Ticker

6/recent/ticker-posts

Ad Code

Responsive Advertisement

ಪ್ರಾಣಿ ಪಕ್ಷಿಗಳ ದತ್ತು ಸ್ವೀಕಾರ

ಬೆಂಗಳೂರು, ಏಪ್ರಿಲ್ 12 (ಕರ್ನಾಟಕ ವಾರ್ತೆ) :  ಇಂಡಿಯನ್ ಅಹೆಡ್ ಎವಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರು 3 ಲಕ್ಷಗಳನ್ನು ಪಾವತಿಸಿ ಮೈಸೂರು ಮೃಗಾಲಯದ ಆನೆಯನ್ನು ಮಾರ್ಚ್ 30, 2023 ರಿಂದ ಮಾರ್ಚ್ 29, 2024ರ ವರೆಗೆ ಒಂದು ವರ್ಷದ ಅವಧಿಗೆ ದತ್ತು ಸ್ವೀಕರಿಸಿದ್ದಾರೆ.

ಬೆಂಗಳೂರು ಮಗೇಶ್ವರಿ ನಟರಾಜನ್ ಅವರು ಗ್ರೇಟ್ ವೈಟ್ ಪೆಲಿಕಾನ್‍ನ್ನು ರೂ. 25 ಸಾವಿರಗಳನ್ನು ಪಾವತಿಸಿ, ರಿತೇಶ್ ಗಾಲಾ, ಮುಂಬೈ ಇವರು 30 ಸಾವಿರ ರೂ.ಗಳನ್ನು ಪಾವತಿಸಿ ಎರಡು ಮಚ್ಚೆಯುಳ್ಳ ಜಿಂಕೆ,  ತುಮಕೂರು ಪ್ರೆಸ್ಸಿಂಗ್ ವಕ್ರ್ಸ್ ಇವರು ರೂ.20 ಸಾವಿರ ಪಾವತಿಸಿ ಕಾಮನ್ ಆಸ್ಟ್ರಿಚ್, ಹಾಸನದ ವಿನಾಯಕ ಬಿ.ಸಿ. ಇವರು ರೂ.20 ಸಾವಿರಗಳನ್ನು ಪಾವತಿಸಿ ಹಸಿರು ಅನಕೊಂಡ ಪ್ರಾಣಿಗಳನ್ನು ಒಂದು ವರ್ಷದ ಅವಧಿಗೆ “ಪ್ರಾಣಿಗಳ ದತ್ತು ಸ್ವೀಕಾರ ಯೋಜನೆ” ಅಡಿಯಲ್ಲಿ ದತ್ತು ಸ್ವೀಕರಿಸಿದ್ದು, ಇವರು ವನ್ಯಪ್ರಾಣಿ ಸಂರಕ್ಷಣೆಯ  ಸತ್ಕಾರ್ಯದಲ್ಲಿ ಭಾಗವಹಿಸಿರುವುದಕ್ಕಾಗಿ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯವು ಅಭಿನಂದಿಸಿದೆ.

Post a Comment

0 Comments

Ad Code

Responsive Advertisement