Ticker

6/recent/ticker-posts

Ad Code

Responsive Advertisement

ಯುವ ಭರತನಾಟ್ಯ ಕಲಾವಿದೆ ದೀಪ್ತಿ

ಭಾರತ ದೇಶದ ಸಂಸ್ಕೃತಿ ಸಂಪ್ರಾದಯದ ಪ್ರತೀಕವಾದ ಭರತನಾಟ್ಯ ಕಲೆಯನ್ನು ಉಳಿಸಿ, ಬೆಳಸಲು ಕುಮಾರಿ ದೀಪ್ತಿ.ಸಿ ಅದ್ಬುತವಾದ ಸಾಹಸ ಮಾಡುತ್ತಿದ್ದಾಳೆ.

ಮಮತ ಮತ್ತು ಚಿಕ್ಕಣ್ಣ ದಂಪತಿಯ ಮಗಳಾದ ಕುಮಾರಿ ದೀಪ್ತಿ.ಸಿ  ಏಳು  ವರ್ಷಗಳಿಂದ ವಿದೂಷಿ ರೇಖಾ ಜಗದೀಶ್ ರವರು ಬಳಿ ಶ್ರೀ ಲಲಿತಾ ಕಲಾ ನಿಕೇತನದಲ್ಲಿ ಭರತನಾಟ್ಯ ಕಲೆಯುತ್ತಿದ್ದಾಳೆ.

ಸತತ 7ವರ್ಷಗಳ ಭರತನಾಟ್ಯ ಕಲೆಯನ್ನು ಕುಮಾರಿ ದೀಪ್ತಿ.ಸಿ ಅಭ್ಯಾಸ ಪರಿಶ್ರಮದಿಂದ ಇಂದು ಅಂತರಾಷ್ಟ್ರಿಯ ಭರತನಾಟ್ಯ ಕಲಾವಿದೆಯಂದು ದೇಶದಲ್ಲಿ ಖ್ಯಾತಿ ಪಡೆದಿದ್ದಾಳೆ.



ನೇಪಾಳ, ಶಿರಡಿ, ಮಂತ್ರಾಲಯ ಹಾಗೂ ಹಂಪಿ ಉತ್ಸವ ದೇಶ, ವಿದೇಶಗಳಲ್ಲಿ ದೀಪ್ತಿ ತನ್ನ ಭರತನಾಟ್ಯ ಪ್ರದರ್ಶನ ನೀಡಿ ಜನರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಹಾಗೂ ಅಖಿಲ ಭಾರತ ಗಂದರ್ವ ಮಹಾವಿಶ್ವವಿದ್ಯಾಲಯ ಮಂಡಳಿ ಮಧ್ಯಮ ಪರೀಕ್ಷೆಯನ್ನು ಉತ್ತಮ ಅಂಕಗಳಿಂದ ತೇಗರ್ಡೆಯಾಗಿದ್ದಾಳೆ.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಎಂತೆ  ತಂದೆ,ತಾಯಿ ಮತ್ತು ಗುರುಗಳ ಮಾರ್ಗದರ್ಶನ ಸಹಕಾರದಿಂದ ನೂರಾರು ಪ್ರದರ್ಶನ ದೀಪ್ತಿ.ಸಿ ನೀಡಿರುತ್ತಾಳೆ.

ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ಜಿಲ್ಲಾ ಪಂಚಾಯತ್  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ  ಮಕ್ಕಳ ದಿನಾಚರಣೆ ಪ್ರಯುಕ್ತ ಹೊಯ್ಸಳ- 2023ರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೆಳದಿ ಚನ್ನಮ್ಮ ಪ್ರಶಸ್ತಿ ಅಸಾಧಾರಣ ಸಾಧನೆ ಮಾಡಿರುವ  ಪ್ರತಿಭಾವಂತ ಭರತನಾಟ್ಯ ಕಲಾವಿದೆ ದೀಪ್ತಿ.ಸಿ ರವರಿಗೆ ನೀಡಿ ಸನ್ಮಾನಿಸಲಾಯಿತು.

Post a Comment

0 Comments

Ad Code

Responsive Advertisement