾಥ ಮಾಡಲಾಯಿತು ಮತ್ತು ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆ ಅಚರಿಸಿದರು.
*ಎಸ್.ಕೇಶವಮೂರ್ತಿ* ರವರು ಮಾತನಾಡಿ ಇಂದು ಮನುಷ್ಯ ಅಭಿವೃದ್ದಿ ಹೆಸರಿನಲ್ಲಿ ಮರಗಿಡಗಳನ್ನು ಕಡಿದು ಪರಿಸರ ನಾಶ ಮಾಡುತ್ತಿದ್ದಾನೆ ಇದರಿಂದ ಮನುಷ್ಯನ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.
ಅಭಿವೃದ್ದಿಯ ಜೊತೆಯಲ್ಲಿ ಪರಿಸರ ಉಳಿಸುವ ಯೋಜನೆಗಳನ್ನು ರೂಪಿಸಬೇಕು ಆಗ ಮಾತ್ರ ಉತ್ತಮ ವಾತವರಣದಲ್ಲಿ ಜೀವನ ಸಾಗಿಸಬಹುದು.
ಪರಿಸರ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಪರಿಸರ ಉಳಿಸಲು ಪ್ರತಿನಿತ್ಯ ಪರಿಸರ ಅಂದೋಲನವಾಗಬೇಕು.
ಪ್ರತಿಯೊಬ್ಬರ ಮಾನಸಿಕ ಹಾಗೂ ದೃಹಿಕವಾಗಿ ಸದೃಢವಾಗಿ ಇರಲು ಪರಿಸರ ಉಳಿಸಲು ಹೋರಾಟ ಮಾಡಬೇಕು ಎಂದು ಹೇಳಿದರು.
*ಎಮ್.ಶಿವರಾಜು* ರವರು ಮಾತನಾಡಿ ಬೆಂಗಳೂರಿನಲ್ಲಿ ಸುರಿದ ಬಾರಿ ಮಳೆಯಿಂದ ಸಾವಿರಾರು ಗಿಡಮರಗಳು ಧರೆಗೆ ಉರುಳಿದೆ .ಅದೇ ಜಾಗದಲ್ಲಿ ಮತ್ತೇ ಸಸಿ ನೆಟ್ಟು ಮರ ಬೆಳಸಬೇಕು .
ಬೆಂಗಳೂರುನಗರ ಹವಮಾನಕ್ಕೆ ತಕ್ಕಂತೆ ಮತ್ತು ಹೆಚ್ಚು ಕಾಲ ಉಳಿಯುವ ಸಸಿಗಳನ್ನು ನೆಡಬೇಕು.
ಪರಿಸರ ಉಳಿಸಲು ಸರ್ಕಾರ ಮತ್ತು ಬಿಬಿಎಂಪಿಯ ಜೊತೆಯಲ್ಲಿ ನಾಗರಿಕರು ಕೈಜೋಡಿಸಬೇಕು ಎಂದು ಹೇಳಿದರು.
*ಹೆಚ್.ಎಸ್.ಮಂಜುನಾಥಗೌಡ* ರವರು ಮಾತನಾಡಿ ಪರಿಸರ ಉಳಿಸಲು ಸಂರಕ್ಷಣೆ ಮಾಡಲು ಕಾಂಗ್ರೆಸ್ ಪಕ್ಷದ ಸರ್ಕಾರ ಕಟಿಬದ್ದವಾಗಿ ಶ್ರಮಿಸುತ್ತದೆ.
ಪ್ರತಿ ಮನೆ ಮುಂದೆ ಮರಗಿಡ ಇದ್ದರೆ ಚನ್ನಾ ಅದರೆ ಮನೆಯ ಸೌಂದರ್ಯ ಕಾಣಲು ಮನೆ ಮುಂದೆ ಇರುವ ಮರಗಳನ್ನು ಕಡಿಯುತ್ತಿದ್ದಾರೆ ಇದರಿಂದ ಪರಿಸರ ಹಾಳುತ್ತಿದೆ.
ಸಾರ್ವಜನಿಕರ ಸಹಕಾರವಿದ್ದಾಗ ಪರಿಸರ ಉಳಿಸಲು ಸಾಧ್ಯ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ಪರಿಸರ ರಾಮಕೃಷ್ಣ, ನಟರಾಜ್ ಸುಧೀಂದ್ರ ಮತ್ತು ಸಾರ್ವಜನಿಕರು ಮತ್ತು ಸಂಘ, ಸಂಸ್ಥೆಯ ಮುಖಂಡರು, ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.



0 Comments