ಮಂಡ್ಯ: ಕಾಯಕಯೋಗಿ ಫೌಂಡೇಶನ್ ಮತ್ತು ಸಿದ್ದಗಂಗಾ ಸೇವಾ ಟ್ರಸ್ಟ್ ವತಿಯಿಂದ ನಗರದ ಸ್ವರ್ಣಸಂದ್ರ ಬಡಾವಣೆಯ ಸಿದ್ದಗಂಗಾಶ್ರೀ ಉದ್ಯಾನದಲ್ಲಿ ತ್ರಿವಿಧ ದಾಸೋಹಿ ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮೀಜಿಯವರ 116ನೇ ಜನ್ಮದಿನೋತ್ಸವವನ್ನು ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬಿದರಹಳ್ಳಿ ಗುರುಮಲ್ಲೇಶ್ವರ ಮಠದ ಪೀಠಾಧ್ಯಕ್ಷ ಗುರುಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಈ ಸಮಾರಂಭದಲ್ಲಿ ರೈತಮುಖಂಡ ಮಧುಚಂದನ್ ಮಹಾದಾಸೋಹಕ್ಕೆ ಚಾಲನೆ ನೀಡಿದರು.
ಪುಷ್ಪಾರ್ಚನೆ ನೆರವೇರಿಸಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಮಾತನಾಡಿ, ಮಠ ಸಂಸ್ಕೃತಿ ಮತ್ತು ಖಾದಿಗೆ ಮೌಲ್ಯವನ್ನು ತಂದುಕೊಟ್ಟು ಅಸಂಖ್ಯಾತ ವಿದ್ಯಾರ್ಥಿಗಳಿಗೆ ಬದುಕನ್ನು ಕಟ್ಟಿಕೊಟ್ಟ ಮಹಾಚೇತನ ಸಿದ್ದಗಂಗಾಶ್ರೀ. ಇಂದಿನ ವ್ಯವಸ್ಥೆಯಲ್ಲಿ ಜಾತಿ ಮತ್ತು ರಾಜಕಾರಣದೊಡನೆ ರಾಜಿಮಾಡಿಕೊಳ್ಳುತ್ತಿರುವ ಧಾರ್ಮಿಕ ಮಠಗಳ ನಡುವೆ ಸಿದ್ದಗಂಗಾಶ್ರೀಗಳು ಮಾನವೀಯತೆ ಸಮಾನತೆಯ ನೆಲೆಯಲ್ಲಿ ಮಠವನ್ನು ಬೆಳೆಸಿ ತ್ರಿವಿಧ ದಾಸೋಹದ ಮೂಲಕ ಈ ನಾಡಿಗೆ ಮಾದರಿಯಾಗಿ ನಿಂತಿದ್ದರು ಎಂದು ಬಣ್ಣಿಸಿದರು.
ನಡೆದಾಡುವ ದೇವರು ಎಂದೇ ಜನಮಾನಸದಲ್ಲಿ ಹೆಸರು ಮಾಡಿದ್ದ ಸಿದ್ದಗಂಗಾಶ್ರೀಗಳ ಮೌನ ಸಾಧನೆಯನ್ನು ಎಲ್ಲರೂ ಆದರ್ಶವಾಗಿ ತೆಗೆದುಕೊಳ್ಳಬೇಕು. ಶ್ರೀಗಳ ಬಹುಕಾಲದ ಸೇವೆ ಮತ್ತು ಸಾಧನೆಯನ್ನು ಪರಿಗಣಿಸಿ ಸರ್ಕಾರ ಭಾರತರತ್ನವನ್ನು ನೀಡಬೇಕೆಂದು ಒತ್ತಾಯಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಯಕಯೋಗಿ ಪೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ಸಿದ್ದಗಂಗಾಶ್ರೀಗಳ ತ್ರಿವಿಧ ದಾಸೋಹ ವಿಶ್ವಕ್ಕೆ ಮಾದರಿ. ಸ್ವಾತಂತ್ರö್ಯಪೂರ್ವದಲ್ಲೇ ಹಸಿದವರಿಗೆ ಅನ್ನ, ಅಕ್ಷರ ಮತ್ತು ಅರಿವನ್ನು ನೀಡಿದರು. ಅದರ ಫಲವಾಗಿ ಇಂದು ಆಡಳಿತ ಸರ್ಕಾರಗಳು ಬಿಸಿಯೂಟದಂತಹ ಯೋಜನೆಗಳನ್ನು ಜಾರಿಗೆ ತಂದವು ಎಂದ ಅವರು, ಶ್ರೀಗಳ ಕನಸುಗಳನ್ನು ನನಸು ಮಾಡುವಲ್ಲಿ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಕು.ಎ.ತನುಷಾ, ಸಮಾಜ ಸೇವಕ ತರಕಾರಿ ಮಹೇಶ್, ಕರಕುಶಲ ತಜ್ಞ ಮಹದೇವಾಚಾರ್, ಕನ್ನಡ ಪರ ಹೋರಾಟಗಾರ ಕಾಡುಕೊತ್ತನಹಳ್ಳಿ ನಂದೀಶ್, ಕೃಷಿಕ ಮಾದಪ್ಪ ಅವರಿಗೆ ಸಿದ್ದಗಂಗಾ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಮAಜುನಾಥ್ ಕಾಯಕಯೋಗಿ ಪುರಸ್ಕಾರ ನೀಡಿ ಗೌರವಿಸಿದರು.
ಹಿಂದಿ ಸಭಾ ಅಧ್ಯಕ್ಷ ವಿನಯ್‌ಕುಮಾರ್, ಸಿದ್ದಗಂಗಾಮಠ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಡಿಬೆಟ್ಟಹಳ್ಳಿ ಮಂಜುನಾಥ್, ರಾಷ್ಟಿçÃಯ ಯುವಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಮುಖಂಡರಾದ ತಬರೇಸ್‌ಖಾನ್ ಸಿ.ಸಿದ್ದಶೆಟ್ಟಿ, ಹಾರೋಹಳ್ಳಿ ರಾಮಚಂದ್ರು ಇತರರಿದ್ದರು.

0 Comments