Ticker

6/recent/ticker-posts

Ad Code

Responsive Advertisement

ನಾನು ಸೋತಿದ್ದೇನೆ, ಆದರೆ ಯಾವುದೇ ಕಾರಣಕ್ಕೂ ಶಿಡ್ಲಘಟ್ಟ ಬಿಟ್ಟು ಹೋಗುವುದಿಲ್ಲ : ರಾಜೀವ್ ಗೌಡ

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

ವಾರ್ತಾಜಾಲ,ಶಿಡ್ಲಘಟ್ಟ :  ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು 2023ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ನನಗೆ ಬೆಂಬಲ ನೀಡಿ ಮತ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು. ನಾನು  ಸೋತಿದ್ದೇನೆ, ಆದರೆ ಯಾವುದೇ ಕಾರಣಕ್ಕೂ ಶಿಡ್ಲಘಟ್ಟ ಬಿಟ್ಟು ಹೋಗುವುದಿಲ್ಲ, ಈ ಕ್ಷೇತ್ರ ಅಭಿವೃದ್ದಿಗೆ ಇನ್ನೂ ಹೆಚ್ಚು ಒತ್ತು ನೀಡಿ ಅಭಿವೃದ್ಧಿ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ತಿಳಿಸಿದರು.

 ನಗರದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಆದರೆ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ ಎಂದು ದುಃಖ ಆಗುತ್ತಿದೆ. ಈ ಕ್ಷೇತ್ರದಲ್ಲಿ ಎಂಎಲ್ಎ ಆಗಿದ್ದರೆ, ಕುಂದು ಕೊರತೆಗಳನ್ನೆಲ್ಲ ಬಗೆಹರಿಸಬಹುದು ಎಂಬುದು ನನ್ನ ಆಸೆಯಾಗಿತ್ತು ಆದರೆ ಅದು ಈಡೇರಲಿಲ್ಲ. ಆದರೂ ಸಹ ಕಾಂಗ್ರೆಸ್ ಸರ್ಕಾರ ಇದೆ ಶಿಡ್ಲಘಟ್ಟದ ಅಭಿವೃದ್ಧಿಗೆ ಸಾಧ್ಯವಾದಷ್ಟು ಅನುದಾನಗಳನ್ನು ತಂದು ಅಭಿವೃದ್ಧಿ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜೀವ ಗೌಡ ತಿಳಿಸಿದರು.

ಇನ್ನು ರಾಜ್ಯ ನಾಯಕರಾದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ನನಗೆ ಧೈರ್ಯವನ್ನು ತುಂಬಿದ್ದಾರೆ ಸದ್ಯ ನೀನು ಅಲ್ಲಿ ಸೋತಿರಬಹುದು ಆದರೆ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಇದೆ ನಿಮಗೆ ಏನು ಬೇಕು ಆ ಸೌಲಭ್ಯಗಳನ್ನು ನಾವು ಒದಗಿಸುತ್ತೇವೆ, ನೀನು ಧೈರ್ಯದಿಂದಿರು, ಅಲ್ಲಿನ ಜನರಿಗೆ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದಿದ್ದಾರೆ ಹಾಗಾಗಿ ಈ ಕ್ಷೇತ್ರದಲ್ಲಿ ಏನೆಲ್ಲಾ ಕೊರತೆ ಇದೆಯೋ ಅದನ್ನ ಶಕ್ತಿ ಮೀರಿ ಸೌಲಭ್ಯ ಒದಗಿಸುತ್ತೇನೆ ಎಂದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ, ಲೀಡರ್ ಗಳು ಕಾರ್ಯಕರ್ತರು ಇವರುಗಳ ಮಧ್ಯೆ ಇದ್ದಂತಹ ಒಡಕುಗಳನ್ನು ಸರಿ ಮಾಡಿಕೊಂಡು ಪಕ್ಷವನ್ನು ಕಟ್ಟುತ್ತೇನೆ ಏನು ಗ್ರಾಮಾಂತರ ಪ್ರದೇಶಗಳಲ್ಲಿ ನಾಯಕರುಗಳು ಇರಬಹುದು ಅಥವಾ ಪಕ್ಷದ ಮುಖಂಡರಲ್ಲಿ ಇರಬಹುದು ಯಾರೆಲ್ಲಾ ಮುನಿಸಿಕೊಂಡಿರುತ್ತಾರೋ ಅವರನ್ನೆಲ್ಲ ಒಗ್ಗೂಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಶ್ರಮಿಸುತ್ತೇನೆ. ಇಂದಿನಿಂದ ಈ ಹಿಂದೆ ನಡೆದಿರುವಂತಹ ಘಟನೆಗಳನ್ನೆಲ್ಲ ಮರೆತು ಕ್ಷೇತ್ರದ ಅಭಿವೃದ್ಧಿಗೆ ಕಾರ್ಯಕರ್ತರು ಮುಖಂಡರು ಹಾಗೂ ಪ್ರತಿಯೊಬ್ಬರು ಶ್ರಮಿಸೋಣ ಎಂದರು.

