Ticker

6/recent/ticker-posts

Ad Code

Responsive Advertisement

ದಾಸರಹಳ್ಳಿಯಲ್ಲಿ ಮತ್ತೆ ಕಮಲ ಅರಳಿಸಿದ ಮುನಿರಾಜು.

ಮೂರನೇ ಬಾರಿ ಗೆದ್ದ ಬಿಜೆಪಿಯಿಂದ ವಿಜಯೋತ್ಸವ.

ಬಿ ಬಿ ಎಂ ಪಿ ವ್ಯಾಪ್ತಿಯಲ್ಲಿ ಇದ್ದ ಒಂದೇ ಒಂದು ಜೆಡಿಎಸ್ ಕ್ಷೇತ್ರ ವಾಗಿದ್ದ ದಾಸರಹಳ್ಳಿ ಯನ್ನು ಬಿಜೆಪಿ ಗೆದ್ದು ಕೊಂಡು ಬೆಂಗಳೂರು ಮುಕ್ತ ಜೆಡಿಎಸ್ ಆಗಿದೆ. ಇದ್ದಕ್ಕೆಲ್ಲಾ ಕಾರಣ ದಾಸರಹಳ್ಳಿ ಬಿಜೆಪಿ ಅಭ್ಯರ್ಥಿ ಎಸ್. ಮುನಿರಾಜು ಈಗ ಗೆದ್ದಿದ್ದಾರೆ.

ಬೆಂಗಳೂರು ನಗರದ ದಾಸರಹಳ್ಳಿಯಲ್ಲಿ ಬಿಜೆಪಿ,ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿ ಗಳ ಮದ್ಯ ಬಾರಿ ಜಿದ್ದಾ ಜಿದ್ದಿನ ಚುನಾವಣೆ ನಡೆದು ಫಲಿತಾಂಶ ಕುತೂಹಲ ಮೂಡಿಸಿತ್ತು.

 ಮತ ಎಣಿಕೆ ಆರಂಭದಿಂದಲೂ ಜೆಡಿಎಸ್ ಬಿಜೆಪಿ ಮದ್ಯ ಲೆಕ್ಕಾಚಾರದ ಏರು ಪೇರು ನಡದೇ ಇತ್ತು. ನಂತರ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಸಾದಿಸಿ ಕೊಂಡು ಕೊನೆಗೂ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆಂದು ಘೋಷಣೆ ಆದಾಗ ಹೊರಗಿದ್ದ ಬಿಜೆಪಿ ಬೆಂಬಲಿಗರ ಉತ್ಸಹ ಮುಗಿಲು ಮುಟ್ಟಿ ಅಲ್ಲಿಂದ ಆರಂಭ ವಾದ ವಿಜಯೋತ್ಸವ ಈಗಲೂ ಮುಂದುವರಿದಿದೆ.

ಇದು ನನ್ನ ಗೆಲುವು ಖಂಡಿತ ಅಲ್ಲ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು,ಕಾರ್ಯಕರ್ತರುಗಳ, ಹಾಗೂ ಅಭಿಮಾನಿಗಳ ಗೆಲುವು ಎಂದು ಗೆದ್ದಿರುವ ಮುನಿರಾಜು ಪ್ರತಿಕ್ರಿಯೆ ಕೊಟ್ಟು ಈ ಗೆಲುವನ್ನು ಅವರಿಗೆ ಅರ್ಪಿಸಿದ್ದಾರೆ.

ನನ್ನ ಮೇಲೆ ನಂಬಿಕೆಯಿಟ್ಟು ಬಿಜೆಪಿ ವರಿಷ್ಟರು ನಾಲ್ಕನೇ ಬಾರಿ ದಾಸರಹಳ್ಳಿಯಲ್ಲಿ ಬಿಜೆಪಿ ಯಿಂದ ಪಕ್ಷದ ಟಿಕೆಟ್ ಕೊಟ್ಟಿದ್ದಾರೆ. ಕಳೆದ 2008 ಹಾಗೂ 2013 ರಲ್ಲಿ ಎರಡೂ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನ್ನನ್ನು ಮತದಾರರು ಗೆಲ್ಲಿಸಿದ್ದಾರೆ. ಆದರೆ 2018 ರಲ್ಲಿ ಅನೇಕ ಕಾರಣ ಗಳಿಂದ ಸೋಲು ಆಗಿತ್ತು. ಆದರೆ ನಾನು ಯಾವುದೇ ಕಾರಣಕ್ಕೂ ದೃತಿಗೆಡದೆ ದಾಸರಹಳ್ಳಿಯಲ್ಲಿ ನಿರಂತರವಾಗಿ ಜನರ ಸೇವೆ ಮಾಡುತ್ತಲೇ ಇದ್ದೆ ಅದೊಂದು ಗೆಲುವಿಗೆ ಕಾರಣ ವಾಗಿರಬಹುದು.

