ಬೆಂಗಳೂರು : ಶಾಂತಿ ಮತ್ತು ಕೋಮು ಸೌಹಾರ್ದತೆಗಾಗಿ ಇಫ್ತಾರ್ ಮಜ್ಲಿಸ್ ಮತ್ತು ಆಧ್ಯಾತ್ಮಿಕ ಸಮ್ಮೇಳನ ಖತ್ಮುಲ್ ಕುರಾನ್, ದರೂದ್, ನಾಥ್, ಇಫ್ತಾರ್, ತೌಬಾ, ತಾರಾವೀಹ್, ಸಹ್ರಿ, ಜಿಕ್ರ್, ದುವಾ ಮತ್ತು ಮಜ್ಲಿಸ್ ಕಾರ್ಯಕ್ರಮದ ಹತ್ತನೇ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದ್ದು,
ವಿಶ್ವ ಶಾಂತಿಗಾಗಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡುವ ಮೂಲಕ ಶಾಂತಿ ಹಾಗೂ ಸಹ ಬಾಳ್ವೆಯನ್ನು ನಡೆಸುತ್ತಿರುವ ಸಮಸ್ತರನ್ನು ಕರುಣಿಸಿ ಪ್ರಪಂಚದಲ್ಲಿರುವ ಎಲ್ಲರೂ ಸುಖ ಶಾಂತಿಗಳಿಂದ ಜೀವನ ಸಾಗಿಸುವಂತೆ ಆಶೀರ್ವದಿಸಲು ದೇವರನ್ನು ಪ್ರಾರ್ಥಿಸುವ ವಿಶೇಷ ಕಾರ್ಯಕ್ರಮ ಇದಾಗಿದ್ದು,
ರಂಜಾನ್ ಪವಿತ್ರ ಮಾಸದ 20ನೇ ದಿನವಾಗಿರುವ ಇದೇ 2023ರ ಏಪ್ರಿಲ್ 12 ನೇ ತಾರೀಖು ಬುಧವಾರದಂದು,
ಹಜರತ್ ಪೀರ್ ಸೈಯದ್ ತನ್ವಿರ್ ಹಶ್ಮಿ ಕಿಬ್ಲಾ, ಹಜರತ್ ಪೀರ್ ಸೈಯದ್ ಜೈನುದ್ದೀನ್ ಅಲ್ ಭೂಕಾರಿ ಕಿಬ್ಲಾ (ಕೂರಿಕುಹಿ ತಂಗಳ್), ಹಜರತ್ ಮೌಲಾನಾ ಎನ್.ಕೆ.ಎಂ. ಶಾಫಿ ಸಾದಿ (ಅಧ್ಯಕ್ಷರು ಕರ್ನಾಟಕ ರಾಜ್ಯ ವಖ್ಫ್ ಮಂಡಳಿ), ಹಜರತ್ ಮೌಲಾನಾ ಅಬ್ದುಲ್ ಖಾದರ್ ಶಾ ವಾಜಿದ್ ಅಬುಲುಲೈ, ಡಾ. ಹುಸೈನ್ ಸಖಾಫಿ ಚುಳಿಕೋಡ್, ಬಿ.ಎ., ಎಲ್.ಎಲ್.ಬಿ (ಉಪ ಕುಲಪತಿ, ಮರ್ಕಜ್), ಹಜರತ್ ಮೌಲಾನಾ ಮೊಹಮ್ಮದ್ ಅನಸ್ ಅಮಾನಿ ಪುಷ್ಪಗಿರಿ, ಹಜರತ್ ಮೌಲಾನಾ ಮೊಹಮ್ಮದ್ ಹಾರೂನ್ ನಯೀಮಿ ಅಶ್ರಫಿರವರೆಲ್ಲರ ಮಾರ್ಗದರ್ಶನದಲ್ಲಿ ರಂಜಾನ್ 20ನೇ 1443 ಹಿಜ್ರಿ ಮೊದಲ ತಾಕ್ ರಾತ್
ಮಧ್ಯಾಹ್ನ 3:00 ರಿಂದ ಹಜರತ್ ಖುದ್ದೂಸ್ ಸಾಹೇಬ್ ಈದ್ಗಾ ಮಿಲ್ಲರ್ಸ್ ರಸ್ತೆ, ಬೆಂಗಳೂರಿನಲ್ಲಿ ಏರ್ಪಡಿಸಲಾಗಿರುತ್ತದೆ. ಈ ಸಂದರ್ಭದಲ್ಲಿ
ಮಹಿಳೆಯರಿಗಾಗಿ ಪ್ರತ್ಯೇಕವಾಗಿ ವಿಶೇಷ ವ್ಯವಸ್ಥೆಗಳನ್ನು ಸಹ ಮಾಡಲಾಗಿರುತ್ತದೆ ಎಂಬ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.
ಜುಮ್ಮಾ ಮಸೀದಿ ಟ್ರಸ್ಟ್ ಬೋರ್ಡ್, ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಸ್ ಎಂ ಎ), ಸುನ್ನಿ ಜಮೀಯತುಲ್ ಉಲಮಾ ಅಖಿಲ ಕರ್ನಾಟಕ, ಎಸ್ ಜೆ ಯು, ಎಸ್ ಜೆ ಎಂ, ಕೆಎಂಜೆ, ಎಸ್ ವೈ ಎಸ್, ಎಸ್ ಎಸ್ ಎಫ್ ಸಹಯೋಗದಲ್ಲಿ ಜರಗಲಿರುವ ಈ ಕಾರ್ಯಕ್ರಮಕ್ಕೆ ಅಂದಾಜು ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳಲಿದ್ದು, ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಪ್ರಾರಂಭವಾಗುವ ಕಾರ್ಯಕ್ರಮವು ಮುಂದುವರೆದು ಮಧ್ಯರಾತ್ರಿ ಕಳೆದು ಬೆಳಗಿನ ಜಾವ ಮೂರರ ತನಕ ಜರಗಲಿದ್ದು ಅಗತ್ಯ ಎಲ್ಲಾ ಏರ್ಪಾಟುಗಳನ್ನು ಆಯೋಜಕರು ಮಾಡಿಕೊಂಡಿದ್ದಾರೆಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜುಮ್ಮಾ ಮಸೀದಿ ಟ್ರಸ್ಟ್ ಬೋರ್ಡ್ ನ ಪ್ರಧಾನ ಕಾರ್ಯದರ್ಶಿ ಉಸ್ಮಾನ್ ಶರೀಫ್, ಸುನ್ನಿ ಜಮೀಯತುಲ್ ಉಲಮಾ ಅಖಿಲ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಸುಹೇಲ್ ಬೇಗ್, ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಟಿ.ಸಿ.ಸಲಿ, ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘದ ಉಪಾಧ್ಯಕ್ಷ ಬಶೀರ್ ಸಾದಿ ಹಾಗೂ ಇನ್ನಿತರರು ಮಾಹಿತಿ ನೀಡಿದರು.

0 Comments