ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ರಾಜು ಕಾಗೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ ಪಕ್ಷದ ಮುಖಂಡ ಪ್ರವೀಣ ನಾಯಿಕ ಒತ್ತಾಯಿಸಿದ್ದಾರೆ.
ಅವರು ಪತ್ರಿಕಾ ಮಾಧ್ಯಮ ಜೊತೆ ಮಾತನಾಡುತ್ತಾ ಬೆಳಗಾವಿ ಜಿಲ್ಲೆಯ ಲಿಂಗಾಯತ ಪಂಚಮ ಸಾಲಿ ಸಮಾಜದ ನಾಯಕರಲ್ಲಿ ಪ್ರಭಾವಿ ನಾಯಕ ಶಾಸಕರಾದ ರಾಜು ಕಾಗೆ ಒಬ್ಬರು.
2018 ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಉಪ ಚುನಾಣಾವಣೆಯಲ್ಲಿ ಸೋತರು ಅವರಿಗೆ ಶರೀರ ಸಮಸ್ಯಯಿದ್ದರೂ ಕೂಡ ಅವರು ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಿ 2023 ರ ಚುನಾವಣೆಯಲ್ಲಿ ಕಾಗವಾಡ ಮತಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ ಐದು ಬಾರಿ ಶಾಸಕರಾಗಿ ಕೆಲಸ ಮಾಡಿದ ಅನುಭವ ಹಾಗೂ ಹಿರಿಯ ರಾಜಕಾರಣಿ.
ಇವರಿಗೆ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯವರು ರಾಜು ಕಾಗೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಗ್ರಹಿಸಿದ್ದಾರೆ.
ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಕಾಗವಾಡ ಮತಕ್ಷೇತ್ರದ ಸಮಸ್ತ ಜನರು ಕೂಡಿ ಪ್ರತಿಭಟಿಸಲಾಗುವದು ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಖಂಡೇರಾವ ಘೋರ್ಪಡೆ ,ಸುರೇಶ ನಾಯಿಕ,ವಿನಾಯಕ ಬಾಗಡಿ,ಅಪ್ಪಾಸಾಬ ಚೌಗಲಾ,ಸಿದರಾಯ ತೋಡಕರ,ಎಂ ಕೆ ಮಗದುಮ್ಮ ,ಅಶೋಕ ಪೂಜಾರಿ,ಅಶೋಕ ಬಾಡಗಿ ,ರವಿ ಪಾಟೀಲ ,ಅಸ್ಲಮ್ ಮುಲ್ಲಾ ,ವಿಶ್ವನಾಥ ಭಂಡಾರೆ ,ಕುಮಾರ ಪಾಟೀಲ ,ಸಿದ್ದು ಪಾಟೀಲ,ವಿಠ್ಠಲ ಗಾಡಿವಡ್ಡರ,ಪರಗೊಂಡ ಮುದೋಳ ಉದಯ ಪವಾರ,ವಿಷ್ಣು ಕಾಂಬಳೆ,ಉದಯ ಅವಳೆ,ದುಂಡಪ್ಪಾ ಬಾಡಗಿ ,ಗೋಪಾಲ ನಿವರ್ಗಿ ,ನಾಯ್ಕುಬಾ ಶಿಂದೆ ,ಪಂಡರಿನಾಥ ಭಂಡಾರೆ,ಸಂಜಯ ಅಡಾಟೆ ,ಮುಕುಂದ ಮೋರೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.

0 Comments