Ticker

6/recent/ticker-posts

Ad Code

Responsive Advertisement

*ರಾಜಾಜಿನಗರದ ಮತದಾರರು ಮತ್ತು ಬಿಜೆಪಿ ಕಾರ್ಯಕರ್ತರ ಗೆಲುವು-ಎಸ್.ಸುರೇಶ್ ಕುಮಾರ್*

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಸುರೇಶ್ ಕುಮಾರ್ ರವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನ 8050ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಶ್ರೀ ರಾಮಮಂದಿರದಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ ಗಳಿಂದ ಕಾರ್ಯಕರ್ತರು ಜಮಾವಣೆಯಾಗಿ ಸಂಭ್ರಮಾಚರಣೆ ಮಾಡಿದರು.

ಗೆಲುವು ಸಾಧಿಸಿದ ನಂತರ ರಾಜಾಜಿನಗರಕ್ಕೆ ಮತ ಏಣಿಕೆ ಕೇಂದ್ರದಿಂದ ಆಗಮಿಸಿದ ಎಸ್.ಸುರೇಶ್ ಕುಮಾರ್ ರವರನ್ನು ಪತ್ನಿ ಶ್ರೀಮತಿ ಸಾವಿತ್ರಿ ಸುರೇಶ್ ಕುಮಾರ್, ಪುತ್ರಿ ದಿಶಾ ಸುರೇಶ್ ಕುಮಾರ್ ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು.

ಶ್ರೀರಾಮಮಂದಿರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ *ಎಸ್.ಸುರೇಶ್ ಕುಮಾರ್* ರವರು ಮಾತನಾಡಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ದಿ ಕಾಮಗಾರಿ ಮತ್ತು ಪ್ರಜ್ಞಾವಂತರ ಮತದಾರರು ನನ್ನ ಮೇಲಿಟ್ಟರುವ ಪ್ರೀತಿ, ವಿಶ್ವಾಸ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರ ಹಗಲಿರಳು ಶ್ರಮದಿಂದ ಬಿಜೆಪಿ ಪಕ್ಷಕ್ಕೆ ಗೆಲುವು ಲಭಿಸಿದೆ.

ರಾಜಾಜಿನಗರ ವಿಧಾನಸಭಾ ಕ್ಷೇತ್ರವನ್ನು ನವ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ.

ನಮ್ಮ ಕ್ಷೇತ್ರದ ಜನರ ಆಶಯದಂತೆ ಯೋಜನೆಗಳನ್ನು ರೂಪಿಸಿ ಆನುಷ್ಠಾನ ಮಾಡಲಾಗುವುದು.

ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಹೃರ್ತೂರ್ವಕ ಧನ್ಯವಾದಗಳು ಎಂದು ಹೇಳಿದರು.



ಮಂಡಲದ ಅಧ್ಯಕ್ಷರಾದ ರಾಘವೇಂದ್ರರಾವ್, ಮಾಜಿ ಉಪಮಹಾಪೌರರಾದ ರಂಗಣ್ಣ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎಂ.ಮುನಿರಾಜು, ರಾಜಣ್ಣ, ಕೃಷ್ಣಪ್ಪ, ದೀಪಾ ನಾಗೇಶ್ ,ಪ್ರತಿಮಾ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರುಗಳಾದ

*ಬಿಜೆಪಿ ಮುಖಂಡರುಗಳಾದ ಬಿ.ಎನ್.ಶ್ರೀನಿವಾಸ್,  ಸತೀಶ್ ಭಗವಾನ್ ,ಗಂಗಾಧರ್,ಕೇಶವ್ ,ಯಶಸ್ ನಾಯಕ್,ಸಂಜಯ್ ಕುಮಾರ್,ಶ್ರೀನಾಥ್ ಆಯ್ಯರ್, ಕಿರಣ್,ವೆಂಕಟೇಶ್ ಬಾಬು, ಟಿ.ಎನ್.ರಮೇಶ್, ಮೋಹನ್  ರಾಜ್, ವೇಲು,ಪುಟ್ಟ  ಅಮಿತ್ ಜೈನ್,ಕಿಟ್ಟಿ, ಆದರ್ಶ್ ಭಾಗವಹಿಸಿದ್ದರು*

Post a Comment

0 Comments

Ad Code

Responsive Advertisement