ಇದರ ಜೊತೆಗೆ ದಾಸರಹಳ್ಳಿಯಲ್ಲಿ ಜೆಡಿಎಸ್ ವಿರೋಧಿ ಅಲೆ ಆರಂಭವಾಗಿತ್ತು. ಕಾಂಗ್ರೆಸ್ ಚೇತರಿಕೊಂಡಿದ್ದರೂ ಜನ ಅವರ ಪರವಾಗಿಯೂ ನಿಲ್ಲಲಿಲ್ಲ. ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ನಿರಂತರವಾಗಿ ಬೂತ್ ಮಟ್ಟದಿಂದಲೂ ಗೆಲುವಿಗಾಗಿ ಅವಿರತ ಶ್ರಮ ವಹಿಸಿದ್ದರು.ಹೀಗೆ ಅನೇಕಕಾರಣಗಳಿಂದ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನ್ನ ಗೆಲುವಾಗಿದೆ ಎಂದು ಪ್ರಾಮಾಣಿಕವಾಗಿ ಒಪ್ಪಿ ಕೊಳ್ಳುವೆ ಎಂದು ಎಸ್. ಮುನಿರಾಜು ತಮ್ಮ ಗೆಲುವಿನ ಬಗ್ಗೆ ಅಭಿಪ್ರಾಯಗಳನ್ನು ಹಂಚಿ ಕೊಂಡಿದ್ದಾರೆ.

ರಾಜ್ಯದಲ್ಲಿ ಅನೇಕ ಕಡೆ ಬಿಜೆಪಿ ಆಡಳಿತ ವಿರೋಧಿ ಅಲೆ ಇದ್ದರೂ ನಮ್ಮ ಗೆಲುವಿಗೆ ಕಾರಣರಾದ ದಾಸರಹಳ್ಳಿ ಮಹಾ ಜನತೆಗೆ ಹಾಗೂ ಗೆಲುವಿಗೆ ಪ್ರತ್ಯಕ್ಷ ವಾಗಿ ಪರೋಕ್ಷವಾಗಿ ಕೆಲಸ ಮಾಡಿದ ಎಲ್ಲಿರಿಗೂ ಇದೇ ಸಂದರ್ಭದಲ್ಲಿ ಮುನಿರಾಜು ಅಭಿನಂದನೆ ಹಾಗೂ ಧನ್ಯವಾದಗಳನ್ನು ಹೇಳಿದ್ದಾರೆ.

ದಾಸರಹಳ್ಳಿ ಕ್ಷೇತ್ರದ ಪ್ರತಿಯೊಂದು ವಾರ್ಡಿನಲ್ಲಿ ಬಿಜೆಪಿ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ನಡೆಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ನಡೆಯುತ್ತಲೇ ಇದ್ದಾರೆ.ಅದೇ ರೀತಿಯಲ್ಲಿ ಮುನಿರಾಜು ಮನೆಯಲ್ಲಿಯೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು

 ಮುನಿರಾಜು ಗೆಲುವಿಗೆ ಶ್ರೀ ಮತಿ ಸುಜಾತ ಮುನಿರಾಜುರವರು ಸುಮಾರು ಒಂದು ವರ್ಷದಿಂದಲೂ ಪ್ರತಿ ವಾರ್ಡಿನ ಗಲ್ಲಿ ಗಲ್ಲಿ ಸುತ್ತಾಡಿ ಮನೆ, ಮನೆಗೆ ಭೇಟಿ ಕೊಟ್ಟು ಬಿಜೆಪಿ ಪರವಾಗಿ ಮತ ಯಾಚನೆ ಮಾಡಿದ್ದರು. ಕೆಲವು ತಿಂಗಳಿಂದ ಇಬ್ಬರು ಹೆಣ್ಣುಮಕ್ಕಳಾದ ಸ್ವಪ್ನ,, ರಕ್ಷಾ,,ಅಳಿಯಂದಿರಾದ ಅನಿಲ್ ಕುಮಾರ್ ಹಾಗೂ ಗುರು ನಿಶ್ಚಲ್ ರವರೂ ಪಕ್ಷದ ಮುಖಂಡರ ಜೊತೆಗೆ ಕಾರ್ಯಕರ್ತರುಗಳ ಜೊತೆಗೆ ಸಂಪರ್ಕ ಸಾದಿಸಿ ಕೊಂಡು ಅವರ ಸಹಕಾರದಿಂದ ಸ್ಥಳೀಯ ಇತರೆ ಪಕ್ಷದವರನ್ನು ಬಿಜೆಪಿಗೆ ಸೇರಿಸುವ ಕೆಲಸದಲ್ಲಿ ಹಾಗೂ ಬಿಜೆಪಿ ಅಭ್ಯರ್ಥಿ ಎಸ್. ಮುನಿರಾಜು ಗೆಲುವಿಗೆ ತಂತ್ರ ಗಾರಿಕೆಯಿಂದ ಹಗಲು ಇರಳು ಅನ್ನದೇ ದುಡಿದಿದ್ದು ಸಾರ್ಥಕ ವಾಗಿದೆ.

