Ticker

6/recent/ticker-posts

Ad Code

Responsive Advertisement

BIG NEWS ದುರ್ಬಲಗೊಳಿಸಿದ ಕುಖ್ಯಾತಿ ಸಿದ್ದರಾಮಯ್ಯರದ್ದು: ಮುಖ್ಯಮಂತ್ರಿ ಬೊಮ್ಮಾಯಿ‌

ಗದಗ: ಲೋಕಾಯುಕ್ತವನ್ನು ದುರ್ಬಲಗೊಳಿಸಿದ ಕುಖ್ಯಾತಿ ಸಿದ್ದರಾಮಯ್ಯರಿಗೆ ಸಲ್ಲುತ್ತದೆ. ಭ್ರಷ್ಟಾಚಾರ ಪರವಾಗಿ ನಿಂತಿರೋದು ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಎಂದು‌ ಸಿಎಂ ಬಸವರಾಜ ಬೊಮ್ಮಾಯಿ‌ ವಾಗ್ದಾಳಿ ನಡೆಸಿದರು.

ಇಂದು ಗದಗ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಪ್ರಧಾನಿಗಳ ಕಾರ್ಯಕ್ರಮ ಮುಗಿಸಿ ಬೀದರ್ ನಿಂದ ಬೆಳ್ಳಾರಿ ಜಿಲ್ಲೆಯಲ್ಲಿದ್ದೆ‌‌. ವಿಜಯನಗರ ಜಿಲ್ಲೆಯಲ್ಲಿ ಪ್ರಚಾರ ಮುಗಿಸಿ ಹುಬ್ಬಳ್ಳಿಗೆ ಹೊರಟಿದ್ದೆ. ಮಾರ್ಗ ಮಧ್ಯೆ ಮುಂಡರಗಿ, ಗದಗ ಸ್ನೇಹಿತರನ್ನ ಭೇಟಿಯಾಗಲು ಬಂದಿದ್ದೇನೆ. ಈ ಭೇಟಿಗೆ ವಿಶೇಷ ಅರ್ಥ ಏನಿಲ್ಲ. ಶಿರಹಟ್ಟಿ, ಗದಗ ಕ್ಷೇತ್ರದ ಏನೆಲ್ಲ ನಡೆದಿದೆ ಅಂತಾ ತಿಳಿದುಕೊಂಡು, ಸಲಹೆ ಸೂಚನೆ ಕೊಡಲು ಬಂದಿದ್ದೇನೆ ಎಂದರು.

ರಾಜ್ಯದ ಮುಖ್ಯಮಂತ್ರಿಯಾಗಿ 224 ಕ್ಷೇತ್ರ ಕಾಳಜಿ ಮಾಡುತ್ತೇನೆ ಗದಗನೂ ಕಾಳಜಿ ಮಾಡುತ್ತಿದ್ದೇನೆ. ದಾರಿ ಮಧ್ಯೆ ಭೇಟಿಯಾಗಿ ಸಲಹೆ ಸೂಚನೆ ಕೊಡಲು ಬಂದಿದ್ದೇನೆ. ಕಾಂಗ್ರೆಸ್ ಐದು ಬಿಟ್ಟು ಐವತ್ತು ಕ್ಯಾರಂಟಿ ಘೋಷಣೆ ಮಾಡಲಿ. ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. 10 ನೇ ತಾರೀಕು ವರೆಗು ಮತ್ರ ಗ್ಯಾರಂಟಿ ಎಂದರು.

ಭ್ರಷ್ಟಾಚಾರ ಆರೋಪ ಮಾಡುವ ಕಾಂಗ್ರೆಸ್. ಒಂದು ಕೇಸ್ ತೋರಿಸಲಿ. ಕಾಂಗ್ರೆಸ್ ಭ್ರಷ್ಟಾಚಾರದ 60 ಪ್ರಕರಣಗಳೊ ಎಸಿಬಿಯಲ್ಲಿ ಮುಚ್ಚಿಹಾಕಿದ್ದರು. ಆ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಕೊಟ್ಟಿದ್ದೇನೆ. ಸಿದ್ದರಾಮಯ್ಯ ಮೇಲೂ ಸೇರಿ ಪ್ರಕರಣಗಳಿದ್ದವು. ಅವುಗಳ ತನಿಖೆ ಮಾಡದೇ ಬಿ ರಿಪೋರ್ಟ್ ಕೊಟ್ಟು ಮುಚ್ಚಿಹಾಕಿದ್ದಾರೆ ಎಂದರು.

ಎಸಿಬಿ ಮಾಡಿದ್ದೇ ಕೇಸ್ ಮುಚ್ಚಿಹಾಕುಲು ಅಂತಾ ಹೈ ಕೋರ್ಟ್ ಹೇಳಿದೆ. ಆರೋಪವನ್ನು ಮುಚ್ಚಿ ಹಾಕಲು‌ ಎಸಿಬಿ ರಚನೆಯಾಗಿದೆ ಅಂತಾ ಉಲ್ಲೇಖಿಸಿದ್ದಾರೆ. ಹೀಗಾಗಿ ಲೋಕಾಯುಕ್ತಕ್ಕೆ ಪ್ರಕರಣಗಳನ್ನು ನೀಡಿದ್ದೇನೆ ಎಂದರು.

ಪಿಎಂ ವಿರುದ್ಧ 91 ಬೈಗುಳ ಬಳಕೆ ಆರೋಪಕ್ಕೆ ಪ್ರತಿಕ್ರಿಯೆಯಿಸಿ ಸಿಎಂ ಬೊಮ್ಮಾಯಿ‌ ಅವರು, ಮೋದಿಯವರು ಏನು ಹೇಳಬೇಕು ಅಂತಾ ಖರ್ಗೆ ಹೇಳಬೇಕಿಲ್ಲ ಎಂದರು. 

ಪರಮೇಶ್ವರ ಮೇಲೆ ಹಲ್ಲೆ ಪ್ರಕರಣ: ತನಿಖೆಯಾಗಲಿ

ಮಾಜಿ ಸಿಎಂ ಜಿ ಪರಮೇಶ್ವರ ಮೇಲೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ, ಪ್ರಕರಣ ತನಿಖೆಯಾಗಲಿ. ಚುನಾವಷೆ ಆಯೋಗ ಗಮನಿಸುತ್ತದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗುತ್ತದೆ ಎಂದರು.

Post a Comment

0 Comments

Ad Code

Responsive Advertisement