Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಕೇಶವಮೂರ್ತಿ ಪರ ಡಿ.ಕೆ.ಶಿವಕುಮಾರ್ ಬೃಹತ್ ರೋಡ್ ಶೋ

ಬೆಂಗಳೂರು :.ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ.ಶಿವಕುಮಾರ್ ರವರು ಮಹಾಲಕ್ಷ್ಮೀಲೇಔಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಕೇಶವಮೂರ್ತಿ ಪರ ಬೃಹತ್ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.

ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಾಜ್ ಕುಮಾರ್, ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್ ಶಿವರಾಜು, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಹೆಚ್.ಎಸ್.ಮಂಜುನಾಥಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುಧ್ರೀಂದ್ರ, ಪರಿಸರ ರಾಮಕೃಷ್ಣ, ನಟರಾಜ್ ರವರು ಸಾತ್ ನೀಡಿದರು.

ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರುಗಳು, ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರುಗಳು ಬೃಹತ್ ರೋಡ್ ಶೋ ಪಾಲ್ಗೊಂಡಿದ್ದರು.

 ಕಾಮಾಕ್ಷಿ ಪಾಳ್ಯದಲ್ಲಿರುವ ಆಂಜನೇಯ ದೇವಸ್ಥಾನದಿಂದ  ವಾರ್ಡ್ -102ರಿಂದ ಪ್ರಾರಂಭವಾಗಿ ಈಶ್ವರ ದೇವಸ್ಥಾನ ರಸ್ತೆ, ಕಾಮಾಕ್ಷಿಪಾಳ್ಯ ಮುಖ್ಯರಸ್ತೆ ,ಕುವೆಂಪು ಉದ್ಯಾನವನ, 8ನೇ ಮುಖ್ಯರಸ್ತೆ,ಶಂಕರಮಠ ಸಿಗ್ನಲ್, ಗರುಡ ಪ್ರತಿಮೆ ,ಗೆಳಯರ ಬಳಗ,ಆದಿತ್ಯ ಹೋಟೆಲ್, ಕುರುಬರಹಳ್ಳಿ ಸರ್ಕಲ್, ಥಾಮಸ್ ಬಿಲ್ಡಿಂಗ್, 60feet ರೋಡ್, ಸತ್ಯನಾರಾಯಣ ಕಲ್ಯಾಣ ಮಂಟಪ,ಜೈ ಮಾರುತಿನಗರದಲ್ಲಿ ರೋಡ್ ಶೋ ಮುಕ್ತಾಯವಾಯಿತು.

Post a Comment

0 Comments

Ad Code

Responsive Advertisement