ಲೇಖಕ, ಚಿಂತಕ ಮಣ್ಣೆ ಮೋಹನ್ ವಿರಚಿತ "ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಿಡಿಗಳು" ಕೃತಿಯು ದಿನಾಂಕ 15/05/2023 ರಂದು ಶ್ರೀರಾಮಚಂದ್ರ ಪ್ರಭು ಹುಟ್ಟಿದ ಪುಣ್ಯಭೂಮಿ, ವಿಶ್ವವಿಖ್ಯಾತ ಧಾರ್ಮಿಕ ಕ್ಷೇತ್ರ, ಪುರಾಣ ಪ್ರಸಿದ್ಧ ಪವಿತ್ರ ಸ್ಥಳ ಅಯೋಧ್ಯೆಯಲ್ಲಿ, ಶ್ರೀ ಸ್ವಾಮಿ ಕರುಣಾಸಿಂಧು ಮೆಮೋರಿಯಲ್ ನ ಧರ್ಮದರ್ಶಿಗಳಾದ ಸಾಧು ಮಹಾರಾಜ್ ರಾಮ ದಾಸ್ ರವರ ಆಶೀರ್ವಾದದೊಂದಿಗೆ ಲೋಕಾರ್ಪಣೆಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಲೇಖಕರು "ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಸುಮಾರು ಆರು ಲಕ್ಷಕ್ಕಿಂತಲೂ ಹೆಚ್ಚು ದೇಶಪ್ರೇಮಿಗಳು ಬಲಿದಾನವಾಗಿದ್ದಾರೆ. ಅಂತಹ ಅಸಂಖ್ಯಾತ ಬಲಿದಾನಿತರ ಜೀವನ ವೃತ್ತಾಂತವನ್ನು ದೇಶದ ಜನತೆಗೆ ಪರಿಚಯಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕಾಗಿದೆ. ಹಾಗಾದಾಗ ಮಾತ್ರ ನಿಸ್ವಾರ್ಥದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಿಗೆ ನಾವು ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ. ಆ ನಿಟ್ಟಿನ ಆಲೋಚನೆಯ ಒಂದು ಪುಟ್ಟ ಪ್ರಯತ್ನವೇ ಈ ಕೃತಿ. ಈ ಕೃತಿಯು ಎಲ್ಲರ ಮನೆ ಮತ್ತು ಮನಗಳನ್ನು ಬೆಳಗಲಿ, ಮುಂದಿನ ತಲೆಮಾರಿಗೆ ದಾರಿದೀಪವಾಗಲಿ ಎಂದು ಆಶಿಸುತ್ತೇನೆ"ಎಂದರು.
ಈ ಸಂದರ್ಭದಲ್ಲಿ ಕೃತಿಯ ಕರ್ತೃ ಮಣ್ಣೆ ಮೋಹನ್, ಚನ್ನಪಟ್ಟಣದ ಶ್ರೀ ಮಲೈ ಮಹದೇಶ್ವರ ಟ್ರಾವೆಲ್ಸ್ ವ್ಯವಸ್ಥಾಪಕರಾದ ಶಿವಣ್ಣ, ಪ್ರವಾಸಿಗರಾದ ಪದ್ಮಾ, ರಾಧಾ ವೆಂಕಟೇಶ್, ಹನುಮಂತರಾಯಪ್ಪ, ಪಾರ್ವತಮ್ಮ, ಸುಮಿತ್ರ, ಸಾವಿತ್ರಮ್ಮ, ವಿಮಲಮ್ಮ ಮುಂತಾದವರು ಉಪಸ್ಥಿತರಿದ್ದರು.

0 Comments