Ticker

6/recent/ticker-posts

Ad Code

Responsive Advertisement

ದಾಸರಹಳ್ಳಿ ಬಿಜೆಪಿಮಂಡಲ್ ಅಧ್ಯಕ್ಷ ಲೋಕೇಶ್ ಗೆ ಮಾನವೀಯತೆಯಿಂದ ಜೆಡಿಎಸ್ ರಕ್ಷಣೆ!!

ದಾಸರಹಳ್ಳಿ ಬಿಜೆಪಿಯಿಂದ ಹೇಗಾದರೂ ಮಾಡಿ ಟಿಕೆಟ್ ಪಡೆಯಲೇ ಬೇಕೆಂದು ಮಂಡಲ್ ಅಧ್ಯಕ್ಷ ಏನ್. ಲೋಕೇಶ್ ಗೌಡ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಎರಡು ಕಡೆ ದೊಡ್ಡ ಮಟ್ಟದಲ್ಲಿ ಬಿಜೆಪಿ ಹೆಸರಿನಲ್ಲಿ ಕಚೇರಿ ಮಾಡಿ ಅಲ್ಲಿ ಅನೇಕರೀತಿಯ ಕಾರ್ಯ ಚಟುವಟಿಕೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.ಟಿಕೆಟ್ ಹಂಚುವ ಸಮಯಕ್ಕೆ ಮೊದಲೇ ನಾನು ಸಹ ದಾಸರಹಳ್ಳಿ ಬಿಜೆಪಿ ಟಿಕೆಟ್ ಆಕಾಂಷಿ ಅಂತ ಹೇಳಿಕೊಂಡು ಸುದ್ದಿ ಪ್ರಕಟಿಸಿದ್ದು ಈಗ ಇತಿಹಾಸ ವಾಯಿತು.

ಬಿಜೆಪಿಯಿಂದ ಮಾಜಿ ಶಾಸಕ ಎಸ್.ಮುನಿರಾಜು ರವರು ಅಧಿಕೃತ ಅಭ್ಯರ್ಥಿ ಅಂತ ಘೋಷಣೆ ಅದ ಮೇಲೆ ಅವರ ವೆವಹಾರಿಕ ಬೆಂಬಲಿಗರನ್ನು ಮಾಜಿ ಪ್ರಧಾನಿ ದೇವೇಗೌಡ ರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆ ಮಾಡಿಸಿದ್ದು ಆಯಿತು.

ಈಗ ಅದೇ ಬಿಜೆಪಿಯ ಎಸ್ಸಿ -ಎಸ್ಟಿ ಯುವ ಮುಖಂಡ ರವೀಂದ್ರ ನಗರದ ಗಂಗಾಧರಯ್ಯ ಸಿ ಜಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಲೋಕೇಶ್ ಮಾಡಿದ್ದರೆಂದು ಕೇಸ್ ದಾಖಲಿಸಿದ್ದುಎಲ್ಲರಿಗೂ ತಿಳಿದ ವಿಚಾರ. ಈ ಹಿನ್ನಲೆಯಲ್ಲಿ ಲೋಕೇಶ್ ರವರು ಮಾನಸಿಕವಾಗಿ ನೋವು ಅನುಭವಿಸುತ್ತಿದ್ದಾರೆಂದು ತಿಳಿದು ನಾವು ಮಾನವೀಯತೆ ದೃಷ್ಟಿಯಿಂದ ಅವರ ರಕ್ಷಣೆ ಮಾಡಲು ತಯಾರಿದ್ದೇವೆ ಎಂದು ಜೆಡಿಎಸ್ ರಾಜ್ಯ ಒಕ್ತಾರಾ ಚರಣ್ ಗೌಡ ತಿಳಿಸಿದ್ದಾರೆ.

