ನವ ಚಂಡಿಕಾ ಹೋಮ “ಪಂಜುರ್ಲಿ ದೈವ” ಅಲಂಕಾರ
ವಾರ್ತಾ ಜಾಲ ದೇವನಹಳ್ಳಿ : ಪಟ್ಟಣದ ಹಳೇ ತಾಲೂಕು ಕಚೇರಿ ರಸ್ತೆಯಲ್ಲಿ ನೆಹಾಜರಿದ್ದರು.ಕಲ ಇಷ್ಟಾರ್ಥಗಳನ್ನು ನೆರವೇರಿಸುವ ಶ್ರೀ ಚೌಡೇಶ್ವರಿದೇವಿ ದೇವಾಲಯದಲ್ಲಿ 10 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಆಶ್ವತ್ಥನಾರಾಯಣ್(ಎಸ್‌ಎಲ್‌ಎನ್) ತಿಳಿಸಿದರು.ಅವರು ಪಟ್ಟಣದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 10ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಭಕ್ತಾದಿಗಳು ಆಗಮಿಸಿ ಎರಡು ದಿನ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ಎಂದರು
ದೇವಾಲಯ ಟ್ರಸ್ಟ್ನ ಪಿ. ಗಂಗಾಧರ್ ಮಾತನಾಡಿ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಏಪ್ರಿಲ್ 22ರಂದು ಶನಿವಾರ ಮತ್ತು 23ರಂದು ಭಾನುವಾರ ಭಕ್ತಾದಿಗಳ ಸಹಕಾರದಿಂದ ವಿಶೇಷ ಪೂಜಾ ಕಾರ್ಯಗಳನ್ನು ಆಯೋಜಿಸಲಾಗಿದೆ 2014ರ ಅಕ್ಷಯ ತೃತೀಯ ದಿನದಂದು ನೂತನವಾಗಿ ಪ್ರತಿಷ್ಠಾಪಿಸಲ್ಪಟ್ಟಿರುವ ಸರ್ವಶಕ್ತಾ÷್ಯತ್ಮಕ ಶ್ರೀ ಚೌಡೇಶ್ವರಿ ದೇವಿಯ ದೇವಾಲಯ 10ವರ್ಷಗಳನ್ನು ಪೂರೈಸಿರುವುದು ಪ್ರತಿವರ್ಷ ಅದ್ದೂರಿಯಾಗಿ ವಾರ್ಷಿಕೋತ್ಸವ ನಡೆಸಲಾಗುತ್ತಿದೆ,
ಏಪ್ರಿಲ್22 ರಂದು ಶನಿವಾರ ಬೆಳಿಗ್ಗೆ 7ಕ್ಕೆ ಮಹಾ ಸಂಕಲ್ಪ, ಅಭಿಷೇಕ, ಸಂಜೆ 5ಕ್ಕೆ ಸ್ವಸ್ತಿ ಪುಣ್ಯಾಹ, ದೇವನಾಂದಿ ಕಳಸಸ್ಥಾಪನೆ, ಅಷ್ಠಾವದಾನ ಸೇವೆ, 8ಕ್ಕೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಎಪ್ರಿಲ್23ರಂದು ರಂದು ಭಾನುವಾರ ಬೆಳಿಗ್ಗೆ 7ಕ್ಕೆ ಮಹಾ ಸಂಕಲ್ಪ, ಅಭಿಷೇಕ, 8 ಗಂಟೆಗೆ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯೇಶ್ವರ ಕ್ಷೇತ್ರದ ಪ್ರಧಾನ ಅರ್ಚಕರಾದ ವೇ||ಬ್ರ||ಶ್ರೀ ಸಿ.ಎಸ್. ರಾಜಗೋಪಾಲ್‌ರವರ ಅದ್ವರ್ಯುವಿನಲ್ಲಿ ನವ ಚಂಡಿಕಾಯೋಮ, ಹಾಗೂ ಚೌಡೇಶ್ವರಿ ಅಮ್ಮನವರಿಗೆ ಕರಾವಳಿಯ ದೈವವಾದ “ಪಂಜುರ್ಲಿ ದೈವ” ಅಲಂಕಾರ ಏರ್ಪಡಿಸಲಾಗಿದ್ದು ದೇವಿಗೆ ಬೆಳ್ಳಿಯ ಪ್ರಭಾವಳಿ ಸಮರ್ಪಿಸಲಾಗುವುದು,ನಂತರ ಶ್ರೀ ಚೌಡೇಶ್ವರಿ ದಾಸೋಹ ಭವನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ,ಮದ್ಯಾಹ್ನ 2ಗಂಟೆಗೆ ಅಣಿಘಟ್ಟ ಶ್ರೀ ಂಆರುತಿ ಯೋಗಾಶ್ರಮದ ಶ್ರೀ ಮರಶಿವದಾಸ್ ಗುರೂಜಿ ತಂಡದಿಂದ ಭಜನೆ, ಸುಮಂಗಲಿಯರಿಂದ ಆರತಿ ಕಳಸ ಹಾಗೂ ಮಂಗಳ ವಾದ್ಯಗಳೊಂದಿಗೆ ಪಟ್ಟಣದ ರಾಜಬೀದಿಯಲ್ಲಿ ಚಿನ್ನಲೇಪಿತ ಅಮ್ಮನವರ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಗುವುದು,
ಸಂಜೆ 6ಗಂಟೆಗೆ ದೇವನಹಳ್ಳಿ ಶಾರದಾಂಭ ಸಾಂಸ್ಕೃತಿಕ ಕಲಾ ಟ್ರಸ್ಟ್ ಶ್ರೀನಿವಾಸಮೂರ್ತಿರವರ ಶ್ರೀ ರಾಗಾ ಮೆಲೋಡಿಸ್ ನಿಂದ ರಸಮಂಜರಿ ಕಾರ್ಯಕ್ರಮ, 8ಗಂಟೆಗೆ ಮಹಾಮಂಗಲಾರತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ದೇವಾಲಯದ ಶಾಶ್ವತ ಪೂಜೆಗೆ 5001ರೂ ದಾಸೋಹ ಸೇವೆಗೆ 3001ರೂ ಒಂದುದಿನದ ಸೇವೆಗೆ 1000ರೂ ನೀಡಿ ಸೇವೆಯಲ್ಲಿ ಪಾಲ್ಗೊಳ್ಳಲು ಕೋರಿದೆ. ಪತ್ರಿಕಾ ಗೋಷ್ಟಿಯಲ್ಲಿ ಪಾಪಣ್ಣ, ಗಂಗಾಧರಪ್ಪ, ಪುರಸಭಾ ಮಾಜಿ ಸದಸ್ಯ ಪಿ. ಜಯರಾಮ್, ಹನುಮಂತಪ್ಪ, , ತೇಜ, ಗೋಪಾಲ್, ಶ್ರೀರಾಮಯ್ಯ, ಅಶ್ವತ್ಥ, ಪ್ರಭು, ರಾಕೇಶ್ ಅನೇಕ ಯುವಕ ಸಂಘದ ಸದಸ್ಯರು ಹಾಜರಿದ್ದರು.

0 Comments