Ticker

6/recent/ticker-posts

Ad Code

Responsive Advertisement

ಮತದಾನ ಜಾಗೃತಿ ಮೂಡಿಸಲು ಜಾಥ ಮತ್ತು ಬೀದಿ ನಾಟಕ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವಿಧಾನಸಭಾ ಚುನಾವಣೆ ಅಂದವಾಗಿ ಕಡ್ಡಾಯ ಮತದಾನಕ್ಕಾಗಿ ಜಾಗೃತಿ ಮೂಡಿಸಲು ಕಾಲ್ನಡಿಗೆ ಜಾಥ ಮತ್ತು ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಧ್ಯಕ್ಷ ಎ.ಅಮೃತ್ ರಾಜ್ ರವರು ಮಾತನಾಡಿ, ದಿನಾಂಕ 23-4-2023ರ ಭಾನುವಾರ ಬೆಳಗ್ಗೆ 6-30ಕ್ಕೆ ಕಬ್ಬನ್ ಪಾರ್ಕ್ ಮುಖ್ಯದ್ವಾರದಲ್ಲಿ ಜಾಥ ಹಾಗೂ ಕಾಲ್ನಡಿಗೆ ಜಾಥವನ್ನು ಚುನಾವಣೆ ಆಯುಕ್ತರಾದ ಮನೋಜ್ ಕುಮಾರ್ ಮೀನಾ, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರಾದ ಉಜ್ವಲ್ ಗೋಶ್, ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ರವರು ಉದ್ಘಾಟನೆ ನೇರವೆರಿಸುವರು.

ಕಬ್ಬನ್ ಮುಖ್ಯದ್ವಾರದಿಂದ ಪ್ರಾರಂಭವಾಗಿ ಕಸ್ತೂರಬಾ ರಸ್ತೆ ಹಾದಿಯಲ್ಲಿ ಹೋಗಿ ಕಂಠೀರವ ಕ್ರೀಡಾಂಗಣದ ಒಳಾಂಗಣದ ರಸ್ತೆಯಲ್ಲಿ ಬಂದು ರಾಜಾರಾಮ್ ಮೋಹನ್ ರಾಯ್ ರಸ್ತೆಯ ಹಾದಿಯಲ್ಲಿ ನಡೆದು ಬಿಬಿಎಂಪಿ ನೌಕರರ ಸಂಘದ ಬಳಿ ಮುಕ್ತಾಯಗೊಳ್ಳುವುದು.

ಮತದಾನ ಜಾಗೃತಿ ಕಾಲ್ನಡಿಗೆ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು , ನೌಕರರು ಭಾಗವಹಿಸಲಿದ್ದಾರೆ.

ಸಾರ್ವಜನಿಕರು ಸಹ ಭಾಗವಹಿಸಬಹುದು , ಬೆಂಗಳೂರುನಗರ ಪ್ರದೇಶದಲ್ಲಿ ಮತದಾರರು ನಿರ್ಭಿತಿಯಿಂದ, ಭಯಮುಕ್ತರಾಗಿ ಹಾಗೂ ಸಂವಿಧಾನ ಕೊಟ್ಟಿರುವ ಮತದಾನದ ಹಕ್ಕನ್ನು ಮತದಾರರ ಸದುಪಯೋಗ ಪಡಿಸಿಕೊಳ್ಳಬೇಕು ಎಂಬ ಉದ್ದೇಶ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

Post a Comment

0 Comments

Ad Code

Responsive Advertisement