Ticker

6/recent/ticker-posts

Ad Code

Responsive Advertisement

ಅಂಬೇಡ್ಕರ್ ಪ್ರತಿಮೆಗೆ ಸಚಿವ ಡಾ. ಸಿ. ಎನ್. ಅಶ್ವಥನಾರಾಯಣರಿಂದ ಮಾಲಾರ್ಪಣೆ

ಬೆಂಗಳೂರು : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ರವರ 132 ನೇ ಜಯಂತಿಯ ಹಿನ್ನೆಲೆಯಲ್ಲಿ,  ಇಂದು ಬೆಳಿಗ್ಗೆ ಯಶವಂತಪುರದ ಸಂವಿಧಾನ ವೃತ್ತದಲ್ಲಿ (ಯಶವಂತಪುರ ವೃತ್ತ), ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರವರೊಂದಿಗೆ,

ಸಚಿವರು ಹಾಗೂ ಮಲ್ಲೇಶ್ವರಂ  ವಿಧಾನಸಭಾ ಕ್ಷೇತ್ರದ  ಶಾಸಕರು ಆಗಿರುವ ಡಾ. ಸಿ. ಎನ್. ಅಶ್ವಥನಾರಾಯಣರವರು ಡಾ. ಬಿ. ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವಾರ್ಪಣೆಯನ್ನು ಸಲ್ಲಿಸಿದರು. 

ಈ ಸಂದರ್ಭದಲ್ಲಿ ಸಮಾಜ ಸೇವಕರು ಹಾಗೂ ಬಿಜೆಪಿ ಮುಖಂಡರು ಶ್ರೀ ಸುರೇಶ್ ಗೌಡ್ರು, ಪದ್ಮಶ್ರೀ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಸಿ. ಎನ್. ಸತೀಶ್, ಮಾಜಿ ಬಿಬಿಎಂಪಿ ಸದಸ್ಯರುಗಳಾದ ಎನ್. ಜೈಪಾಲ್, ಮುನಿಸ್ವಾಮಿ ಗೌಡ್ರು, ಎಂ. ಸಿ.ಜೈಪ್ರಕಾಶ್,  ವೇಲು ನಾಯ್ಕರ್, ಬೆಂಗಳೂರು ವಿಶ್ವವಿದ್ಯಾಲಯದ ನಾಮ ನಿರ್ದೇಶಕರಾದ ಎಂ. ಚನ್ನಕೇಶವ, ಬೆಂಗಳೂರು ಉತ್ತರ ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ಮಂಜು ಪ್ರಕಾಶ್, ಬಿಜೆಪಿ ಮುಖಂಡರುಗಳಾದ ಡಾ. ರಾಜೇಶ್ ಮನ್ನಾರ್ ನಾಯ್ಡು, ಎಂ. ವಿಶ್ವನಾಥ್, ಬಿ. ಸತ್ಯನಾರಾಯಣ (ನಾಣಿ), ಕೆ. ವರದರಾಜು, ಸೂರಜ್ ನಾಯ್ಡು  ಆರ್., ಸ್ವಾಮಿನಾಥನ್, ಗೌತಮ್ ಚಂದ್ ಜೈನ್, ಚನ್ನಕೇಶವಮೂರ್ತಿ ಮುಂತಾದ ಇತರೆ ನಾಯಕರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು  ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement