Ticker

6/recent/ticker-posts

Ad Code

Responsive Advertisement

ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎನ್. ಮಹೇಶ್ ಮತ ಪ್ರಚಾರ

 ಕೊಳ್ಳೇಗಾಲ ಸುದ್ದಿ : ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎನ್. ,ಮಹೇಶ್ ತಾಲ್ಲೂಕಿನ ಕಟ್ಟಕಡೆಯ ಯಾತ್ರಾ ಸ್ಥಳವಾದ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಚುನಾವಣೆ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿದರು,

ನೂರಾರು ಕಾರ್ಯಕರ್ತರೊಡನೆ  ಬೆಳಿಗ್ಗೆ 9:00 ಗಂಟೆಗೆ ಚಿಕ್ಕಲ್ಲೂರಿಗೆ ತೆರಳಿದ ಎನ್. ಮಹೇಶ್ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಚಾರವನ್ನು ಪ್ರಾರಂಭಿಸಿದರು,

ಈ ಸಂದರ್ಭದಲ್ಲಿ ಎನ್. ಮಹೇಶ್ ಮಾತನಾಡಿ ನನ್ನ ಮನೆ ದೇವರು ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಚುನಾವಣೆ ಪ್ರಚಾರವನ್ನು ಪ್ರಾರಂಭಿಸಿದ್ದೇನೆ ಈ ದಿನ ಮೂರು ಕಡೆ ಅಂದ್ರೆ ಟಗರಪುರ, ಕುಂತೂರು, ಹರಳೆ ಗ್ರಾಮಗಳಲ್ಲಿ ಚುನಾವಣೆ ಪ್ರಚಾರವನ್ನು ಮಾಡಲಿದ್ದೇವೆ ಇನ್ನೇನು ಮೂರು ದಿನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲಿದೆ ಜೊತೆಗೆ ಈ ಚುನಾವಣೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಇತಿಹಾಸವನ್ನು ಸೃಷ್ಟಿ ಮಾಡಲಿದೆ, ಕೊಳ್ಳೇಗಾಲ ಕ್ಷೇತ್ರದ ಜನತೆ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸುವ ಮೂಲಕ ಒಂದು ಇತಿಹಾಸ ಸೃಷ್ಟಿಯಾಗಲಿದೆ,

ಈಗಾಗಲೇ ಕೆಲವು ಅಭಿವೃದ್ಧಿ ಕೆಲಸಗಳು ನಡೆದಿವೆ ಕ್ಷೇತ್ರದಲ್ಲಿ ಸಂಪೂರ್ಣವಾದ ಅಭಿವೃದ್ಧಿ ಕೆಲಸಗಳು ಆಗಬೇಕಾದರೆ ಮತ್ತೊಂದು ಅವಕಾಶ ಬೇಕಾಗಿದೆ ಆ ಅವಕಾಶವನ್ನು ಕ್ಷೇತ್ರದ ಜನತೆ ನನಗೆ ಕೊಡುತ್ತಾರೆ ಎಂಬ ವಿಶ್ವಾಸವಿದೆ, ಯಾಕೆಂದರೆ

ಕ್ಷೇತ್ರದಲ್ಲಿ 5 ವರ್ಷದ ಅವಧಿಗೆ ಅಷ್ಟು ಕೆಲಸಗಳನ್ನು ಮಾಡಲು ಆಗುವುದಿಲ್ಲ ಐದು ವರ್ಷಗಳಿಗೆ ಒಬ್ಬೊಬ್ಬರು ಬದಲಾಗುವುದರಿಂದ ಅಭಿವೃದ್ಧಿ ಕೆಲಸಗಳು  ಪೆಂಡಿಂಗ್ ಉಳಿದ ಬಿಡುತ್ತವೆ, ಅದೇ ಇನ್ನೊಂದು ಸಲ ಅವಕಾಶ ಸಿಕ್ಕಿದರೆ ಇನ್ನು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿಸಬಹುದು,

ಕಳೆದ ಅವಧಿಯಲ್ಲಿ ಕೊರೋನ ಕಾರಣದಿಂದ ಹಾಗೂ ನನ್ನ ರಾಜಕೀಯ ಏರುಪೇರುಗಳಿಂದ    ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗಲಿಲ್ಲ,  ಅದಕ್ಕಾಗಿ ಕ್ಷೇತ್ರದ ಅಭಿವೃದ್ಧಿಯ ಕೆಲಸಗಳು ಆಗಬೇಕಾದರೆ ಮತ್ತೊಂದು ಐದು ವರ್ಷ ಅವಧಿಯ ಅಧಿಕಾರ ಬೇಕಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನಗೆ ಮತ್ತೊಂದು ಅವಕಾಶವನ್ನು ಮಾಡಿ ಕೊಟ್ಟರೆ ಕೊಳ್ಳೇಗಾಲ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹೆಚ್ಚು ಹೊತ್ತುಕೊಟ್ಟು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿಸುತ್ತೇನೆ ಎಂದರು,

ಈ ಸಂದರ್ಭದಲ್ಲಿ  ನಗರಸಭೆ ಸದಸ್ಯ ಕವಿತಾ, ರಾಮಕೃಷ್ಣ, ಜಗದೀಶ್, ಬಿಜೆಪಿ ಮಂಡಲ ಅಧ್ಯಕ್ಷ ರಮೇಶ್ ಮುರಾರಿ, ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು,

Post a Comment

0 Comments

Ad Code

Responsive Advertisement