ಬೆಂಗಳೂರು : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮಲ್ಲೇಶ್ವರಂ ವಾರ್ಡ್ ವ್ಯಾಪ್ತಿಗೆ ಬರುವ ರಾಮಯ್ಯ ಬಸ್ ನಿಲ್ದಾಣ, ಎಚ್.ಎಂ.ಟಿ, ಎಂ. ಎಸ್. ರಾಮಯ್ಯ ಮುಖ್ಯ ರಸ್ತೆಯ ಆಸುಪಾಸಿನಲ್ಲಿ ಹಾಗೂ ಕೆ.ಎನ್.ಬಡಾವಣೆಯ ಸುತ್ತಮುತ್ತಲಿನ ಭಾಗಗಳಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದ ಮಲ್ಲೇಶ್ವರ ಕ್ಷೇತ್ರದ ಶಾಸಕರೂ ಆದ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಪಾದಯಾತ್ರೆ ಮಾಡುತ್ತಾ, ಮನೆಮನೆಗೂ ಭೇಟಿ ನೀಡುವುದರ ಮೂಲಕ ಮತಯಾಚನೆಯನ್ನು ಮಾಡಿದರು.
ಈ ಸಂದರ್ಭದಲ್ಲಿಮಾಜಿ ಬಿಬಿಎಂಪಿ ಸದಸ್ಯರುಗಳಾದ ಎನ್. ಜೈಪಾಲ್, ಮುನಿಸ್ವಾಮಿ ಗೌಡ್ರು, ಎಂ. ಸಿ.ಜೈಪ್ರಕಾಶ್,ಬಿಜೆಪಿ ಬೆಂಗಳೂರು ಉತ್ತರ ಕಾರ್ಯಕಾರಿಣಿ ಸದಸ್ಯರಾದ ಡಾ. ಜಿ.ಎಸ್. ಚೌಧರಿ, ಬೆಂಗಳೂರು ವಿಶ್ವವಿದ್ಯಾಲಯದ ನಾಮ ನಿರ್ದೇಶಿತ ಸದಸ್ಯರಾದ ಎಂ. ಚನ್ನಕೇಶವ, ಮಲ್ಲೇಶ್ವರಂ ಕ್ಷೇತ್ರ ಬಿಜೆಪಿಪ್ರಧಾನ ಕಾರ್ಯದರ್ಶಿ ಕೇಶವ ಜಿ., ಬೆಂಗಳೂರು ಉತ್ತರ ಜಿಲ್ಲಾ ಎಸ್ ಸಿ ಮೋರ್ಚಾದ ಅಧ್ಯಕ್ಷ ಮಂಜು ಪ್ರಕಾಶ್, ವಾರ್ಡ್ ಅಧ್ಯಕ್ಷ ಕೆ. ವರದರಾಜು, ಬಿ. ಸತ್ಯನಾರಾಯಣ (ನಾಣಿ), ಭಾರತಿ ಮುಂತಾದ ಇತರೆ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಕಾರ್ಯಕರ್ತರು ಭಾಗವಹಿಸಿದ್ದರು.

0 Comments