ಬಿಜೆಪಿ ನಾಯಕರು ನನಗೆ ನಡೆಸಿಕೊಂಡಿರುವ ರೀತಿ ನೋಡಿ ನನಗೆ ಶಾಕ್ ನೀಡಿದೆ. ಓರ್ವ ಹಿರಿಯ ನಾಯಕನಿಗೆ ಹೀಗೆ ಮಾಡಿದರೆ ಏನು ಹೇಳಬೇಕು ಅಂತ ಅರ್ಥವಾಗುತ್ತಿಲ್ಲ. ನಾಳೆ ನಾನು ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಪಕ್ಷದ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಶೆಟ್ಟರ್ ಹೇಳಿದ್ದಾರೆ.
ನಾಳೆ ಯಾವ ಪಕ್ಷದೊಂದಿಗೆ ' ಕೈ ' ಜೋಡಿಸಲಿದ್ದಾರೆ ಎಂು ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ ...
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಳಿಕ ಬಿಜೆಪಿ ಪಕ್ಷಕ್ಕೂ ಕೂಡ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಘೋಷಣೆ ಮಾಡಿದ್ದಾರೆ. ಸಿಎಂ ಬೊಮ್ಮಾಯಿ, ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರೊಂದಿಗೆ ನಡೆದ ಸಂಧಾನ ಸಭೆ ವಿಫಲವಾದ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್,
ನನ್ನನ್ನು ಬಿಜೆಪಿ ನಾಯಕರು ನಡೆಸಿಕೊಂಡಿರುವ ರೀತಿ ನನಗೆ ಶಾಕ್ ನೀಡಿದೆ. ಓರ್ವ ಹಿರಿಯ ನಾಯಕನಿಗೆ ಹೀಗೆ ಮಾಡಿದರೆ ಏನು ಹೇಳಬೇಕು ಅಂತ ಅರ್ಥವಾಗುತ್ತಿಲ್ಲ. ನನಗೆ ಯಾವುದೇ ಸಚಿವ ಸ್ಥಾನ, ಸಿಎಂ ಸ್ಥಾನ, ಉನ್ನತ ಸ್ಥಾನವನ್ನು ಕೇಳುವುದಿಲ್ಲ. ನನಗೆ ಕ್ಷೇತ್ರದ ಜನರ ಸೇವೆ ಮಾಡಲು ಕೇವಲ ಶಾಸಕನಾಗಿ ಇರುತ್ತೇನೆ ಎಂದು ಮನವಿ ಮಾಡಿದರು ಅವರು ಒಪ್ಪಿಗೆ ಸೂಚಿಸಿಲ್ಲ. ಇದರಿಂದ ನನ್ನ 40 ವರ್ಷಗಳ ರಾಜಕೀಯ ದಿನದಲ್ಲಿ ಕರಾಳ ದಿನವಾಗಿದೆ. ನಾನು ಇಂದು ಚುನಾವಣೆಗೆ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ. ನಾಳೆ ನಿಮಗೆ ಖಚಿತ ಮಾಹಿತಿ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ .
ಒಟ್ಟಾರೆ ಭಾಜಪ ಸ್ಥಿತಿ ಮಾಜಿ ಮುಖ್ಯ ಮಂತ್ರಿ ಶೆಟ್ಟರ್ ಹಾಗೂ ಮಾಜಿ ಉಪ ಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ ಅವರು ಗಳ ತಲೆ ದಂಡ ಆದಂತೆ ಆಗಿದೆ ..

0 Comments