ಬೆಂಗಳೂರು : ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿ ಸತತ ಮೂರನೇ ಬಾರಿಗೆ ದಿನಕರ ಶೆಟ್ಟಿರವರು ವಿಜೇತರಾಗಿ ಸೋಮವಾರದಂದು ವಿಧಾನಸೌದದಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಅಖಿಲ ಕರ್ನಾಟಕ ಗಾಣಿಗ ಮಹಾಸಭಾದ ವತಿಯಿಂದ ಅಧ್ಯಕ್ಷ ಚಂದ್ರಶೇಖರ ನೇತೃತ್ವದಲ್ಲಿ ಶಾಸಕರನ್ನು ಭೇಟಿಯಾಗಿ ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಲಾಯಿತು.
ಈ ವೇಳೆ ಖಜಾಂಚಿ ಪುರುಷೋತ್ತಮ್, ಮುಖಂಡರುಗಳಾದ ದೇವರಾಜ್, ಶ್ರೀನಿವಾಸ್ ವಿ. ಮತ್ತು ವಿನೋದ್ ಕುಮಾರ್ ರವರು ಉಪಸ್ಥಿತರಿದ್ದರು.


0 Comments