Ticker

6/recent/ticker-posts

Ad Code

Responsive Advertisement

ಅಕ್ಷಯ ತೃತೀಯಾ ದಿನದಂದು ಶ್ರೀ ರಾಯರ ಬೃಂದಾವನಕ್ಕೆ "ಶ್ರೀಗಂಧ ಲೇಪನ"ಕ್ಕಾಗಿ ಸಿದ್ಧತೆ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರ ಆಚಾರ್ಯರ ಹಾಗೂ ಜಿ. ಕೆ. ಆಚಾರ್ಯರ ನೇತೃತ್ವದಲ್ಲಿ  23-4-2023 ಭಾನುವಾರ "ಅಕ್ಷಯ ತೃತೀಯಾ" ದಿನದಂದು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಶ್ರೀಗಂಧ ಲೇಪನದ ಅಲಂಕಾರವನ್ನು ಮಾಡಲಾಗುವುದು. ವಿಶೇಷವಾಗಿ ಶ್ರೀ  ಗಂಧಲೇಪನ ಸೇವೆಯನ್ನು ಮಾಡಿಸುವಂತಹ ಭಕ್ತರು ಆನ್ಲೈನ್ ಈ 9449133929 ನಂಬರ್ ವಾಟ್ಸಾಪ್ ಮುಖಾಂತರ ಶ್ರೀ ಗಂಧ ಲೇಪನದ ಅಲಂಕಾರದ ಸೇವೆಯಲ್ಲಿ ಭಾಗವಹಿಸಿ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು. 

ಈ ದಿನ ಸಂಜೆ 6-30ಕ್ಕೆ ಐಶ್ವರ್ಯ ಮಹೇಶ್ ಮತ್ತು ವೃಂದದಿಂದ "ದಾಸವಾಣಿ" ಕಾರ್ಯಕ್ರಮವು ನೆರವೇರುವುದು.

ಹೆಚ್ಚಿನ ಮಾಹಿತಿಗಾಗಿ - 9945429129-9448847586- 08022443962 - ಶ್ರೀ ಗಂಧದ ಲೇಪನ ಸೇವೆಯಲ್ಲಿ ಭಾಗವಹಿಸಿದ ಭಕ್ತರಿಗೆ ಶ್ರೀಗಂಧದ ಪ್ರಸಾದವನ್ನು ಮಾರನೇ ದಿನ 24--4-2023 ರಂದು ವಿತರಿಸಲಾಗುವುದು.

Post a Comment

0 Comments

Ad Code

Responsive Advertisement