Ticker

6/recent/ticker-posts

Ad Code

Responsive Advertisement

ಪ್ರೇಕ್ಷಕರ ಮನಗೆದ್ದ ದೀಪ್ತಿ ಗಾಯನ

ಮಲ್ಲೇಶ್ವರಂ 15ನೇ ಅಡ್ಡರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಜರುಗುತ್ತಿರುವ ಶ್ರೀ ನರಸಿಂಹ ಜಯಂತಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮೇ 11, ಗುರುವಾರದಂದು ಕು|| ದೀಪ್ತಿ ಮೋಹನ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ ವಿದ್ವಾನ್ ಮೈಸೂರು ಸಂಜೀವ್ ಕುಮಾರ್ ಮತ್ತು ವಿದ್ವಾನ್ ಮುರಳಿ ನಾರಾಯಣರಾವ್ ಸಹಕರಿಸಿದರು. ದೀಪ್ತಿ ಹಾಡಿದ ಪ್ರತಿಯೊಂದು ಕೀರ್ತನೆಗಳೂ ನೆರೆದಿದ್ದ ಶ್ರೋತೃಗಳ ಮನಸೆಳೆದಿತ್ತು. ಕಾರ್ಯಕ್ರಮದ ಕೊನೆಯಲ್ಲಿ "ಸಿಂಹರೂಪನಾದ ಶ್ರೀಹರಿ" ಎಂಬ ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಪಟ್ಟಾಭಿರಾಮ್ ಅವರು ವಂದನಾರ್ಪಣೆ ಮಾಡಿದರು.

Post a Comment

0 Comments

Ad Code

Responsive Advertisement