Ticker

6/recent/ticker-posts

Ad Code

Responsive Advertisement

ಸಚಿವ ಮುನಿರತ್ನರವರಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ

  ಬೆಂಗಳೂರು : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 132 ನೇ ಜಯಂತಿಯ ಹಿನ್ನೆಲೆಯಲ್ಲಿ,  ಇಂದು ಬೆಳಿಗ್ಗೆ ಯಶವಂತಪುರದ  ಸಂವಿಧಾನ ವೃತ್ತದಲ್ಲಿ (ಯಶವಂತಪುರ ವೃತ್ತ), ಸಚಿವರು ಹಾಗೂ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ  ಶಾಸಕರು ಆಗಿರುವ ಮುನಿರತ್ನರವರು ಡಾ. ಬಿ. ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವಾರ್ಪಣೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರು ಹಾಗೂ ಸ್ಲಂ ಮೋರ್ಚಾದ ಬೆಂಗಳೂರು ನಗರ ಉಪಾಧ್ಯಕ್ಷರು ವೇಲು ನಾಯ್ಕರ್,  ಮಾಜಿ ಬಿಬಿಎಂಪಿ ಸದಸ್ಯ  ವೆಂಕಟೇಶ್ (ಎನ್ ಟಿ ಆರ್), ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಸುನಂದ ಕೆ. ಬೋರೇಗೌಡ ಮುಂತಾದ ಇತರೆ ನಾಯಕರೊಂದಿಗೆ, ಪೌರ ಕಾರ್ಮಿಕರುಗಳು ಸಹ ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement