Ticker

6/recent/ticker-posts

Ad Code

Responsive Advertisement

ದಾಸರಹಳ್ಳಿಯಲ್ಲಿ ಮೋಜು, ಮಾಸ್ತಿ ಮಾಡಲು ಬಂದಿಲ್ಲ! ಜನ ಸೇವೆ ಮಾಡಲು ಬಂದಿದ್ದೇನೆ. :: ಮಂಜುನಾಥ್

ಕಳೆದ ಐದು ವರ್ಷದಿಂದ ದಾಸರಹಳ್ಳಿ ವಿಧಾಸಭಾ ಕ್ಷೇತ್ರದಲ್ಲಿ ಜನಪರವಾದ ಕೆಲಸ ಕಾರ್ಯ ಮಾಡುತ್ತೀದ್ದೇನೆ. ದಾಸರಹಳ್ಳಿ ಮತದಾರರು ಜೆಡಿಎಸ್ ಪರವಾಗಿದ್ದಾರೆ.

ನಾನು ಯಾವುದೇ ಭ್ರಷ್ಟಾಚಾರ ವಿಲ್ಲದೇ ಅಭಿರುದ್ದಿ ಕಾಮಗಾರಿ ಮಾಡಿದ್ದೇನೆ.ಮತ್ತೆ ಜನಾಶ್ರಿವಾದ ಪಡೆಯಲು ನನ್ನ ಪಕ್ಷದ ಮುಖಂಡರು, ಕಾರ್ಯಕರ್ತರು ಸಿದ್ದರಾಗಿ ದಾಸರಹಳ್ಳಿಯಲ್ಲಿ ಜೆಡಿಎಸ್ ಗೆಲ್ಲಿಸುತ್ತೆವೆಂದು ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ನಾನು ಇಲ್ಲಿ ಮೋಜು ಮಸ್ತಿ ಮಾಡಲು ಬಂದಿಲ್ಲ. ಜನರಿಗೆ ಸೇವೆ ಮಾಡಲು ಬಂದಿದ್ದೇನೆ ಎಂದು ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿ ಆರ್. ಮಂಜುನಾಥ್ ಹೇಳಿದ್ದಾರೆ.

ದಾಸರಹಳ್ಳಿಯ ನೆಲೆ ಮಹೇಶ್ವರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎತ್ತಿನ ಗಾಡಿಯಲ್ಲಿ ನಿಂತು ಮೆರವಣಿಗೆಯ ಮೂಲಕ ಬಾಗಲಗುಂಟೆ ಬಿ ಬಿ ಎಂ ಪಿ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಸುದ್ಧಿಗಾರರ ಜೊತೆಗೆ ಮಾತನಾಡಿದ ಮಂಜುನಾಥ್ ನಾನು ಸೇವೆ ಮಾಡುತ್ತೇನೆ ಮತ್ತೆ ಅವಕಾಶ ಮಾಡಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ನನಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿತು ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗಲಿಲ್ಲ. ಈಗ ಕರ್ನಾಟಕದಲ್ಲಿ ಜನ ಜೆಡಿಎಸ್ ಪರವಾಗಿದ್ದಾರೆ. ಮತ್ತೆ ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗುತ್ತಾರೆ ಇಲ್ಲಿಯೂ ಜೆಡಿಎಸ್ ಪರವಾಗಿ ಜನ ಮತ ಕೊಡಲು ಸಿದ್ದರಾಗಿದ್ದಾರೆ.

ನಾವು ಸ್ವಾಭಿಮಾನಿ ಕನ್ನಡಿಗರು, ರೈತ, ಕೂಲಿ ಕಾರ್ಮಿಕರ ಪರವಾಗಿದ್ದೇವೆ. ಈಗಾಗಲೇ ರಾಷ್ಟ್ರೀಯ ಪಕ್ಷದವರಿಂದ ನಮ್ಮ ನಾಡಿಗೆ ಅನ್ಯಾಯ ವಾಗಿದೆ ಇದೆಲ್ಲಾ ಸರಿ ಹೋಗಬೇಕಾದರೆ ಇಲ್ಲಿ ಜೆಡಿಎಸ್ ಗೆಲ್ಲಲೇಬೇಕು ಅದಕ್ಕಾಗಿ ಬೆಂಬಲಿಸಿ ಎಂದು ಹೇಳಿದ ಮಂಜುನಾಥ್ ಚುನಾವಣೆ ಅಂದ ಮೇಲೆ ಸ್ಪರ್ಧೆ ಇರುತ್ತೆ ಆದರೆ ನಮಗೆ ಯಾರೂ ವಿರೋಧಿಗಳು ಇಲ್ಲ ಜೆಡಿಎಸ್ ಗೆಲುವು ಶತ ಸಿದ್ದ ಎಂದು ಇದೆ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸುಮಾರು ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸಾಗಿದ ಕಾರ್ಯಕರ್ತರುಗಳ ಮೆರವಣಿಗೆಯನ್ನು ಜೆಡಿಎಸ್ ಮುಖಂಡ, ಮಾಜಿ ಮುಖ್ಯ ಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಚಾಲನೆ ನೀಡಿ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ರವರಿಗೆ ಶುಭಾಶಯಗಳು ಹೇಳಿ ಹೋದರು.

ಈ ಸಂದರ್ಭದಲ್ಲಿ ಶಾಸಕ ಮಂಜುನಾಥ್ ಜೊತೆಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಂದಾನಪ್ಪ, ದಾಸರಹಳ್ಳಿ ಅಧ್ಯಕ್ಷ ಎಂ. ಮುನಿಸ್ವಾಮಿ, ಸಂಯೋಜಕ ಕೆ. ಸಿ ವೆಂಕಟೇಶ್, ಬಿ. ಏನ್ ಜಗದೀಶ್, ಚರಣ್ ಗೌಡ,ಕೆಂಪ ಹೋಬಳಯ್ಯ, ಹನುಮಂತರಾಜು, ಗುರುಪ್ರಸಾದ್, ದಾಸರಹಳ್ಳಿಯ ತಮ್ಮಣ್ಣ, ಮಲ್ಲೇಶ್ ಗೌಡ, ಜಗದೀಶ್, ಪದ್ಮಾವತಿ ನರಸಿಂಹ ಮೂರ್ತಿ, ಸಿ ಜೆ ರಮೇಶ್, ಲೋಕೇಶ್ ಗೌಡ ಶ್ರುತಿ ಕಿರಣ್, ಸುಶ್ಮಿತಾ ಭರತ್, ರಾಣಿಪ್ರತಾಪ್, ಹಾಗೂ ಇತರೆ ನೂರಾರು ಮುಖಂಡರು ಹಾಜರಿದ್ದರು.

ವರದಿ.. ಎಂ ಶ್ರೀನಿವಾಸ್ ಕುಮಾರ್ 

Post a Comment

0 Comments

Ad Code

Responsive Advertisement