ದಾಸರಹಳ್ಳಿ ಜೆಡಿಎಸ್ ಶಾಸಕರ ಕಚೇರಿಯಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಚರಣ್ ಗೌಡ ನಾವು ನೊಂದವರ ಪರವಾಗಿ ಧ್ವನಿ ಎತ್ತಿ. ಲೋಕೇಶ್ ಪರವಾಗಿ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಅವರು ಜೆಡಿಎಸ್ ಪಕ್ಷ ಸೇರಿಕೊಳ್ಳಲು ಬಯಸಿದರೆ ಸ್ವಾಗತ ಮಾಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದ ಚರಣ್ ಗೌಡ ಮುಂದಿನ ದಿನಗಳಲ್ಲಿ ಜೆಡಿಎಸ್ ಸೇರುವ ಸೂಚನೆ ಕೊಟ್ಟರು.

ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದ ಬಿಜೆಪಿ ದಲಿತ ಮುಖಂಡ ಕೆಂಪರಾಜ್ ಮಾತನಾಡುತ್ತಾ ನಾವು ಬಿಜೆಪಿ ಹಾಗೂ ಲೋಕೇಡ್ ಬೆಂಬಲಿಗರು.ಲೋಕೇಶ್ ರವರನ್ನು ಕಾಪಾಡಿಕೊಳ್ಳಲು ಹಾಗೂ ಮಾನಸಿಕವಾಗಿ ಧ್ಯರ್ಯ ಕೊಡಲು ನಾವು ಇಂದು ಜೆಡಿಎಸ್ ಸೇರ್ಪಡೆ ಆಗುತ್ತಿದ್ದೇವೆ. ಬಿಜೆಪಿಯಲ್ಲಿ ಒಬ್ಬ ಮಂಡಲ್ ಅಧ್ಯಕ್ಷರಿಗೆ ರಕ್ಷಣೆ ಇಲ್ಲ. ಇನ್ನು ನಮ್ಮಂತವರ ಗತಿ ಏನು ಎಂದು ಆಲೋಚನೆ ಮಾಡಿ ನಮಗೆ ರಾಜಕೀಯವಾಗಿ ರಕ್ಷಣೆ ಬೇಕಾಗಿದೆ ಅದಕ್ಕಾಗಿ ನಾವು ಈ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದ ಕೆಂಪರಾಜ್ ಬಿಜೆಪಿ ಮಾಜಿ ಶಾಸಕ ಅಲ್ಲಿಯ ದಲಿತ ವೆಕ್ತಿಗೆ ಪ್ರಚೋದನೆ ಕೊಟ್ಟು ಅವರೇ ಲೋಕೇಶ್ ವಿರುದ್ಧ ಕೇಸ್ ಹಾಕಲು ಕಾರಣರಾಗಿದ್ದಾರೆಂದು ಬಿಜೆಪಿ ಅಭ್ಯರ್ಥಿ ಎಸ್. ಮುನಿರಾಜು ಈ ನಡೆಯನ್ನು ನಾವು ಖಂಡಿತ್ತೇವೆ ಎಂದು ನೇರವಾಗಿ ಆರೋಪ ಮಾಡಿದರು.


ಈ ಸಂದರ್ಭದಲ್ಲಿ ದಲಿತ ಮಹಿಳಾ ಮುಖಂಡರು, ದಲಿತ ಪುರುಷ ಮುಖಂಡರು ಕಾರ್ಯಕರ್ತರು ನೂರಾರು ಸಂಖ್ಯೆ ಯಲ್ಲಿ ಹಾಜರಿದ್ದರು. ಸುದ್ದಿ ಗೋಷ್ಠಿ ನಂತರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಜೆಡಿಎಸ್ ನ ಸ್ಥಳೀಯಮುಖಂಡರ ಜೊತೆಗೆ ಬಾಲಾಜಿ ವೇಕಟೇಶ್ ಹಾಗೂ ಅವರ ಗೆಳೆಯರು ಹಾಜರಿದ್ದರು.

ವರದಿ.. ಎಂ ಶ್ರೀನಿವಾಸ್ ಕುಮಾರ್

Post a Comment

0 Comments

Ad Code

Responsive Advertisement