-------------------------
ನಂಬಿಸಿ ಮೋಸ ಮಾಡಿದ ಡಿಕೆ ಬ್ರದರ್ಸ್
-------------------------------
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮಾರಾಟ ವಾಗಿದೆ.ಸ್ಥಳೀಯವಾಗಿ ನಾವು ಏಳು ಜನ ಆಕಾಂಷಿ ಆಗಿದ್ದೆವು. ಎಲ್ಲರೂ ವರ್ಷನುಗಟ್ಟಲೆ ವರಿಷ್ಟರು ಹೇಳಿದಹಾಗೆ ಕೇಳಿದ್ದೇವೆ. ನಾವು ಪ್ರತಿಭಟನೆ ಮಾಡುತ್ತಿದ್ದೇವೆ ಅಂದ್ರು ನಾವೆಲ್ಲರೂ ಹೋಗಿ ಸೇರಿಕೊಳ್ಳುತ್ತಿದ್ದೆವು. ಕೊರೊನ ಇದ್ದಾಗ ಕಾಂಗ್ರೆಸ್ ವತಿಯಿಂದ ಜನರಿಗೆ ಸಹಾಯ ಮಾಡಿದ್ದೇವೆ. ಪಕ್ಷದ ಬಾವುಟ ಹಿಡಿದು ಗಲ್ಲಿ, ಗಲ್ಲಿ ಸುತ್ತಿ ಪಕ್ಷದ ಸಂಘಟನೆ ಮಾಡಿದ್ದೇವೆ. ಈಗಿನ ಅಭ್ಯರ್ಥಿ ಆಗ ಎಲ್ಲಿ ಇದ್ದರು ಅವರಿಗೂ ಕಾಂಗ್ರೆಸ್ ಪಕ್ಷಕ್ಕೂ ಏನೂ ಸಂಬಂಧ ಇಲ್ಲ ಇಂಥ ವೆಕ್ತಿ ಕಾಂಗ್ರೆಸ್ ನಿಂದ ಹೇಗೆ ಗೆಲ್ಲುತ್ತಾರೆ ಎಂದು ದಾಸರಹಳ್ಳಿಯ ಕಾಗ್ರೇಸ್ ಟಿಕೆಟ್ ಆಕಾಂಷಿ ಏನ್ ರಮೇಶ್ ಗೌಡ ಹೇಳಿದ್ದಾರೆ.
ಬಿಜೆಪಿಯಲ್ಲಿ ಇದ್ದು ಅಲ್ಲಿ ಸಲ್ಲದವರು ಇಲ್ಲಿ ಹೇಗೆ ಸಲ್ಲುತ್ತಾರೆ.ನಿಮಗೆ ಧನಂಜಯ ಕುಟುಂಬದವರು ಬೀಗರಿರಬಹುದು ಅವರ ಹತ್ತಿರ ಸಾಕಷ್ಟು ನಿಮಗೆ ಕೊಡಲು ಯಾವುದೋ ಬೇನಾಮಿ ದುಡ್ಡಿರ ಬಹುದು ಅದನ್ನು ನೀವು ಪಡೆದು ಟಿಕೆಟ್ ಕೊಟ್ಟಿದ್ದು ಯಾವ ನ್ಯಾಯ ಯಾರೋ ಬಿಜೆಪಿಯ ಬಲಿಷ್ಠ ಮುಖಂಡ ದಾಸರಹಳ್ಳಿಯಲ್ಲಿ ಗೆದ್ದೇ ಗೆಲ್ಲುತ್ತೆನೆಂದು ಕಾಂಗ್ರೆಸ್ ಬಂದಿದ್ದರೆ ನಾವು ನಿಮ್ಮ ಮಾತಿಗೆ ಬೆಲೆ ಕೊಟ್ಟು ಕೆಲಸ ಮಾಡುತ್ತೀದ್ದೆವು ಅಲ್ಲಿ ಸಲ್ಲದವನು ಇಲ್ಲಿ ಹೇಗೆ ಸಲ್ಲುತ್ತಾರೆ ಡಿ ಕೆ ಬ್ರದರ್ಸ್ ಹಣಕ್ಕಾಗಿ ಕಾಂಗ್ರೆಸ್ ಹಾಳು ಮಾಡಿದ್ದಾರೆಂದು ರಮೇಶ್ ಗೌಡ ಆರೋಪಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಟಿಕೆಟ್ ಆಕಾಂಷಿ ಆಗಿದ್ದ ಯಾರೂ ಧನಂಜಯ ಜೊತೆಗೆ ಇಲ್ಲ. ಅವರೆಲ್ಲರೂ ನೋವು ಆಗಿದೆ ಅವರೆಲ್ಲಾ ಯಾರ ಪರವಾಗಿ ಇರುತ್ತಾರೋ ನನಗೆ ಗೊತ್ತಿಲ್ಲ ಒಟ್ಟಿನಲ್ಲಿ ದಾಸರಹಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಿದ್ದು ಸತ್ಯ ಎಂದು ರಮೇಶ್ ಗೌಡ ತಿಳಿಸಿದ್ದಾರೆ.
ಎಂ ಶ್ರೀನಿವಾಸ್ ಕುಮಾರ್

0 Comments