ಸನಾತನ ಸಂಸ್ಥೆಯಿಂದ ಏಪ್ರಿಲ್ 1ರಿಂದ 30 ಕಾಲಾವಧಿಯಲ್ಲಿ ಹಿಂದೂ-ರಾಷ್ಟ್ರ ಜಾಗೃತಿ ಅಭಿಯಾನ
ಕೋಲಾರ : ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ 81ನೇ ಜನ್ಮೋತ್ಸವ ನಿಮಿತ್ತ ಸನಾತನ ಸಂಸ್ಥೆ ಆಯೋಜಿಸಿದ ಹಿಂದೂ ರಾಷ್ಟ್ರ-ಜಾಗೃತಿ ಅಭಿಯಾನದ ಅಂತರ್ಗತ ದೇವಸ್ಥಾನ ಸ್ವಚ್ಛತೆ ನಿಮಿತ್ತ ಕೋಲಾರ ಕೆಜಿಎಫ್ ನ ಕರಪನಹಳ್ಳಿ ದೊಡ್ಡೂರು, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಬಂಗಾರಪೇಟೆ ತಾಲ್ಲೂಕಿನ ಶ್ರೀ ಮಾರಿಯಮ್ಮ ದೇವಸ್ಥಾನ, ಕೆಜಿಎಫ್ ಸ್ವರ್ಣ ನಗರದಲ್ಲಿರುವ ಶ್ರೀ ವಿದ್ಯಾ ಗಣಪತಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳ ಸ್ವಚ್ಛತೆಯನ್ನು ಮಾಡಲಾಯಿತು. ಇದೇ ಸಮಯದಲ್ಲಿ ಉಪಸ್ಥಿತ ಧರ್ಮಪ್ರೇಮಿಗಳು ಸೇರಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಾರ್ಥನೆ ಮಾಡಿದರು.
ಸನಾತನ ಸಂಸ್ಥೆಯಿಂದ ಏಪ್ರಿಲ್ 1 ರಿಂದ 30 ಈ ಕಾಲಾವಧಿಯಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಅಭಿಯಾನವನ್ನು ಅಯೋಜಿಸಲಾಗಿದ್ದು ಇದರ ಅಂತರ್ಗತ ರಾಜ್ಯದ ವಿವಿಧ ಕಡೆಗಳಲ್ಲಿ ದೇವಸ್ಥಾನಗಳ ಸ್ವಚ್ಛತೆ, ಸಾಮೂಹಿಕ ಪ್ರಾರ್ಥನೆ ಹಾಗೂ ಆಧ್ಯಾತ್ಮಿಕ ಸಾಧನೆಯ ಕುರಿತು ಪ್ರವಚನ ಹೀಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಸ್ತ ಹಿಂದೂ ಬಾಂಧವರು ಈ ಉಪಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಿಂದೂ ರಾಷ್ಟ್ರ-ಜಾಗೃತಿ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಲಾಗಿದೆ.




0 Comments