Ticker

6/recent/ticker-posts

Ad Code

Responsive Advertisement

ಕಲಬುರ್ಗಿ ಬಿಜೆಪಿ ಮಾಧ್ಯಮ ನಿರ್ವಹಣಾ ಕೇಂದ್ರ ಆರಂಭ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಬಿಜೆಪಿ ಮಾಧ್ಯಮ ನಿರ್ವಹಣಾ ಕೇಂದ್ರವನ್ನು ಇಂದು ಕಲಬುರ್ಗಿ ನಗರದಲ್ಲಿ ಉದ್ಘಾಟಿಸಲಾಯಿತು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್, ವಿಧಾನಪರಿಷತ್ ಸದಸ್ಯ ಹಾಗೂ ಮಾಧ್ಯಮ ನಿರ್ವಹಣಾ ಕೇಂದ್ರದ ಸಂಚಾಲಕ ಶಶೀಲ್ ನಮೋಶಿ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಹಾಗೂ ಮಾಧ್ಯಮ ನಿರ್ವಹಣಾ ಕೇಂದ್ರದ ಸಹ-ಸಂಚಾಲಕ ವೆಂಕಟಪ್ರಸಾದ್ ಮಾಲೆಪಾಟಿ, ಕಲಬುರಗಿ ನಗರ ಜಿಲ್ಲಾ ಅಧ್ಯಕ್ಷ ಸಿದ್ದರಾಜು ಎಸ್ ಪಾಟೀಲ್, ಕಲಬುರ್ಗಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಶೀಲ್ ನಮೋಶಿ ಅವರು ಮಾತನಾಡಿ, ಚುನಾವಣೆ ನಿರ್ವಹಣೆಯ ಪ್ರಯುಕ್ತ ಬೆಂಗಳೂರಿನಲ್ಲಿ ಮಾಧ್ಯಮ ಕೇಂದ್ರವನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ 5 ವಿಭಾಗೀಯ ಕೇಂದ್ರಗಳನ್ನು ಪ್ರಾರಂಭಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಏಪ್ರಿಲ್ 9ರಂದು ವಿಭಾಗೀಯ ಮಾಧ್ಯಮ ನಿರ್ವಹಣಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ, ಮೈಸೂರು ಹಾಗೂ ಮಂಗಳೂರಿನಲ್ಲಿ ಏಪ್ರಿಲ್ 10ರಂದು ಮಾಧ್ಯಮ ನಿರ್ವಹಣಾ ಕೇಂದ್ರವನ್ನು ಉದ್ಘಾಟಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಮಾಧ್ಯಮ ನಿರ್ವಹಣಾ ಕೇಂದ್ರವನ್ನು ಇಂದು ಇಲ್ಲಿ ಪ್ರಾರಂಭಿಸಲಾಗುತ್ತಿದೆ, ಮುಂಬರುವ ಒಂದೆರಡು ದಿನಗಳಲ್ಲಿ ಬೆಳಗಾವಿಯಲ್ಲಿ ವಿಭಾಗ ಮಾಧ್ಯಮ ನಿರ್ವಹಣಾ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ರಾಜ್ಯಕ್ಕೆ ಆಗಮಿಸಿರುವ ರಾಷ್ಟ್ರೀಯ ನಾಯಕರು ವಿಭಾಗೀಯ ಮಾಧ್ಯಮ ನಿರ್ವಹಣಾ ಕೇಂದ್ರಗಳಿಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಚರ್ಚೆಗಳನ್ನು ಹಾಗೂ ಸುದ್ದಿಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ ಎಂದು ಮಾಲಿಕಯ್ಯ ಗುತ್ತೇದಾರ್ ಅವರು ತಿಳಿಸಿದರು.

Post a Comment

0 Comments

Ad Code

Responsive Advertisement