Ticker

6/recent/ticker-posts

Ad Code

Responsive Advertisement

ವಸತಿ ರಹಿತ ನಾಗರೀಕರ ತಂಗುದಾಣ 'ನಮ್ಮ ಮನೆ'ಯಲ್ಲಿ ಡಾ. ರಾಮಚಂದ್ರಪ್ಪ ಎಚ್. ಟಿ. ರವರ ಹುಟ್ಟುಹಬ್ಬದ ಅರ್ಥಪೂರ್ಣ ಆಚರಣೆ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯದ ನಗರ ಪ್ರದೇಶದ ನಿರ್ಗತಿಕ / ರಾತ್ರಿ ವಸತಿ ರಹಿತ ನಾಗರೀಕರ ತಂಗುದಾಣ 'ನಮ್ಮ ಮನೆ'ಯಲ್ಲಿ ಆಶ್ರಯ ಪಡೆದಿರುವ ಸಮಾಜದಿಂದ ನಿರ್ಲಕ್ಷಿಸಲ್ಪಟ್ಟಿರುವ ನೊಂದ ಜೀವಗಳೊಂದಿಗೆ  ಐಐಸಿ ಕನ್ಸೋರ್ಟಿಯಂ ಇಂಪ್ಯಾಕ್ಟ್ ಇಂಡಿಯಾ ಸಂಚಾಲಕರು ಹಾಗೂ ಐಐಸಿ ಯೋಜನಾ ವ್ಯವಸ್ಥಾಪಕರು ಆಗಿರುವ  ಡಾ. ರಾಮಚಂದ್ರಪ್ಪ ಎಚ್. ಟಿ. ರವರು ಕೇಕ್ ಕತ್ತರಿಸುವ ಮುಲಕ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

 ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಹಳ ಚೆನ್ನಾಗಿ ಬಾಳಿ ಬದುಕಿದ ಜೀವಗಳೂ ಸಹ ಒಮ್ಮೊಮ್ಮೆ, ನಾನಾ ವೈಯಕ್ತಿಕ ಕಾರಣಗಳಿಂದಾಗಿ, ಕುಟುಂಬದವರ  ನಿರ್ಲಕ್ಷ್ಯಕೊಳಗಾಗಿಯೋ ತಿರಸ್ಕೃತರಾಗಿಯೋ ತಮ್ಮ ಮನೆ ತೊರೆದು ದೇಶಾಂತರ ಹೊರಟ ಪರಿಸ್ಥಿತಿಯಲ್ಲಿ ನಿಲ್ಲಲು ನೆಲೆಯಿಲ್ಲದೆ, ತಂಗಲು ದಾರಿ ಕಾಣದೆ, ದುಸ್ತರ ಪರಿಸ್ಥಿತಿಗಳಲ್ಲಿಯೂ ಜೀವವನ್ನು ತ್ಯಾಗ ಮಾಡದೆ ಬದುಕಲು ಹವಣಿಸುತ್ತಾ ರಸ್ತೆ ಬದಿಗಳಲ್ಲಿ, ಬಸ್ ನಿಲ್ದಾಣಗಳ ಬಳಿ, ಕಾಂಪೌಂಡ್ ಗಳ ಪಕ್ಕ, ಪಾರ್ಕ್, ನಿಂತ ಹಳೆಯ ಬಸ್ಸು ಕಾರುಗಳ ಬಳಿ ಆಶ್ರಯ ಪಡೆದು ದುರ್ಬರ ಸ್ಥಿತಿಯಲ್ಲಿ  ಜೀವನ ಸಾಗಿಸುವಂಥವರಿಗೆ ನೆರವಾಗಲು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ, ಎಲ್ಲರಿಗೂ ಗೌರವಪೂರ್ಣವಾಗಿ ಜೀವಿಸುವ ಹಕ್ಕು ಇದ್ದು, ಇಂತಹ ಜೀವಗಳಿಗೆ ಆಸರೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಾಮಾಜಿಕ ಕಾಳಜಿ ಉಳ್ಳ ಸ್ವಯಂಸೇವಕ ಸಂಸ್ಥೆಗಳು ಕೈಜೋಡಿಸಿ ಇಂತಹ ಅಭಾಗ್ಯರ ಪುನರ್ವಸತಿಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ಇಲ್ಲಿ ನಿವಸಿಸುವ ನೊಂದ ಜೀವಗಳಿಗೆ ಅನೇಕ ಯೋಜನೆಗಳ ಮೂಲಕ ಅವರನ್ನು ಸಬಲಗೊಳಿಸಿ ಮತ್ತೆ ಜೀವನದ ಮುಖ್ಯವಾಹಿನಿಗೆ ಅವರನ್ನು ಸೇರಿಸುವ ಪ್ರಯತ್ನ ಇಲ್ಲಿ  ಮಾಡಲಾಗುತ್ತಿದ್ದು, ಸಮಾಜವು ಸಹ ಈ ಕಾರ್ಯದಲ್ಲಿ ಕೈಜೋಡಿಸಬೇಕಿದೆ ಎಂಬುದಾಗಿ ಡಾ. ರಾಮಚಂದ್ರಪ್ಪನವರು ಕರೆ ಕೊಟ್ಟರು. ಈ ಸಂದರ್ಭದಲ್ಲಿ ಈ ಕೇಂದ್ರದ ವ್ಯವಸ್ಥಾಪಕಿ ಲಕ್ಷ್ಮಿ ಹಾಗೂ ಸಿಬ್ಬಂದಿ ಬಳಗ ಹಾಗೂ  ಇಲ್ಲಿನ ಆಶ್ರಿತರು ಶುಭ ಕೋರಿದರು. ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸಹ ಈ ವೇಳೆ  ಕಲ್ಪಿಸಲಾಗಿತ್ತು.

Post a Comment

0 Comments

Ad Code

Responsive Advertisement