ಮುಂದಿನ ದಿನಗಳಲ್ಲಿ ಬರುವ ತಾಲೂಕು ಪಂಚಾಯಿತಿ ಚುನಾವಣೆ ಜಿಲ್ಲಾ ಪಂಚಾಯತಿ ಚುನಾವಣೆ ಆಗಿರಬಹುದು ಪಂಚಾಯತಿ ಚುನಾವಣೆ ಆಗಿರಬಹುದು ಯಾವುದೇ ರೀತಿಯ ಚುನಾವಣೆಗಳು ಬಂದರೂ ನಾವೆಲ್ಲ ಒಗ್ಗಟ್ಟಿನಿಂದ ದುಡಿದು ಪಕ್ಷವನ್ನ ಬಲಪಡಿಸೋಣ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ತಿಳಿಸಿದರು.

ಈ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ನಾನು ಜನರಿಗೆ ಏನೆಲ್ಲಾ ಸೌಲಭ್ಯಗಳನ್ನು ಹಾಗೂ ಜನರಿಗೆ ನೆರವಾದ ಅಂತಹ ಸೇವೆಗಳನ್ನು ಸಾರ್ವಜನಿಕರಿಗೆ ಮನಮುಟ್ಟುವಂತೆ ಪ್ರಚುರಪಡಿಸಿದ ಪತ್ರಕರ್ತರಿಗೆಲ್ಲರಿಗೂ ಧನ್ಯವಾದಗಳು ತಿಳಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಸಹಕಾರ ರತ್ನ ಕೆ ಗುಡಿಯಪ್ಪ, ಭಕ್ತರಹಳ್ಳಿ ಬಿವಿ ಮುನೇಗೌಡ,ತಾ.ಪಂ ಮಾಜಿ ಅಧ್ಯಕ್ಷ ಗಂಜಿಗುಂಟೆ ಮೌಲಾ,ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ ನಾಗರಾಜ್,ನಗರಸಭೆ ಉಪಾಧ್ಯಕ್ಷ ಅಫ್ಸರ್ ಪಾಷಾ,ಪಂಪ್ ನಾಗರಾಜ್,ಜಿ.ಪಂ ಮಾಜಿ ಸದಸ್ಯೆ ಕಮಲಮ್ಮ,ಕೆಪಿಸಿಸಿ ನಾರಾಯಣಸ್ವಾಮಿ,ಕೃಷ್ಣಮೂರ್ತಿ ವಕೀಲರಾದ ಎಂ ಮುನಿರಾಜು ಅನಿಲ್ ಕುಮಾರ್ ,ಟಿಕೆ ನಟರಾಜ್,ಮತ್ತಿತರರು ಇದ್ದರು.

Post a Comment

0 Comments

Ad Code

Responsive Advertisement