Ticker

6/recent/ticker-posts

Ad Code

Responsive Advertisement

ಬ್ರಾಹ್ಮಣರು ಹೋರಾಟ ಮನೋಭಾವನೆ ಬೆಳೆಸಿಕೊಳ್ಳಬೇಕು : ದೇಶಪಾಂಡೆ

ಮುಧೋಳ : ಭಾರತದಲ್ಲಿ ಬ್ರಾಹ್ಮಣರು ಅನಾಥರಾಗುತ್ತಿದ್ದಾರೆ. ಅತಿ ಕಡಿಮೆ ಸಂಖ್ಯೆಯಲ್ಲಿರುವ ಬ್ರಾಹ್ಮಣರಿಗೆ ಸರ್ಕಾರಗಳು ಕೂಡಾ ಕಡೆಗಣಿಸಿವೆ, ಬ್ರಾಹ್ಮಣರು ಹೋರಾಟದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ ತಿಳಿಸಿದರು. ಅವರು ಭಾನುವಾರ ಇಲ್ಲಿನ ರಾಘವೇಂದ್ರ ಸಭಾಭವನದಲ್ಲಿ ತಾಲ್ಲೂಕಾ ಬ್ರಾಹ್ಮಣ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಬ್ರಾಹ್ಮಣರಿಗೆ ಈಗಿರು ಪ್ರತಿಶತ ಹತ್ತರಷ್ಟು ಮೀಸಲಾತಿಯನ್ನು 2ಪ್ರತಿಶತಕ್ಕೆ ಇಳಿಸುತ್ತಿದ್ದು ಯಾವ ಬ್ರಾಹ್ಮಣರೂ ಈ ಬಗ್ಗೆ ಹೋರಾಟ ಮಾಡದೇ ಇರುವದು ಶೋಚನೀಯ ಸಂಗತಿ, ಡಾ: ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನದಲ್ಲಿ ಹೇಳಿದ್ದು ಯಾವದೇ ಸಮುದಾಯದ ಬಡವರಿಗೆ ಸೌಲಭ್ಯಗಳು ತಲುಪಬೇಕು ಎಂದು ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಓಟಿಗಾಗಿ ಕೇವಲ ಕೆಲವೇ ಸಮುದಾಯಗಳಿಗೆ ಸೌಲಭ್ಯಗಳನ್ನು ಮುಂದುವರೆಸುತ್ತಾ ಹೊರಟಿರುವದು ವಿಷಾದನೀಯವೆಂದು ಖೇದವ್ಯಕ್ತಪಡಿಸಿದರು.

 ಬ್ರಾಹ್ಮಣರಿಗೆ ಬುದ್ಧಿಶಕ್ತಿಯ ಬಲವಿದೆ ಎಂದು ಇಷ್ಟು ದಿನ ಬದುಕಿದ್ದಾರೆ ಇಲ್ಲವಾದರೆ ಭೂ ಸುದಾರಣೆ ಹೆಸರಿನಲ್ಲಿ ಕಾಯ್ದೆಮಾಡಿದಾಗಲೇ ಬ್ರಾಹ್ಮಣರು ನಾಶವಾಗುತ್ತಿದ್ದರು ಎಂದರು. ಸಾನಿಧ್ಯವಹಿಸಿದ್ದ ವೇಮೂ ಪಾಂಡುರ0ಗಾಚಾರ್ಯ ಜೋಶಿ ಮಾತನಾಡಿ ಬ್ರಾಹ್ಮಣರಿಗೆ ಯಾವದೇ ಮೀಸಲಾತಿ ಕೊಟ್ಟಿಲ್ಲ, ನಮ್ಮ ಮಠಾಧೀಶರಾಗಲಿ ನಮ್ಮ ಮುಖಂಡರಾಗಲಿ ಎಂದು ಸರಕಾರದ ಮುಂದೆ ಮೀಸಲಾತಿಗಾಗಿ ಕೈಚಾಚುವ ಕೆಲಸವನ್ನು ಮಾಡಿಲ್ಲ, ಸಚಿವಗಿರಿಗಾಗಿ ಲಾಬಿ ಮಾಡುವದಾಗಲಿ, ಸವಲತ್ತುಗಳಿಗಾಗಿ ವಿಧಾನಸೌಧಕ್ಕೆ, ಪಾರ್ಲಿಮೆಂಟಿಗೆ ಅಲೆಯುವ ಕೆಲಸ ಮಾಡಿಲ್ಲ ಆದರೆ ನಮಗೆ ಭಗವಂತ ಕರುಣಿಸಿದ ಪ್ರಾಮಾಣಿಕತೆ, ಬುದ್ಧಿಶಕ್ತಿ ಎಂಬ ಮೀಸಲಾತಿ ಇದೆ, ಯಾವ ಸರಕಾರದ ಹಂಗು ನಮಗೆ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ವೇಮೂ ವಿಠ್ಠಲ ಭಡಜಿ ಕವಠೇಕರ, ಪಂಡೀತ ರಾಘವಾಚಾರ್ಯ ಮಿಟ್ಟಿ ಸಾನಿಧ್ಯವಹಿಸಿ ಮಾತನಾಡಿದರು.