ಕುಟುಂಬ ಸದಸ್ಯರು ಸೇಡಿದಂತೆ ಎಲ್ಲರ ಜೊತೆಗೆ ಸೇರಿ ಕೊಂಡು" ಶ್ರೀನಿವಾಸ ಕಲ್ಯಾಣ ''ಕಾರ್ಯಕ್ರಮ ಮಾಡಲಾಗಿತ್ತು. ತಾಯಿ ಬಾಗಲಗುಂಟೆ ಮಾರಮ್ಮದೇವರನ್ನು ಮನೆಗೆ ಕರಿಸಿ ಪೂಜೆಸಲ್ಲಿಸಲಾಗಿತ್ತು.ದಾಸರಹಳ್ಳಿಯ  ನೆಲೆ ಮಹೇಶ್ವರಿ ದೇವೆಗೂ ಪೂಜೆ ಸಲ್ಲಿಸುವುದರ ಜೊತೆಗೆ ಕ್ಷೇತ್ರದ ವಿವಿಧ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವ ಕೆಲಸವೂ ನಡೆಯಿತು. ಸಕಲ ದೇವಾನು ದೇವತೆಗಳ ಆಶೀರ್ವಾದದಿಂದ ಗೆಲುವು ಕಂಡಿದ್ದೇವೆಂದು . ನೆಮ್ಮದಿಯಿಂದ ನಗು ನಗುತ್ತಲೇ ಎಲ್ಲರನ್ನೂ ಮನೆಗೆ ಸ್ವಾಗತಿಸುತ್ತಿದ್ದದ್ದು ಒಂದು ರೀತಿಯ ಯುದ್ಧ ಗೆದ್ದ ವಾತಾವರಣ ಮುನಿರಾಜು ಮನೆಯಲ್ಲಿ ನಿರ್ಮಾಣ ವಾಗಿತ್ತು. ವಾದ್ಯ ಮೇಳಗಳು, ಹಾರ,ತುರಾಯಿಗಳ ಸಮೇತ ಅನೇಕ ಮುಖಂಡರು ಕಾರ್ಯಕರ್ತರು ಮುನಿರಾಜು ಮನೆಗೆ ಬಂದು ಶುಭಾಶಯಗಳನ್ನು ಸಲ್ಲಿಸುತ್ತಿದ್ದು ಪತ್ರಿಕೆ ಕಣ್ಣಿಗೆ ಬಿತ್ತು.

 ಮುನಿರಾಜುರವರ ಗೆಲುವಿನಿಂದ ದಾಸರಹಳ್ಳಿ ಅಭಿವೃದ್ಧಿಯತ್ತ ಸಾಗಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತವಿರುತ್ತೆ! ವಿರೋಧ ಪಕ್ಷದ ಸಾಲಿನಲ್ಲಿರುವ ಮುನಿರಾಜುರವರು ಸರ್ಕಾರದ ನೆರವು, ಸೌಲಭ್ಯ ದಾಸರಹಳ್ಳಿ ಜನತೆಗೆ ಸಿಗುವಂತೆ ಮಾಡಲಿ ಎಂದು ಮುನಿರಾಜು ರವರಿಗೆ  ಪತ್ರಿಕಾ ಬಳಗದ ವತಿಯಂದ ಶುಭಾಶಯಗಳನ್ನು ಸಲ್ಲಿಸುತ್ತದೆ.

ವರದಿ. ಎಂ ಶ್ರೀನಿವಾಸ್ ಕುಮಾರ್ 

Post a Comment

0 Comments

Ad Code

Responsive Advertisement