ಬೆಂಗಳೂರು : ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಮತ್ತಿಕೆರೆ ವಾರ್ಡನಲ್ಲಿ, ಇಂದು ಬೆಳಿಗ್ಗೆ ಸ್ಥಳೀಯ ಶಾಸಕರು ಹಾಗೂ ಸಚಿವರಾದ ಡಾ. ಸಿ.ಎನ್.ಅಶ್ವಥನಾರಾಯಣ ಅವರು ಮತ್ತಿಕೆರೆ ಊರೊಳಗಿನ ಶ್ರೀ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮತ್ತಿಕೆರೆ ವಾರ್ಡಿನ ಭಾಗದ ಮತದಾರರಲ್ಲಿ ಪಾದಯಾತ್ರೆಯನ್ನು ಮಾಡುವ ಮೂಲಕ ಮತ ಯಾಚಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರುಗಳಾದ ಮುನಿಸ್ವಾಮಿಗೌಡರು, ಎಂ. ಸಿ. ಜಯಪ್ರಕಾಶ್, ಸಮಾಜ ಸೇವಕರಾದ ಸಿ. ಎನ್. ಸತೀಶಣ್ಣ, ಬಿಜೆಪಿ ಮುಖಂಡರುಗಳಾದ ಎಂ. ಚನ್ನಕೇಶವ, ಕೆ. ವರದರಾಜು, ಬಿ. ಸತ್ಯನಾರಾಯಣ (ನಾಣಿ), ವಿಶ್ವನಾಥ್ (ವಿಶ್ವ), ಭಾಸ್ಕರ್ ನಾಯ್ಡು, ರಾಮಮೂರ್ತಿ ಮುಂತಾದ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಮತವನ್ನು ನೀಡುವ ಮೂಲಕ, ಹಾಲಿ ಶಾಸಕರಾಗಿ ಶಿಕ್ಷಣ ಕ್ಷೇತ್ರದಲ್ಲಿ, ವೈದ್ಯಕೀಯ ಸೌಲಭ್ಯ ಒದಗಿಸುವಲ್ಲಿ , ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಲ್ಲಿ ಮಾಡಿರುವ ಮಾದರಿ ಅಭಿವೃದ್ಧಿ ಕೆಲಸಗಳಿಗೆ ಹಾಗೂ ರಾಜ್ಯ ಮಟ್ಟದಲ್ಲಿ ಸಚಿವರಾಗಿ ಮಾಡಿರುವ ಅನೇಕ ಪ್ರಗತಿಪರ ಯೋಜನೆಗಳ ಅನುಷ್ಠಾನ ಹಾಗೂ ನೀಡಿರುವ ದಕ್ಷ ಆಡಳಿತವನ್ನು ಪರಿಗಣಿಸಿ ಹಾಗೂ ಪ್ರಧಾನಿ ಮೋದಿ ಅವರ ಬಲಿಷ್ಠ ಭಾರತದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ , ಭವ್ಯ ಭಾರತ ನಿರ್ಮಾಣಕ್ಕಾಗಿ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕೆಂದು ಕಾರ್ಯಕರ್ತರಾಧಿಯಾಗಿ ಎಲ್ಲರೂ ಮತದಾರರಲ್ಲಿ ವಿನಂತಿಸುತ್ತಾ ಪಾದಯಾತ್ರೆಯಲ್ಲಿ ಸಚಿವರ ಜೊತೆಗೂಡಿದ್ದರು.

0 Comments