ಪಂಡಿತ ರುಷಿಕೇಷಾಚಾರ್ಯ ಜೋಶಿ, ಸಮಾಜದ ಮುಖಂಡ ಸೋನಪ್ಪಿ ಕುಲಕರ್ಣಿ, ಪ್ರಮೋದಬಾಜಿ, ರಾಜೇಂದ್ರ ಬಬಲಾದಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಘವೇಂದ್ರ ಕುಲಕರ್ಣಿ ಮಾತನಾಡಿ ತಾಲ್ಲೂಕಿನ ಎಲ್ಲ ಬ್ರಾಹ್ಮಣ ಸಮಾಜದವರು ತಮ್ಮ ಕುಟುಂಬದವರೆಲ್ಲರ ಹೆಸರು ಹಾಗೂ ಉದ್ಯೋಗದ ವಿವರಗಳನ್ನು ತಾಲ್ಲೂಕು ಬ್ರಾಹಂಣ ಸಂಘದಮುಖAಡರ ಬಳಿ ಕೊಡಬೇಕು, ತಾಲ್ಲುಕಿನ ಎಲ್ಲ ಬ್ರಾಹ್ಮಣರ ಮಾಹಿತಿ ಪುಸ್ತಕ ಮಾಡುವ ನಿಮಿತ್ತ ಮಾಹಿತಿ ಸಂಗ್ರಹಿಸಲಾಗುತ್ತಿದ್ದು ತಕ್ಷಣ ಎಲ್ಲರು ಮಾಹಿತಿ ಒದಗಿಸಬೇಕು, ಮತ್ತು ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇನ್ನು ಮುಂದೆ ಪ್ರತಿ ವರ್ಷ ನಡೆಯಲಿದೆ ಎಂದರು. ರಾಜು ಜೋಶಿ ಪ್ರಾಸ್ತಾವಿಕ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ25 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹಾಗೂ ಮೆಡಿಕಲ್ ನಲ್ಲಿ ಎರಡು ಗೋಲ್ಡಮೆಡಲ್ ಪಡೆದ ಅಖಿಲ್ ದೇಶಪಾಂಡೆ ಯವರಿಗೂ ಸನ್ಮಾನಿಸಿ ಗೌರವಿಸಲಾಯಿತು. ದಿವ್ಯಾ ದೇಸಾಯಿ ಹಾಗೂ ಅನುಷಾ ಮನಗೂಳಿ ಭಕ್ತಿಗೀತೆ ಹೇಳಿದರು, ಸಂತೋಷ ದೇಶಪಾಂಡೆ ಸ್ವಾಗತಿಸಿದರು, ಸುನಿತಾ ದೇಶಪಾಂಡೆ ನಿರೂಪಿಸಿದರು, ಆನಂದ ಕುಲಕರ್ಣಿ ವಂದಿಸಿದರು.

Post a Comment

0 Comments

Ad Code

Responsive Advertisement